ಇಲಾಖಾ ಪರೀಕ್ಷೆ ನಕಲಿ!!, ಸಮಗ್ರ ತನಿಖೆಗೆ ಆಗ್ರಹ ಮಾಡಿದ ರಾಜ್ಯಾಧ್ಯಕ್ಷ ನಾರಾಯಣಾಚಾರ್…?

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಜಿಲ್ಲಾ ಸುದ್ದಿ ದಾವಣಗೆರೆ ವಿಶೇಷ ಸುದ್ದಿ

ಇಲಾಖಾ ಪರೀಕ್ಷೆ ನಕಲಿ!!, ಸಮಗ್ರ ತನಿಖೆಗೆ ಆಗ್ರಹ ಮಾಡಿದ ರಾಜ್ಯಾಧ್ಯಕ್ಷ ನಾರಾಯಣಾಚಾರ್…?

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:

ಇಲಾಖಾ ಪರೀಕ್ಷೆ ನಕಲಿ!! ಪರೀಕ್ಷಾ ಪ್ರಮಾಣಪತ್ರ ಸೃಷ್ಟಿಸಿ ನಿಯಮ 32 ರಡಿ ಸ್ವತಂತ್ರ ಪ್ರಭಾರ ಪಡೆದ ಪ್ರವೀಣ್, ಕರವಸೂಲಿಗಾರರ, ಪುರಸಭೆ, ಮಲೆಬೆನ್ನೂರು ಇವರ ವಿರುದ್ಧ ಸಮಗ್ರ ತನಿಖೆ ಮಾಡುವಂತೆ ನಿವೃತ್ತ ಪೌರಸೇವಾ ನೌಕರರ ಮತ್ತು ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್. ನಾರಾಯಣಾಚಾರ್ ಹಿರಿಯೂರು ಇವರು ಆಗ್ರಹ ಮಾಡಿದ್ದಾರೆ.
ದಾವಣಗೆರೆ ಜಿಲ್ಲಾಧಿಕಾರಿಗಳ ಅಧಿಕೃತ ಜ್ಞಾಪನ ಸಂಖ್ಯೆ. ಜಿ.ನ.ಕೋ.ದಾ/ 2/ ಸಿಆರ್/ 601/ 2019 – 20 ದಿ. 18.1.2020 ರಲ್ಲಿ ಪ್ರವೀಣ್, ಓಪಿ ಜಿ ಕರವಸೂಲಿಗಾರ,ಪುರಸಭೆ, ಮಲೆಬೆನ್ನೂರು, ಇವರಿಗೆ ನಿಯಮ 32 ಅಡಿಯಲ್ಲಿ ಚನ್ನಗಿರಿ ಪುರಸಭೆಯಲ್ಲಿ ಪ್ರಥಮ ದರ್ಜೆ ರಾಜಸ್ವ ನಿರೀಕ್ಷಕ ಹುದ್ದೆಗೆ ಸ್ವತಂತ್ರ ಪ್ರಭಾರದಲ್ಲಿರಿಸಿ ಆದೇಶ ಮಾಡಲಾಗಿದೆ.
ಆದರೆ, ಸದರಿ ನೌಕರನು 2014 ನೇ ಸಾಲಿನ ಪ್ರಥಮ ಅಧಿವೇಶನ ನೊಂದಣಿ ಸಂಖ್ಯೆ -115478,
06 ವಿಷಯಗಳಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಇಲಾಖಾ ಪರೀಕ್ಷೆ ಪ್ರಮಾಣಪತ್ರ ಪಡೆದಿರುತ್ತಾರೆ. ಹಾಗೆಯೇ 2015 ನೇ ಸಾಲಿನ ಎರಡನೇ ಅಧಿವೇಶನದಲ್ಲಿ ನೋಂದಣಿ ಸಂಖ್ಯೆ 265434 ಮುನಿಸಿಪಲ್ ಮತ್ತು ಲೋಕಲ್ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
2015 ನೇ ಸಾಲಿನ ಪ್ರಥಮ ಅಧಿವೇಶನ ಇಲಾಖಾ ಪರೀಕ್ಷೆಯಲ್ಲಿ ನೋಂದಣಿ ಸಂಖ್ಯೆ. 214293 ರೆವೆನ್ಯೂ ಹೈಯರ್ ಭಾಗ-2, ರೆವೆನ್ಯೂ ಲೋಯರ್ ಉತ್ತೀರ್ಣರಾಗಿದ್ದಾರೆ ಎಂದು ಪ್ರಮಾಣಪತ್ರವನ್ನು ಪಡೆದಿರುತ್ತಾರೆ. ಇದು ನಕಲಿ ಪ್ರಮಾಣಪತ್ರವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಅವರ ದಾಖಲಾತಿಗಳನ್ನು ಪರಿಶೀಲಿಸಲಾಗಿ, ದಿ.15.11.2015 ರ ಭಾಗ – 5 ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಈ ನೋಂದಣಿ ಸಂಖ್ಯೆ ಪ್ರಕಟವಾಗಿರುವುದೇ ಇಲ್ಲ. ನಂತರ ಇದೇ ನೌಕರ ಎರಡನೇ ಬಾರಿಗೆ 2020 ಸಾಲಿನಲ್ಲಿ ರೆವೆನ್ಯೂ ಭಾಗ-1 ಪರೀಕ್ಷೆಗೆ ಕುಳಿತಿರುತ್ತಾರೆ. ಡಿ ದೇವರಾಜ್ ಅರಸ್ ಮುಖ್ಯಮಂತ್ರಿಗಳಾಗಿದ್ದಾಗ ಇಲಾಖಾ ಪರೀಕ್ಷೆಗಳ ಅಂಕಪಟ್ಟಿ ನಕಲುಗಳು ಬಯಲು ಗೊಂಡಾಗ, ಸ್ವತಹ ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿಕೆ ನೀಡಿ, ಇನ್ನು ಮುಂದೆ ಇಲಾಖಾ ಪರೀಕ್ಷೆ ಪಾಸು ಮಾಡಿದ ಅಭ್ಯರ್ಥಿಗಳ ಗೆಜೆಟ್ ದಿನಾಂಕವನ್ನು ಸೇವಾ ಪುಸ್ತಕದಲ್ಲಿ ದಾಖಲು ಮಾಡುವಾಗ, ಕರ್ನಾಟಕ ರಾಜ್ಯ ಪತ್ರದಲ್ಲಿ ಅಭ್ಯರ್ಥಿಯು ಪಾಸಾದ ಗೆಜೆಟ್ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಲು ಆದೇಶ ಮಾಡಿದ್ದನ್ನು ಸ್ಮರಿಸಬೇಕಾಗುತ್ತದೆ.
ಆದಕಾರಣ
ಈ ಬಗ್ಗೆ ಪೌರಾಡಳಿತ ನಿರ್ದೇಶಕರು ವಿಳಂಬಮಾಡದೇ ಸವಿವರವಾದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ಮತ್ತು ನೌಕರರನ್ನು ಅಮಾನತ್ತಿನಲ್ಲಿ ಇಡಲು ಎಲ್.ನಾರಾಯಣಾಚಾರ್ ವಿನಂತಿಸಿದ್ದಾರೆ. 

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ