ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಶಾಸಕರಾದ ಚಿದಾನಂದ್ ಎಂ ಗೌಡ ಹಾಗೂ ವೈ.ಎ ನಾರಾಯಸ್ವಾಮಿ ಆಹಾರ ಕಿಟ್ ಗಳ ವಿತರಣೆ….

ಕೋರೊನ ಕೋಲಾರ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಜಿಲ್ಲಾ ಸುದ್ದಿ ಸಾಧನೆ

ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಶಾಸಕರಾದ ಚಿದಾನಂದ್ ಎಂ ಗೌಡ ಹಾಗೂ ವೈ.ಎ ನಾರಾಯಸ್ವಾಮಿ ಆಹಾರ ಕಿಟ್ ಗಳ ವಿತರಣೆ….

ಕೋಲಾರ:

ಕೋಲಾರ ಜಿಲ್ಲೆಯ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ ಗೌಡ ಹಾಗೂ ವೈ.ಎ ನಾರಾಯಸ್ವಾಮಿ ಆಹಾರ ಕಿಟ್ ವಿತರಿಸಿದರು. 

ವಿಧಾನ ಪರಿಷತ್ ಶಾಸಕರುಗಳಾದ ಚಿದಾನಂದ್ ಎಂ ಗೌಡ, ವೈ.ಎ ನಾರಾಯಣಸ್ವಾಮಿ ಯವರು ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಶನಿವಾರ ಕೋಲಾರ ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಕೋವಿಡ್ ಸಂಕಷ್ಟದಲ್ಲಿರುವ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಆಹಾರ ಕಿಟ್ ಗಳನ್ನು ವಿತರಿಸಿದರು.

ಸಮಾಜದ ಎಲ್ಲಾ ಸಮಸ್ಯೆಗಳಿಗೆ ಗುಣಾತ್ಮಕ ಶಿಕ್ಷಣವೊಂದೇ ಪರಿಹಾರ, ಜವಾಬ್ದಾರಿಯುತ ಶಿಕ್ಷಕನೊಬ್ಬನೇ ಸೂತ್ರಧಾರ..
ಆದರೆ ಇಂದು ಮಹಾಮಾರಿ ಕೊರೋನದಿಂದಾಗಿ ಅಟ್ಟಹಾಸದಿಂದ ಅನಿವಾರ್ಯವಾಗಿ ಶಾಲಾ ಕಾಲೇಜುಗಳು ಮುಚ್ಚಿರುವ ಕಾರಣ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ತಾಲ್ಲೂಕಿನ ಎಲ್ಲಾ ಖಾಸಗಿ ಶಾಲಾ ಶಿಕ್ಷಕರ/ ಉಪನ್ಯಾಸಕರಿಗೆ ವೇತನ ನೀಡಲು ಸಾಧ್ಯವಾಗದೆ ಪರಿತಪಿಸುತ್ತಿವೆ.
ಹಾಗಾಗಿ ಶಿಕ್ಷಕರುಗಳು ಆರ್ಥಿಕ ಸಂಕಷ್ಟದಲ್ಲಿರಿವುದನ್ನು ಗಮನಿಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವಿಶೇಷ 5000 ರೂಪಾಯಿಗಳ ಪ್ಯಾಕೇಜ್ ನೀಡಲು ಸಹಕರಿಸಿದ್ದಕ್ಕೆ ಶಿಕ್ಷಣ ಸಚಿವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸಿದರು.

ಎಲ್ಲಾ ಸಮಸ್ಯೆಗಳಿಗೆ ಸದಾ ಪೂರಕವಾಗಿ ಸ್ಪಂದಿಸಸುವ ಈ ಇಬ್ಬರು ವಿಧಾನ ಪರಿಷತ್ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಶಿಕ್ಷಕರಿಗೆ / ಉಪನ್ಯಾಸಕರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಮತ್ತು ಮೆಡಿಸಿನ್ ಕಿಟ್ ಗಳನ್ನು ನೀಡುವುದರ ಮೂಲಕ ಕೊರೋನಾ ಕಷ್ಟ ಕಾಲದಲ್ಲಿ ನೇರವಾಗಿದ್ದಾರೆ ಎಂದು ತಿಳಿಸಿದರು.

ಕೋಲಾರ ಜಿಲ್ಲೆಯ ಖಾಸಗಿ ಶಾಲಾ ಶಿಕ್ಷಕರ ಸಂಘದವರು ಶಾಸಕರಿಬ್ಬರನ್ನು ಸ್ಮರಿಸಿದರು. 

ಈ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಡಾ.ವೇಣುಗೋಪಾಲ್, ವೈ.ಎ.ಎನ್ ಹಾಗೂ ಸಿಎಂಜಿ ಅಭಿಮಾನಿ ಬಳಗದ ಅಧ್ಯಕ್ಷ ಉದಯ್ ಕುಮಾರ್, ಎಸ್.ಬಿ ಮುನಿವೆಂಕಟಪ್ಪ, ಶ್ರೀ ಕೃಷ್ಣ, ಕೇಶವ್ ಪ್ರಸಾದ್, ವಿಜಯ್ ಕುಮಾರ್, ಮಾಗೇರಿ ನಾರಾಯಣಸ್ವಾಮಿ, ತಿಮ್ಮಪ್ಪ, ಚೌಡಪ್ಪ ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0