ಮಾವಿನ ತೋಟದ ರೈತರಿಗೆ ಮಹತ್ವದ ಮಾಹಿತಿ, ಹೂ ಬಿಡಲಿರುವ ಮಾವಿನ ತೋಟಗಳಲ್ಲಿ ಕೈಗೊಳ್ಳಬೇಕಾಗಿರುವ ಸಸ್ಯ ಸಂರಕ್ಷಣೆ ಕ್ರಮಗಳು…

ಕೋಲಾರ ಜಿಲ್ಲಾ ಸುದ್ದಿ ವಿಜ್ಞಾನ ವಿಶೇಷ ಸುದ್ದಿ

ಮಾವಿನ ತೋಟದ ರೈತರಿಗೆ ಮಹತ್ವದ ಮಾಹಿತಿ, ಹೂ ಬಿಡಲಿರುವ ಮಾವಿನ ತೋಟಗಳಲ್ಲಿ ಕೈಗೊಳ್ಳಬೇಕಾಗಿರುವ ಸಸ್ಯ ಸಂರಕ್ಷಣೆ ಕ್ರಮಗಳು…

ಕೋಲಾರ:

ಕೋಲಾರ ಜಿಲ್ಲೆಯಲ್ಲಿ ಮಾವು ಬೆಳೆಯಲ್ಲಿ ಚಿಗುರು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಎಲೆ ತಿನ್ನುವ ಕೀಟ, ಜಿಗಿಹುಳು, ಕುಡಿ ಕೊರಕ ಇತ್ಯಾದಿ ಕೀಟಗಳ ಹತೋಟಿಗಾಗಿ ರೈತರು ಈ ಕೆಳಕಂಡ ಸಸ್ಯ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬಹುದು. ಪ್ರಥಮ ಸಿಂಪರಣೆ:- ಹೂ ಬಿಡುವ ನಿಕಟ ಪೂರ್ವ ಮತ್ತು ಹೂತೆನೆ ಹೊರ ಬರುವ ಹಂತ (Pre-flowering and inflorescence initiation stage)
ಸಿಂಪರಣಾ ಔಷಧಿ: ಲಾಂಬ್ಡಾಸೈಹ್ಯಾಲೋಥ್ರಿನ್ (Lambda cyhalothrin) 5% ಇಅ- 0.6 ಮಿ.ಲಿ./ಲೀ., ನೀರಲ್ಲಿ ಕರುವ ಗಂಧಕ (Wettable sulphur)80 WP -3 ಗ್ರಾಂ./ಲೀ ಅಥವಾ ಇಮಿಡಾಕ್ಲೋಪ್ರಿಡ್ (Imidacloprid) 17.8% Sಐ- 0.3 ಗ್ರಾಂ./ಲೀ. ನೀರಲ್ಲಿ ಕರಗುವ ಗಂಧಕ (Wettable sulphur) 80 WP -3 ಗ್ರಾಂ./ಲೀ.
ಈ ಹಂತದಲ್ಲಿ ಔಷಧಿಗಳ ಸಿಂಪರಣೆಯಿಂದ ಕೀಟ ರೋಗಗಳ ನಿಯಂತ್ರಣವಾಗುವುದರ ಜೊತೆಗೆ ಮುಂದಿನ ಹಂತದಲ್ಲಿ ಅವು ಉಲ್ಬಣಗೊಳ್ಳುವುದನ್ನು ತಪ್ಪಿಸುತ್ತದೆ. ಇಲ್ಲದಿದ್ದರೆ ಕಾಯಿ ಕಚ್ಚುವಿಕೆ ಕುಂಠಿತಗೊಂಡು ಇಳುವರಿಗೆ ತೀವ್ರ ಧಕ್ಕೆಯಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7829512236 ತೋಟಗಾರಿಕೆ ಉಪ ನಿರ್ದೇಶಕರು ಹಾಗೂ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಕೋಲಾರ ರವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0