ಜೀವ ಪರ ಧ್ವನಿಯಾಗಿದ್ದ ಡಾ.ಚಿತ್ರಲಿಂಗಸ್ವಾಮಿಗೆ ಹರಿದು ಬಂದ ಸಾಹಿತಿ, ಚಿಂತಕರ ಸಂತಾಪಗಳು…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಸಾಧನೆ

ಜೀವ ಪರ ಧ್ವನಿಯಾಗಿದ್ದ ಡಾ.ಚಿತ್ರಲಿಂಗಸ್ವಾಮಿ ಅವರಿಗೆ ಬಿ.ಎಲ್.ವೇಣು ಸೇರಿದಂತೆ ಸಾಹಿತಿ, ಚಿಂತಕರಿಂದ ಹರಿದು ಬಂದ ಸಂತಾಪಗಳು…

ಚಿತ್ರದುರ್ಗ:

ಮನುಜ ಮತ, ವಿಶ್ವ ಪಥ ಮನೋಧರ್ಮದ ಜನಪರ ಹೋರಾಟಗಾರ,ದಲಿತ ಹಾಗೂ ಬಂಡಾಯ ಪ್ರಜ್ಞೆಯ ಲೇಖಕ ಮತ್ತು ಕವಿ , ಹಿರಿಯ -ಕಿರಿಯ ಬರಹಗಾರರ ನಡುವಿನ ಸೇತು ಬಂಧುವಾಗಿದ್ದ ಡಾ.ಎಂ.ಚಿತ್ರಲಿಂಗಸ್ವಾಮಿ ಅವರ ಅಗಲಿಕೆ ಅವರ ಅಭಿಮಾನಿಗಳಿಗೆ, ಸಮ ಸಮಾಜಮುಖಿ ಮನಸ್ಸುಗಳಿಗೆ ಅತೀವ ದುಃಖ ತಂದಿದೆ ಎಂದು ಕಂಬನಿ ಮಿಡಿದಿದ್ದಾರೆ.
ವಿದ್ಯಾರ್ಥಿಗಳ ನೆಚ್ಚಿನ ಆಂಗ್ಲ ಅಧ್ಯಾಪಕರಾಗಿ ಹಲವು ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿ,ಅಂತಿಮವಾಗಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆಯನ್ನು ಮುಂದುವರಿಸಿದ್ದರು.ಆಳವಾದ ಅಧ್ಯಯನ ಹಾಗೂ ಗಂಭೀರ ಚಿಂತನೆ ಮತ್ತು ವಿಮರ್ಶಾ ದೃಷ್ಟಿಯ ಸಂಶೋಧನಾ ಪ್ರವೃತ್ತಿಯಿಂದ ಮೈಸೂರಿನ ಮಾನಸ ಗಂಗೋತ್ರಿಯ ಆಂಗ್ಲ ವಿಭಾಗದ ನಿರ್ದೇಶಕರಾದ ಡಾ.ಎಂ.ಹೆಚ್. ರುದ್ರಮುನಿಯವರ ಮಾರ್ಗದರ್ಶನದಲ್ಲಿ “ಆಯ್ದ ದಲಿತರ ಆತ್ಮ ಚರಿತ್ರೆಗಳು” ಕುರಿತು ಮಹಾಪ್ರಬಂಧವನ್ನು ಆಂಗ್ಲ ಭಾಷೆ ಯಲ್ಲಿ ರಚಿಸಿ ಪಿಹೆಚ್.ಡಿ ಪದವಿಯನ್ನು ಇತ್ತೀಚೆಗೆ ಪಡೆದವರು.
ಅಂಬೇಡ್ಕರ್ ಚಿಂತನೆಹಾಗೂ ಪ್ರೊ.ಬಿ.ಕೃಷ್ಣಪ್ಪನವರ ಹೋರಾಟ ಮಾರ್ಗದಲ್ಲಿ ಕ್ರಿಯಾಶೀಲವಾಗಿ ಸಂಘಟನೆ ಮಾಡುತ್ತ ಶೋಷಿತರ ಧ್ವನಿಯಾದವರು. ಚಿತ್ರದುರ್ಗ ಜಿಲ್ಲಾ ಹಾಗೂ ರಾಜ್ಯ ಮಟ್ಟದ ದಲಿತ ಬಂಡಾಯ ಸಮಾವೇಶಗಳನ್ನು ಆಯೋಜಿಸುವಲ್ಲಿ ಹಾಗೂ ಚರ್ಚೆ,ಸಂವಾದಗಳಲ್ಲಿ ಕ್ರಿಯಾಶೀಲರಾಗಿದ್ದವರು ಮತ್ತು ದಲಿತ ಬಂಡಾಯದ ಎಲ್ಲ ಹಿರಿಯ ಬರಹಗಾರರ ಒಡನಾಡಿಯಾಗಿದ್ದವರು. ನೇರ ನುಡಿಯ, ಕಡು ಸ್ನೇಹಮಯಿ ಸ್ವಭಾವದ ,ಸಂಬಂಧಗಳ ಸಂಪ್ರೀತಿಗಾಗಿ ಅಪಾರ ಹೃದಯವಂತಿಕೆ ತೋರುತ್ತಿದ್ದ ಸಾಹಿತಿ ಎಂ.ಚಿತ್ರಲಿಂಗಸ್ವಾಮಿ ಅವರ ಆತ್ಮಕ್ಕೆ ಡಾ.ಬಿ.ಎಲ್.ವೇಣು, ಡಾ.ಲಕ್ಷ್ಮಣ ತೆಲಗಾವಿ, ಡಾ.ಎಂ.ಹೆಚ್ ರುದ್ರಮುನಿ, ಪ್ರೊ.ಹೆಚ್ ಲಿಂಗಪ್ಪ, ಡಾ.ಸಿ. ಶಿವಲಿಂಗಪ್ಪ  ಮೀರಾಸಾಬಿಹಳ್ಳಿ, ಜಿ.ಎಸ್.ಉಜ್ಜನಪ್ಪ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಪ್ರೊ.ಟಿ.ಹೆಚ್.ಕೃಷ್ಣಮೂರ್ತಿ,
ಪ್ರೊ.ಬಿ.ಆರ್.ಶಿವಕುಮಾರ್, ಪ್ರೊ.ಜಿ.ಪರಮೇಶ್ವರಪ್ಪ ಇವರುಗಳು ಚಿರಶಾಂತಿಯನ್ನು ಕೋರಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
1
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

1 thought on “ಜೀವ ಪರ ಧ್ವನಿಯಾಗಿದ್ದ ಡಾ.ಚಿತ್ರಲಿಂಗಸ್ವಾಮಿಗೆ ಹರಿದು ಬಂದ ಸಾಹಿತಿ, ಚಿಂತಕರ ಸಂತಾಪಗಳು…

  1. ಹೌದು ಸೊಪ್ಪು,ತರಕಾರಿಬೆಳೆಸಿ 🏠 ಯ ಅಡಿಗೆಗೆ ಬಳಸಿ ಆರ್ಥಿಕ ಸ್ಥಿತಿ ಉತ್ತಮ ಗೊಳಿಸಿಕೊಳ್ಳಬಹುದು

Comments are closed.