ಮಾಸ್ಕ್ ಧರಿಸಲು ನಿರಾಕರಿಸಿದ ಮಗನನ್ನೇ ಹತ್ಯೆಗೈದ ತಂದೆ..!

ಬೆಂಗಳೂರು ವಿಶೇಷ ಸುದ್ದಿ

ಚಂದ್ರವಳ್ಳಿ ನ್ಯೂಸ್ ಬೆಂಗಳೂರು

ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳನ್ನು ತರಲೆಂದು ಹೊರಗೆ ಹೋಗುವ ಸಂದರ್ಭದಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ ಮಗನನ್ನು ಹತ್ಯೆಗೈದ ಘಟನೆ ಶನಿವಾರ ಉತ್ತರ ಕೊಲ್ಕತ್ತಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮಗನನ್ನು ಹತ್ಯೆಗೈದ ಆರೋಪಿ ಬನ್ಸಿಧರ್ ಮಲ್ಲಿಕ್ (75) ಎಂದು ಗುರುತಿಸಲಾಗಿದ್ದು ಆತನ ಮಗ ಶಿರ್ಷೆಂದು ಮಲ್ಲಿಕ್ (45) ವಿಕಲಚೇತನನಾಗಿದ್ದ ಎನ್ನಲಾಗಿದೆ. ಮಗನನ್ನು ಹತ್ಯೆಗೈದ ನಂತರ ಬನ್ಸಿಧರ್ ಮಲ್ಲಿಕ್ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಮನೆಯಲ್ಲಿ ತಂದೆ ಮತ್ತು ಮಗನ ಮಧ್ಯ ಕಳೆದ ಕೆಲವು ದಿನಗಳಿಂದ ಮಾಸ್ಕ್ ಧರಿಸುವ ವಿಚಾರಕ್ಕೆ ಅಗಿಂದ್ದಾಗೆ ಕಲಹಗಳಾಗುತ್ತಿದ್ದವು. ಪ್ರತಿ ಬಾರಿ ಮನೆಯಿಂದ ಹೊರಗಡೆ ತೆರಳುವಾಗ ತಂದೆ ಮಗನಿಗೆ ಮಾಸ್ಕ್ ಧರಿಸುವಂತೆ ಹೇಳುತ್ತಿದ್ದರು. ಆದರೆ ಮಗ ಅದನ್ನು ತಿರಸ್ಕರಿಸುತ್ತಾನೆ. ಈ ಜಗಳ ವಿಕೊಪಕ್ಕೆ ತಿರುಗಿ ಶನಿವಾರ ಮಗನ ಹತ್ಯೆಯಲ್ಲಿ ಅಂತ್ಯವಾಗಿದೆ.

What’s your Reaction?
+1
0
+1
0
+1
0
+1
0
+1
0
+1
0
+1
0