ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜೀವಾಧಿ ಶಿಕ್ಷೆ…

ಕೈಂ ನ್ಯೂಸ್ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಸಾಧನೆ ಹಾವೇರಿ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜೀವಾಧಿ ಶಿಕ್ಷೆ…

ಹಾವೇರಿ:

ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಮಹಮ್ಮದಜಮೀರ ಗೌಸಮೋದಿನ ಮಿಯಾಬೇಗನವರ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ವ ಸತ್ರ ಎಫ್.ಟಿ.ಎಸ್.ಸಿ-1(ಪೊಕ್ಸೊ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್. ಜ್ಯೋತಿಶ್ರೀ ಅವರು ತೀರ್ಪು ನೀಡಿದ್ದಾರೆ.
ದೌರ್ಜನ್ಯಕ್ಕೊಳಗಾದ ಬಾಲಕಿ ದಿನಾಂಕ 15-10-2015 ರಂದು ಟ್ಯೂಷನ್ ಕ್ಲಾಸ್‍ನಿಂದ ಮನೆಗೆ ಹಿಂದಿರುಗುವ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ ಕುರಿತು ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಶಿಗ್ಗಾಂವ ಪೊಲೀಸ್ ವಿಭಾಗದ ಡಿ.ವೈ.ಎಸ್.ಪಿ.ವಿಜಯಕುಮಾರ ಆರ್. ಬಿಸನಳ್ಳಿ ಅವರು ತನಿಖೆ ನಡೆಸಿ ಆರೋಪಿತನ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಭಾ.ದಂ.ಸಂ. ಕಲಂ:376 ಐಪಿಸಿ ಮತ್ತು ಪೋಕ್ಸೋ ಅಧಿನಿಯಮ ಕಲಂ 6ರಡಿ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಡಗಳ ಮೇಲಿನ ದೌರ್ಜನ್ಯ ತಡೆ ಅಧಿನಿಯಮ-1989ರ ಅಡಿಯಲ್ಲಿ ಹೊರಿಸಲಾದ ಆಪಾದನೆ ರುಜುವಾತಾದ ಕಾರಣ ಆರೋಪಿ ಮಹಮ್ಮದಜಮೀರ ಗೌಸಮೋದಿನ ಮಿಯಾಬೇಗನವರ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.10,250 ದಂಡ ವಿಧಿಸಿ ತೀರ್ಪು ನೀಡಲಾಗಿದೆ ಎಂದು ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರಾದ ಸಿದ್ಧಾರೂಢ ಎಂ.ಗೆಜ್ಜಿಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ