ಭೋವಿ ಸಮಾಜಕ್ಕೆ ಸಚಿವ ಸ್ಥಾನ ನೀಡಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ನೇಮಕ ಮಾಡುವಂತೆ ಸಿಎಂ ಅವರಲ್ಲಿ ಮನವಿ ಮಾಡಿ ಭೋವಿ ಗುರುಪೀಠದ ಇಮ್ಮಡಿ ಸ್ವಾಮೀಜಿ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ವಿಶೇಷ ಸುದ್ದಿ

ಭೋವಿ ಸಮಾಜಕ್ಕೆ ಸಚಿವ ಸ್ಥಾನ ನೀಡಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ನೇಮಕ ಮಾಡುವಂತೆ ಸಿಎಂ ಅವರಲ್ಲಿ ಮನವಿ ಮಾಡಿ ಭೋವಿ ಗುರುಪೀಠದ ಇಮ್ಮಡಿ ಸ್ವಾಮೀಜಿ…

ಬೆಂಗಳೂರು:

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಭೋವಿ ಸಮಾಜಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಚರ್ಚಿಸಿದರು.

ಭೋವಿ ಸಮಾಜದ ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಕೂಡಲೇ ಈಡೇರಿಸಬೇಕು. ಭೋವಿ ಸಮಾಜಕ್ಕೆ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಬೇಕು. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ನೇಮಕ ಮಾಡಬೇಕು. ಭೋವಿ ನಿಗಮಕ್ಕೆ ಪ್ರಾದೇಶಿಕ ನ್ಯಾಯದಡಿ ಕಲ್ಬುರ್ಗಿ ವಿಭಾಗ, ಬೆಳಗಾವಿ ವಿಭಾಗ, ಮೈಸೂರು ವಿಭಾಗ, ಬೆಳಗಾವಿ ವಿಭಾಗ ಹಾಗೂ ಮಧ್ಯಕರ್ನಾಟಕ ವಿಭಾಗಗಳಿಂದ ನಿರ್ದೇಶಕರ ನೇಮಕ ಮಾಡಬೇಕು. ಭೋವಿ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಬಿಡುಗಡೆ ಮಾಡುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು ಎಂದು ಮನವಿ ಮಾಡಿದರು.

ಭೋವಿ ಮತ್ತು ವಡ್ಡರಲ್ಲದ ಕೆಲವರು ಜಾತಿ ಪ್ರಮಾಣ ಪತ್ರ ದುರುಪಯೋಗ ಮಾಡಿಕೊಳ್ಳುತ್ತಿದ್ದು ಇದರ ತಡೆಗಾಗಿ ಭೋವಿ ಅಭಿವೃದ್ಧಿ ನಿಗಮವನ್ನು ಭೋವಿ – ವಡ್ಡರ ಅಭಿವೃದ್ಧಿ ನಿಗಮವೆಂದು ಹೆಸರು ಬದಲಾವಣೆ ಮಾಡುವಂತೆ ಸಿಎಂ ಅವರಲ್ಲಿ ಮನವಿ ಮಾಡಿದರು. 

ಚಿತ್ರದುರ್ಗ ವ್ಯಾಪ್ತಿಯ ವಿಶ್ವವಿದ್ಯಾಲಯದಲ್ಲಿ ಸಿದ್ಧರಾಮೇಶ್ವರ ಅಧ್ಯಯನ ಪೀಠ ಸ್ಥಾಪನೆ. ಭೋವಿ ಗುರುಪೀಠದಲ್ಲಿ ಭೋವಿ ಸಂಸ್ಕೃತಿ ಸಂಶೋಧನಾ ಕೇಂದ್ರ ಸ್ಥಾಪನೆ. ಭೋವಿ ಅಭಿವೃದ್ಧಿ ನಿಗಮದಿಂದ ಕಟ್ಟಡ ಕಾರ್ಮಿಕರು, ರೈತ ಕಾರ್ಮಿಕರು, ಕಲ್ಲುಕ್ವಾರೆ ಕಾರ್ಮಿಕರು, ರಸ್ತೆ ಚರಂಡಿ ಕಾರ್ಮಿಕರು, ಅರೆ ಅಲೆಮಾರಿ ಕಾರ್ಮಿಕರು ಭೂರಹಿತ ಭೋವಿ ವಡ್ಡರ ಸಮಾಜದವರ ಸಮೀಕ್ಷೆ ಹಾಗೂ ಅವರಿಗೆ ವಿಶೇಷ ಗುರುತಿನಚೀಟಿ ವಿತರಣೆ ಮಾಡಿ ಸಂಕಷ್ಟ ಸಮಯದಲ್ಲಿ ಸರ್ಕಾರದ ಸಹಾಯ ಧನ ನೀಡುವುದು. ಕಲ್ಲುಕ್ವಾರೆಯ ಕುಲವೃತ್ತಿ ಮಾಡುವ ಭೋವಿಸಮಾಜದ ಜನರಿಗೆ ಕಂದಾಯ ಇಲಾಖೆ ಅರಣ್ಯ ಇಲಾಖೆ ಇನ್ನಿತರ ಇಲಾಖೆಗಳ ಕಾನೂನು ತೊಡುಕುಗಳ ನಿವಾರಣೆ ಹಾಗೂ ವಿನಾಯತಿ ನೀಡುವುದು. ಕಲ್ಲುಗಣಿಗಾರಿಕೆ ಮಾಡುವ ಕುಲಕಸುಬಿನ ಭೋವಿ ಸಮಾಜದವರಿಗೆ ಶೇಕಡಾ 75ರಷ್ಟು ಅಥವಾ 2 ಕೋಟಿಯವರಿಗೆ ಯಂತ್ರಗಳ ಖರೀದಿಗೆ ಸಬ್ಸಿಡಿ ನೀಡುವಂತೆ ಶ್ರೀಗಳು ಮನವಿ ಮಾಡಿದರು.

ಮುಂಬರುವ ತಾ.ಪಂ. ಜಿ.ಪಂ ಚುನಾವಣೆಯಲ್ಲಿ ಭೋವಿ ಸಮಾಜಕ್ಕೆ ಸಾಮಾಜಿಕ ನ್ಯಾಯದಡಿ ಟಿಕೆಟ್ ಹಂಚಿಕೆ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಇಮ್ಮಡಿ ಸ್ವಾಮೀಜಿಗಳು ಕೋರಿದರು ಎಂದು ಭೋವಿ ಗುರುಪೀಠದ ಕಾರ್ಯನಿರ್ವಹಣಾಧಿಕಾರಿ ಗೌನಹಳ್ಳಿ ಗೋವಿಂದಪ್ಪ ತಿಳಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ