ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ನಿಷೇಧ, ಹೊರಗಿನ ಸಾರ್ವಜನಿಕರು ಹಾಗೂ ಭಕ್ತಾಧಿಗಳಿಗೂ ನಿಷೇಧ….

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ವಿಶೇಷ ಸುದ್ದಿ ಹಬ್ಬಗಳು

ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ನಿಷೇಧ, ಹೊರಗಿನ ಸಾರ್ವಜನಿಕರು ಹಾಗೂ ಭಕ್ತಾಧಿಗಳಿಗೂ ನಿಷೇಧ….

ಚಿತ್ರದುರ್ಗ:

ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಕೋವಿಡ್-19 ವೈರಾಣು ಹರಡದಂತೆ ತಡೆಯುವ ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 22 ರಿಂದ ಎಪ್ರಿಲ್ 5 ರವರೆಗೆ ನಡೆಯಬೇಕಾಗಿದ್ದ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿಯ ಜಾತ್ರೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ.
 ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಕೋವಿಡ್-19 ವೈರಾಣು ಹರಡದಂತೆ ತಡೆಯುವ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಹಾಗೂ ಭಕ್ತಾಧಿಗಳಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ.
 ಜಾತ್ರಾ ಮಹೋತ್ಸವಕ್ಕೆ ಹೊರಗಡೆಯಿಂದ ಸಾರ್ವಜನಿಕರು ಹಾಗೂ ಭಕ್ತಾಧಿಗಳು ಬರುವುದನ್ನು ಜಿಲ್ಲಾಡಳಿತವು ನಿಷೇಧಿಸಿದೆ. ಜಾತ್ರೆಯು ರದ್ದಾದ ಪ್ರಯುಕ್ತ ನಾಯಕನಹಟ್ಟಿಯಲ್ಲಿ ಜಾತ್ರೆಯ ಸಂಬಂಧ ಯಾವುದೇ ಅನ್ನ ದಾಸೋಹ (ಪರವು) ಇರುವುದಿಲ್ಲ. ಅಂಗಡಿ ಮುಂಗಟ್ಟುಗಳು, ಜಾತ್ರಾ ಸಾಮಾಗ್ರಿಗಳು, ವಾಣಿಜ್ಯ ಮಳಿಗೆಗಳನ್ನು ಹಾಕಲು ಅನುಮತಿ ಇರುವುದಿಲ್ಲ. ನಾಯಕನಹಟ್ಟಿ ಪಟ್ಟಣದ ಸುತ್ತ ಮುತ್ತಲಿನ ಹೊಲಗದ್ದೆ, ಕಪಿಲೆಗಳಲ್ಲಿ ವಸತಿ ಅಥವಾ ಟೆಂಟ್ ಹಾಕಿ ಅಡುಗೆ ಹರಕೆಯ ಪರವು ಮಾಡುವುದನ್ನು ನಿಷೇಧಿಸಿದೆ. ಭಕ್ತಾದಿಗಳಿಗೆ ನೀರು, ಶೌಚಾಲಯ ಒಳಗೊಂಡಂತೆ ಇನ್ನಿತರೆ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ನಾಯಕನಹಟ್ಟಿ ಸುತ್ತ ಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಮದ್ಯಪಾನ ಮಾರಾಟ ಸರಬರಾಜು ಹಾಗೂ ಪ್ರಾಣಿ ಬಲಿ ಮಾಡುವುದನ್ನು ನಿಷೇಧಿಸಲಾಗಿದೆ. ಹೊರಗಡೆಯಿಂದ ಬರುವ ಎತ್ತಿನ ಬಂಡಿ, ಟ್ರ್ಯಾಕ್ಟರ್, ಬಸ್ಸು, ಕಾರು, ಮೋಟಾರ್ ಸೈಕಲ್ ಹಾಗೂ ಇನ್ನಿತರೆ ಗೂಡ್ಸ್ ವಾಹನಗಳಿಗೆ ಮತ್ತು ಸಾರ್ವಜನಿಕರು, ಭಕ್ತಾಧಿಗಳಿಗೆ ಮಾರ್ಚ್ 22 ರಿಂದ ಏಪ್ರಿಲ್ 5 ರವರೆಗೆ ಜರುಗುವ ವಾರ್ಷಿಕ ಜಾತ್ರೆ ಸಲುವಾಗಿ ನಾಯಕನಹಟ್ಟಿ ಪಟ್ಟಣಕ್ಕೆ ಪ್ರವೇಶ ಇರುವುದಿಲ್ಲ ಎಂದು ಚಳ್ಳಕೆರೆ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ