ಪದವೀಧರರ ಕ್ಷೇತ್ರದ ಚುನಾವಣೆ-ಬಹಿರಂಗ ಪ್ರಚಾರಕ್ಕೆ ತೆರೆ- ಬುಧವಾರ ಮತದಾನ…

ಜಿಲ್ಲಾ ಸುದ್ದಿ ರಾಜಕೀಯ ಹಾವೇರಿ

ಹಾವೇರಿ: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‍ಗೆ ಇದೇ ಅಕ್ಟೋಬರ್ 28 ರಂದು ಬುಧವಾರ ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಸುಗಮ ಮತದಾನಕ್ಕಾಗಿ 37 ಮತಗಟ್ಟೆಗಳನ್ನು ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಕೋವಿಡ್ ಪ್ರಮಾಣಿಕೃತ ಮಾರ್ಗಸೂಚಿಯಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಹಾಗೂ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಂಡಿದೆ.
ತಾಲೂಕು ಮತ್ತು ಹೋಬಳಿ ಕೇಂದ್ರದಲ್ಲಿ ಮತಗಟ್ಟೆಗಳು ಗುರುತಿಸಲಾಗಿದೆ. ಮತಗಟ್ಟೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಎಸ್‍ಓಪಿ ಮಾರ್ಗಸೂಚಿಯಂತೆ ಪ್ರತಿ ಮತಗಟ್ಟೆಗೂ ಸ್ಯಾನಿಟೈಸರ್, ಮಾಸ್ಕ್, ಪಲ್ಸ್ ಆಕ್ಸಿಮೀಟರ್, ಹ್ಯಾಂಡ್‍ಗ್ಲೌಸ್, ಪಿಪಿಇ ಕಿಟ್ ಒದಗಿಸಲಾಗಿದೆ. ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿದಂತೆ 209 ಜನರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೆಲ್ತ್‍ಡೆಸ್ಕ್ ಸ್ಥಾಪಿಸಲಾಗಿದ್ದು, ಆರೋಗ್ಯ ಸಿಬ್ಬಂದಿ, ವೈದ್ಯರನ್ನು ನಿಯೋಜಿಸಲಾಗಿದೆ.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯವು ಜಿಲ್ಲೆಯ ಎಲ್ಲ ತಹಶೀಲ್ದಾರಗಳ ಕಚೇರಿಯಲ್ಲಿ ನಡೆಯಲಿದೆ. ಪ್ರತಿ ಮತದಾರರಿಗೆ ಮಾಸ್ಕ್ ಹಾಗು ಪ್ರತ್ಯೇಕ ನೇರಳೆ ಬಣ್ಣದ ಸ್ಕೆಚ್ ಪೆನ್ ಒದಗಿಸಲಾಗುವುದು. ಬ್ಯಾಲೆಟ್ ಪೇಪರ್ ನೀಡಲಾಗುವುದು, ಮತದಾರರು ನೇರಳೆ ಬಣ್ಣದ ಸ್ಕೆಚ್ ಪೆನ್ ಬಳಸಿ ಕಡ್ಡಾಯವಾಗಿ ಅಂಕಿಗಳನ್ನು ನಮೂದಿಸುವುದರ ಮೂಲಕ ಮತ ಚಲಾಯಿಸಬೇಕು. (ರೋಮನ್ ಅಂಕಿ, ಇಂಗ್ಲೀಷ್ ಅಥವಾ ಕನ್ನಡ ಅಂಕಿ ಬಳಬಹುದು. ಆದರೆ ಅಂಕಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಚಿಹ್ನೆ ಅಥವಾ ಅಕ್ಷರ ಬರವಣಿಗೆಯಲ್ಲಿ ಮತ ಚಲಾಯಿಸುವಹಾಗಿಲ್ಲ).
ಜಿಲ್ಲೆಯಲ್ಲಿ 37 ಮತಗಟ್ಟೆ: ಬ್ಯಾಡಗಿ ತಾಲೂಕಿನ ಬ್ಯಾಡಗಿ ಪಟ್ಟಣದಲ್ಲಿ ಎರಡು ಹಾಗೂ ಕಾಗಿನೆಲೆಯಲ್ಲಿ ಒಂದು, ಹಾನಗಲ್ ತಾಲೂಕಿನ ಹಾನಗಲ್ ನಗರದಲ್ಲಿ ಎರಡು, ತಿಳವಳ್ಳಿ, ಅಕ್ಕಿಆಲೂರು ಹಾಗೂ ಬೊಮ್ಮನಹಳ್ಳಿಯಲ್ಲಿ ತಲಾ ಒಂದು, ಹಾವೇರಿ ತಾಲೂಕಿನ ಹಾವೇರಿ ನಗರದಲ್ಲಿ ನಾಲ್ಕು, ಗುತ್ತಲ ಹಾಗೂ ಕರ್ಜಗಿಯಲ್ಲಿ ತಲಾ ಒಂದು, ಹಿರೇಕೆರೂರು ತಾಲೂಕಿನ ಹಿರೇಕೆರೂರು ಹಾಗೂ ರಟ್ಟಿಹಳ್ಳಿಯಲ್ಲಿ ತಲಾ ಎರಡು ಹಾಗೂ ಹಂಸಭಾವಿ ಮತ್ತು ಹೊಸಕಟ್ಟಿಯಲ್ಲಿ ತಲಾ ಒಂದು, ಸವಣೂರ ತಾಲೂಕಿನ ಸವಣೂರ ಹಾಗೂ ಹತ್ತಿಮತ್ತೂರ ತಲಾ ಒಂದು, ಶಿಗ್ಗಾಂವಿ ನಗರದಲ್ಲಿ ಎರಡು, ದುಂಡಶಿ ಹಾಗೂ ಬಂಕಾಪುರದಲ್ಲಿ ತಲಾ ಒಂದು, ರಾಣೇಬೆನ್ನೂರ ತಾಲೂಕಿನ ರಾಣೇಬೆನ್ನೂರ ನಗರದಲ್ಲಿ ಆರು, ಹಲಗೇರಿಯಲ್ಲಿ ಎರಡು, ಮೆಡ್ಲೇರಿ ಹಾಗೂ ಕೊಡಿಯಾಳದಲ್ಲಿ ತಲಾ ಒಂದು ಮತಗಟ್ಟೆಗಳನ್ನು ತೆರೆಯಲಾಗಿದೆ.
ಮತದಾರರ ಸಂಖ್ಯೆ: ಜಿಲ್ಲೆಯಲ್ಲಿ 16,052 ಪುರುಷ, 7218 ಮಹಿಳಾ ಹಾಗೂ ನಾಲ್ಕು ಇತರೆ ಮತದಾರರು ಸೇರಿ 23,274 ಮತದಾರರಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 1170 ಪುರುಷ ಹಾಗೂ 502 ಮಹಿಳಾ ಮತದಾರರು ಸೇರಿ 1672, ಹಾನಗಲ್ ತಾಲೂಕಿನಲ್ಲಿ 2671 ಪುರುಷ ಹಾಗೂ 1309 ಮಹಿಳಾ ಮತದಾರರು, ಇತರೆ ಓರ್ವರು ಸೇರಿ 3244, ಹಾವೇರಿ ತಾಲೂಕಿನಲ್ಲಿ 2671 ಪುರುಷ ಹಾಗೂ 139 ಮಹಿಳಾ ಮತದಾರರು, ಇತರೆ ಓರ್ವರು ಸೇರಿ 3981, ಹಿರೇಕೆರೂರು ತಾಲೂಕಿನಲ್ಲಿ 2727 ಪುರುಷ ಹಾಗೂ 1075 ಮಹಿಳಾ ಮತದಾರರು ಇತರೆ ಓರ್ವರು ಸೇರಿ 3803, ಸವಣೂರ ತಾಲೂಕಿನಲ್ಲಿ 903 ಪುರುಷ ಹಾಗೂ 229 ಮಹಿಳಾ ಮತದಾರರು ಸೇರಿ 1132, ಶಿಗ್ಗಾಂವ ತಾಲೂಕಿನಲ್ಲಿ 1200 ಪುರುಷ ಹಾಗೂ 440 ಮಹಿಳಾ ಮತದಾರರು, ಇತರೆ ಓರ್ವರು ಸೇರಿ 1641 ಹಾಗೂ ರಾಣೇಬೆನ್ನೂರು ತಾಲೂಕಿನಲ್ಲಿ 5067 ಪುರುಷ ಹಾಗೂ 2734 ಮಹಿಳಾ ಮತದಾರರು ಸೇರಿ 7801 ಮತದಾರರಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ