ಪ್ರಗತಿಪರ ಕವಿ- ಸಂಘಟಕ ಜೆ.ತಿಪ್ಪೇಸ್ವಾಮಿ ಕೊರ್ಲುಕುಂಟೆಯವರನ್ನು ಕಸಾಪ ಚುನಾವಣೆಯಲ್ಲಿ ಗೆಲ್ಲಿಸಿ ಸಾಮಾಜಿಕ ನ್ಯಾಯ ನೀಡಿ-ಡಾ.ವಡ್ಡಗೆರೆ ನಾಗರಾಜಯ್ಯ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ರಾಜಕೀಯ ವಿಶೇಷ ಸುದ್ದಿ

ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ: ದಿನಾಂಕ: 21-11-2021 ರಂದು ನಡೆಯಲಿರುವ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ- 2021 ರ ಚುನಾವಣೆಯಲ್ಲಿ ಉಮೇದುವಾರನಾಗಿ ಸ್ಪರ್ಧಿಸಿರುವ ಕವಿ- ಸಂಘಟಕ ಜೆ.ತಿಪ್ಪೇಸ್ವಾಮಿ ಕೊರ್ಲಕುಂಟೆ ಅವರನ್ನು ಬೆಂಬಲಿಸಿ ಹಿರಿಯ ಕವಿ, ಸಂಸ್ಕೃತಿ ಚಿಂತಕ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಏನಂತಾರೆ
ರಾಜ್ಯದ ಉಳಿದ ಜಿಲ್ಲೆಗಳಿಗಿಂತ ಚಿತ್ರದುರ್ಗ ಜಿಲ್ಲೆ ವೈಶಿಷ್ಟ್ಯ ಪೂರ್ಣವಾದುದು. ಬೌದ್ಧ ಭಿಕ್ಷುಗಳು ಮತ್ತು ಜೈನ ಸಾಧಕರ ಚಂದ್ರವಳ್ಳಿ ಗುಹೆಗಳು ಇಲ್ಲಿವೆ. ಕೋಟೆನಾಡು ಎಂದೇ ಪ್ರಸಿದ್ಧವಾಗಿರುವ ಈ ನಾಡು ನನ್ನ ಸಾಮಾಜಿಕ ಹೋರಾಟದ ಗುರುಗಳಾದ ಪ್ರೊ.ಬಿ.ಕೃಷ್ಣಪ್ಪನವರಿಗೆ ಜನ್ಮಕೊಟ್ಟಿದೆ. ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ಹುಟ್ಟಿದ ಪ್ರೊ.ಬೀಕೆ ದಲಿತ ಸಂಘರ್ಷ ಸಮಿತಿಯನ್ನು ಕಟ್ಟುವ ಮೂಲಕ ಕರ್ನಾಟಕ ಪ್ರಗತಿಪರ ಚಳವಳಿಗಳ ಪಾಲಿಗೆ ಉಕ್ಕಿನ ಕೋಟೆಯಂತೆ ನಿಂತವರು. ಬಿ.ಜಯಣ್ಣ, ಪ್ರೊ.ಸಿ.ಕೆ.ಮಹೇಶ್, ಪ್ರೊ.ಎ.ಕೆ.ಹಂಪಣ್ಣ, ಎಸ್.ಆರ್.ಗುರುನಾಥ್ ಮುಂತಾದವರು ಪ್ರೊ.ಬೀಕೆಯವರ ಶಿಷ್ಯರಾಗಿ ದಲಿತ ಸಾಹಿತ್ಯ ಮತ್ತು ಪ್ರಗತಿಪರ ಚಳವಳಿಗಳಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ತರಾಸು, ಬಿ.ಎಲ್.ವೇಣು, ಡಾ.ಬಂಜಗೆರೆ ಜಯಪ್ರಕಾಶ್, ಪ್ರೊ. ಚಂದ್ರಶೇಖರ ತಾಳ್ಯ, ಪ್ರೊ.ಜಿ.ಶರಣಪ್ಪ, ತಾರಿಣಿ ಶುಭದಾಯಿನಿ, ಲೋಕೇಶ್ ಅಗಸನಕಟ್ಟೆ ಮುಂತಾದ ಪ್ರಮುಖ ಸಾಹಿತಿಗಳನ್ನು ಈ ಜಿಲ್ಲೆ ನೀಡಿದೆ. ಬಸವಣ್ಣನವರ ಶರಣ ಚಳವಳಿಯ ನಂತರದಲ್ಲಿ ಚಿತ್ರದುರ್ಗದ ವಿರಕ್ತ ಮುರುಘಾ ಮಠವು ಬಸವಣ್ಣನ ಆಶಯಗಳನ್ನು ಮುಂದುವರೆಸಿದೆ. ಇದಕ್ಕಿಂತಲೂ ಪೂರ್ವದಲ್ಲಿ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿಯ ಶ್ರೀ ಆದಿಜಾಂಬವ ಮಾತಂಗ ಮಹಾಸಂಸ್ಥಾನ ಮಠವು ಬಸವಣ್ಣನವರಿಗೂ ಪ್ರೇರಣೆ ಒದಗಿಸಿದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಸಮಗಾರ ಹರಳಯ್ಯ, ಕಲ್ಯಾಣಮ್ಮ ಮುಂತಾದ ಶರಣರು ಹುಟ್ಟಿದ ಆದಿಜಾಂಬವ ಅಥವಾ ಮಾದಿಗ ಜನಾಂಗದ್ದಾಗಿದ್ದು ತಳಸಮುದಾಯಗಳ ಅಧ್ಯಾತ್ಮಿಕ ಘನತೆಯ ಪ್ರತೀಕವಾಗಿರುತ್ತದೆ. ಇಂತಹ ತಳಸ್ತರ ಸಾಮಾಜಿಕ ವಲಯದಿಂದ ಮೂಡಿಬಂದಿರುವ ಪ್ರಗತಿಪರ ಕವಿ- ಸಂಘಟಕ ಜೆ.ತಿಪ್ಪೇಸ್ವಾಮಿ ಕೊರ್ಲುಕುಂಟೆಯವರು ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಚಿತ್ರದುರ್ಗ ಮೊಟ್ಟಮೊದಲಿಗೆ ಸಾಹಿತ್ಯ ಸಂಸ್ಥೆಯ ಬಾಗಿಲಿನಲ್ಲಿ ನಿಂತಿದ್ದಾರೆ. ಅಸ್ಪೃಶ್ಯರನ್ನು ಜಾತಿಗ್ರಸ್ಥ ಸಮಾಜದ ಸಂಪ್ರದಾಯವಾದಿ ಮನಸ್ಸುಗಳು ಮನೆಗೆ ಪ್ರವೇಶಿಸಗೊಡದೆ ಹೊರಗಿಡುವಂತೆ ನೀವು ಹೊರಗಿಡಬೇಡಿರಿ. ತಿಪ್ಪೇಸ್ವಾಮಿ ಅವರನ್ನು ಬೆಂಬಲಿಸಿ ನಿಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ಅವರು ಸಾಹಿತ್ಯದ ಮನೆಯೊಳಕ್ಕೆ ಪ್ರವೇಶ ಮಾಡಲು ಅವಕಾಶ ಕಲ್ಪಿಸಿಕೊಡಬೇಕಾಗಿದೆ. ಇದು ನಿಮ್ಮೆಲ್ಲರ ದಲಿತಪರ ಕಾಳಜಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಪ್ರತೀಕವಾಗಿರುತ್ತದೆ ಎಂದು ನಾನು ನಂಬುತ್ತೇನೆ.
.
ದಲಿತರ ಸ್ವಾಭಿಮಾನಿ ಹೋರಾಟವನ್ನು ರೂಪಿಸಿದ ಪ್ರೊ.ಬಿ.ಕೃಷ್ಣಪ್ಪನವರು ಎಲ್ಲಾ ಜಾತಿಯ ಬಡವರು ಶೋಷಿತರು ದುಃಖಿತರು ದಲಿತರೇ ಆಗಿದ್ದಾರೆಂದು ಜಾತ್ಯತೀತ ತತ್ವವನ್ನು ನಮಗೆ ಬಿಟ್ಟುಹೋಗಿದ್ದಾರೆ. ಅಂತಹ ಕೃಷ್ಣಪ್ಪನವರ ಪರಂಪರೆಯ ಮಗನಾಗಿರುವ ಕೊರ್ಲುಕುಂಟೆ ತಿಪ್ಪೇಸ್ವಾಮಿ ಅವರನ್ನು ನೀವು ಚುನಾವಣೆಯಲ್ಲಿ ಗೆಲ್ಲಿಸುವ ಅಗತ್ಯವಿದೆ.

ನಾನು ಚಿತ್ರದುರ್ಗದ ನೆರೆಯ ತುಮಕೂರು ಜಿಲ್ಲೆಯನಾದರೂ ಚಿತ್ರದುರ್ಗ ವ ಜಿಲ್ಲೆಯೊಂದಿಗೆ ಭಾವನಾತ್ಮಕ ಸಂಬಂಧವಿರಿಸಿಕೊಂಡಿರುವ ಲೇಖಕನಾಗಿದ್ದೇನೆ. ನಾನು, ಈ ನೆಲದೊಡನೆ ನಿಕಟ ಬಾಂಧವ್ಯವಿರಿಸಿಕೊಂಡು ಕಳೆದ ಮೂರು ದಶಕಗಳಿಂದ ನಿರಂತರವಾಗಿ ಅನೇಕ ಚಳವಳಿ ಮತ್ತು ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ಕಳೆದ ಮೂರು ದಶಕಗಳಲ್ಲಿ ಇಲ್ಲಿನ ಹಲವಾರು ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದೇನೆ, ಕುಂಚಿಟಿಗ ಸಮುದಾಯ, ಕಾಡುಗೊಲ್ಲ ಸಮುದಾಯ, ಮ್ಯಾಸ ನಾಯಕ ಸಮುದಾಯ, ಮಾದಿಗ ಸಮುದಾಯ ಹಾಗೂ ಅಲೆಮಾರಿಗಳ ಹೋರಾಟಗಳಲ್ಲಿ ಹಾಗೂ ಸಭೆಗಳಲ್ಲಿ ಭಾಗವಹಿಸಿದ್ದೇನೆ. ಹೀಗಾಗಿ ನನ್ನನ್ನು ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಶ್ರೀಮಂತಗೊಳಿಸಿದ ನೆಲ ಚಿತ್ರದುರ್ಗ. ಪ್ರೊ.ಬಿ.ಕೃಷ್ಣಪ್ಪನವರು ಗುರುವಿನ ರೂಪದಲ್ಲಿ ನನ್ನ ಎದೆಯಲ್ಲಿ ಇಂದಿಗೂ ದೀಪದಂತೆ ಬೆಳಗುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಹಿತ್ಯಿಕ, ಸಾಂಸ್ಕೃತಿಕ ವಿದ್ಯಮಾನಗಳನ್ನು ಹಾಗೂ ಪ್ರಗತಿಪರ ಚಳವಳಿಗಳನ್ನು ಅತ್ಯಂತ ಪ್ರೀತಿಯಿಂದ ಗಮನಿಸುತ್ತಾ ಬಂದಿದ್ದೇನೆ.
*ಕನ್ನಡ ಸಾಹಿತ್ಯ ಪರಿಷತ್ತು ಈ ಜಿಲ್ಲೆಯನ್ನು ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ ಸುಸಂಪನ್ನವಾಗಿರಿಸಲು ನಿರಂತರ ಮುಖ್ಯ ಪಾತ್ರವಹಿಸಿದೆ, ಈ ನುಡಿ ಸೇವಾಕೇಂದ್ರ ರಾಜ್ಯದ ಉಳಿದೆಲ್ಲಾ ಜಿಲ್ಲಾ ಘಟಕಗಳಿಗಿಂತಲೂ ಭಿನ್ನ. ಇದಕ್ಕೆ ಕಾರಣ ಸನ್ಮಿತ್ರ ಕೊರ್ಲುಕುಂಟೆ ತಿಪ್ಪೇಸ್ವಾಮಿ ಅವರಂತಹ ನುಡಿ ಸೇವಕರು ಮತ್ತು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಬುದ್ಧ ಮತದಾರ ಬಂಧುಗಳು. ತಿಪ್ಪೇಸ್ವಾಮಿ
ಅವರ ನೇತೃತ್ವದಲ್ಲಿ ನಾಡಿನ ಹೆಸರಾಂತ ಸಾಹಿತಿಗಳು ಜಿಲ್ಲೆಗೆ ಆಗಮಿಸಿ ಅಮೂಲ್ಯ ಮಾತುಗಳನ್ನಾಡಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ತಿಪ್ಪೇಸ್ವಾಮಿ ಅವರನ್ನು ನಾಡಿನ ಬಹುತೇಕ ಹಿರಿಕಿರಿಯ ನುಡಿ ಸೇವಕರು ಬೆಂಬಲಿಸಿದ್ದಾರೆ. ನನಗೂ ಇವರನ್ನು ಬೆಂಬಲಿಸಲು ಸಂತೋಷವಾಗುತ್ತಿದೆ, ಇವರ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ರಾಜಕಾರಣ ಬೆರೆಸುವುದು ಸರಿಯಲ್ಲ, ಅಧ್ಯಕ್ಷರಾಗುವವರು ಯಾವುದೇ ರಾಜಕೀಯ ಪಕ್ಷದ ಕೀಲುಗೊಂಬೆ ಆಗಲೂಬಾರದು, ರಾಜಕಾರಣಿಗಳು ಸಹ ಕನ್ನಡ ಸಾಹಿತ್ಯ ಪರಿಷತ್ತನ್ನು ಸಹಕಾರ ಸಂಸ್ಥೆ ಎಂದು ಅಪಾರ್ಥ ಮಾಡಿಕೊಳ್ಳಬಾರದು, ಚುನಾವಣೆಯಲ್ಲಿ ರಾಜಕಾರಣ ಬೆರೆಸಿ ಕಲುಷಿತಗೊಳಿಸಬಾರದು,
ಕಳೆದ ಅವಧಿಯಲ್ಲಿ ಸ್ಥಗಿತವಾಗಿರುವ ನಿಷ್ಕ್ರಿಯವಾಗಿರುವ ಸಾಹಿತ್ಯಿಕ ಚಟವಟಿಕೆಗಳನ್ನು ಪುನಶ್ಚೇತನಗೊಳಿಸುವ ಕಾರಣಕ್ಕಾಗಿಯೂ ತಿಪ್ಪೇಸ್ವಾಮಿ ಅವರ ಉಮೇದುವಾರಿಕೆಯನ್ನು ಬೆಂಬಲಿಸಿ, ಇದು ನುಡಿ ಸೇವಕನಾದ ನನ್ನ ಕಳಕಳಿ ಮನವಿ ಎಂದುಡಾ. ವಡ್ಡಗೆರೆ ನಾಗರಾಜಯ್ಯ ತಿಳಿಸಿದ್ದಾರೆ.

What’s your Reaction?
+1
1
+1
2
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

4 thoughts on “ಪ್ರಗತಿಪರ ಕವಿ- ಸಂಘಟಕ ಜೆ.ತಿಪ್ಪೇಸ್ವಾಮಿ ಕೊರ್ಲುಕುಂಟೆಯವರನ್ನು ಕಸಾಪ ಚುನಾವಣೆಯಲ್ಲಿ ಗೆಲ್ಲಿಸಿ ಸಾಮಾಜಿಕ ನ್ಯಾಯ ನೀಡಿ-ಡಾ.ವಡ್ಡಗೆರೆ ನಾಗರಾಜಯ್ಯ…

  1. Pingback: 50mg viagra price
  2. Pingback: cialis 5mg daily

Comments are closed.