ನಗರಸಭೆ ಪೌರಾಯುಕ್ತರ ದುರಾಡಳಿತದ ವಿರುದ್ದ ನಗರಸಭಾ ಸದಸ್ಯರು ಗರಂ..

ಜಿಲ್ಲಾ ಸುದ್ದಿ ಹಿರಿಯೂರು

ಹಿರಿಯೂರು

ನಗರದಲ್ಲಿ ಕೊರೊನಾ ಸೋಂಕು ಅಂಗವಾಗಿ ಹೇರಲಾಗಿದ್ದ ಲಾಕ್ ಡೌನ್ ದಿನಗಳಿಂದ ಸ್ವಚ್ಛತೆ ಬಗ್ಗೆ ಪೌರಾಯುಕ್ತರು ಗಮನ ಹರಿಸಿಲ್ಲ ಹಾಗೂ ನಗರದ ಪ್ರಮುಖ ಸಮಸ್ಯೆ ನಗರ ಸ್ವಚ್ಛತೆ ಬಗ್ಗೆ ಗಮನ ಹರಿಸದೇ ಪೌರಕಾರ್ಮಿಕರ ಕೊರತೆ ಇದ್ದು ನಗರದ ಮಾಲಿನ್ಯ ಕಾರ್ಯಾದ ಬಗ್ಗೆ ಅಸಡ್ಡೆ ಕ್ರಮವಹಿಸುತ್ತಿದ್ದು ಕೂಡಲೇ ಇವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ದೂರಿನ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಪ್ರಮುಖ ಬೀದಿಗಳಲ್ಲಿ, ನಗರದ ಹೃದಯ ಭಾಗಗಳಲ್ಲಿ ಕಸದ ರಾಶಿ ರಾಶಿ ಕಂಡು ಬಂದಿರುತ್ತದೆ. ಹಂದಿಗಳ ಹಾವಳಿ, ಬೀದಿ ನಾಯಿಗಳ ಹಾವಳಿ ಜಾಸ್ತಿ ಇದೆ. ಈ ಬಗ್ಗೆ ಅನೇಕ ಭಾರಿ ಪತ್ರಿಕೆಗಳಲ್ಲಿ ಮತ್ತು ಮೊಬೈಲ್ ವಾಟ್ಸಾಪ್‌ಗಳಲ್ಲಿ ತಿಳಿಸಿದ್ದಾಗ್ಯೂ ಕ್ರಮವಹಿಸಿರುವುದಿಲ್ಲ.

ತಾಲ್ಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್‌ ವಾರ್ಡ್ ನಂ ೨೨ ಕ್ಕೆ ಭೇಟಿ ನೀಡಿ ವಾರ್ಡಿನ ಸ್ವಚ್ಚತೆ ಬಗ್ಗೆ ಮತ್ತು ಇತರೆ ಅಗತ್ಯ ಮೂಲಭೂತ ಸೌಕರ್ಯಗಳ ಬಗ್ಗೆ ಕ್ರಮವಹಿಸಲು ಪೌರಾಯುಕ್ತರಿಗೆ ೨೪ ಅಂಶಗಳನ್ನೋಳಗೊಂಡ ಪತ್ರದ ಮುಖೇನ ಮುಂಜಾಗ್ರತೆ ಕ್ರಮಕೈಗೊಳ್ಳಲು ತಿಳಿಸಿದ್ದರೂ ತಹಸೀಲ್ದಾರವರಿಗೆ ನೀವು ನನಗೆ ಆದೇಶ ಮಾಡುವ ಅಧಿಕಾರ ನಿಮಗೆ ಇರುವುದಿಲ್ಲ ಎಂದೂ ಪೌರಾಯುಕ್ತರು ಮರು ಉತ್ತರ ನೀಡಿರುತ್ತಾರೆ.

ಯಾವುದೇ ರೀತಿಯ ಕೆಲಸ ಕಾರ್ಯಗಳು ನಗರಸಭೆ ವ್ಯಾಪ್ತಿಯೊಳಗೆ ನಡೆಯುತ್ತಿಲ್ಲ. ಇವರೊಬ್ಬ ಉದ್ದಟತನದ ಅಧಿಕಾರಿಯಾಗಿದ್ದು ಕೂಡಲೇ ಇವರನ್ನು ಬೇರೆಡೆಗೆ ವರ್ಗಾಯಿಸುವಂತೆ ಜಿ.ಎಸ್.ಟಿ ತಿಪ್ಪೇಸ್ವಾಮಿ, ಚಿತ್ರಜಿತ್ ಯಾದವ್, ಗುಂಡೇಶ್ ಕುಮಾರ್, ಇಂಯ್ತಿಯಾಜ್, ಶಂಶುಉನ್ನೀಸಾ, ಮಮತ.ಎನ್, ಅನಿಲ್ ಕುಮಾರ್, ಕವಿತ ಲೋಕೇಶ್, ಈ.ಮಂಜುನಾಥ್, ಎಸ್.ಪಿ.ಟಿ.ದಾದಾಪೀರ್, ಲಲಿತಮ್ಮ, ಸಮೀವುಲ್ಲಾ, ಬಿ.ಎನ್. ಪ್ರಕಾಶ್, ವೈ.ಪಿ.ಡಿ.ದಾದಾಪೀರ್, ಎಲ್.ಜಿ.ರತ್ನಮ್ಮ, ಅಜಯ್ ಕುಮಾರ್, ಸುರೇಖಾ, ಈರಲಿಂಗೇಗೌಡ, ಮದಲಮೇರಿ, ಸಣ್ಣಪ್ಪ, ದೇವೀರಮ್ಮ, ಮಂಜುಳಮ್ಮ ಮತ್ತಿತರರು ಆಗ್ರಹಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0