ಒತ್ತಡ ರಹಿತ ಜೀವನಕ್ಕಾಗಿ, ಉತ್ತಮ ಆರೋಗ್ಯಕ್ಕಾಗಿ ನಿತ್ಯ ವಾಕ್, ಸೈಕಲ್ ಜಾಥಾ, ಯೋಗ ಧ್ಯಾನ ಮಾಡಿ-ಎಸ್ಪಿ ರಾಧಿಕಾ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ರವರ ನೇತೃತ್ವದಲ್ಲಿ ಭಾನುವಾರ ಸೈಕಲ್ ಜಾಥಾ ಏರ್ಪಡಿಸಲಾಗಿತ್ತು.
ಎಸ್ಪಿ ರಾಧಿಕಾ ಹಸಿರು ಬಾವುಟ ಹಾರಿಸುವ ಮೂಲಕ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಪೊಲೀಸರು ತಮ್ಮ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು, ಪ್ರತಿ ದಿನ ಬೆಳಗಿನ ಜಾವ ವಾಕ್ ಮಾಡುವುದು ಸೈಕಲ್ ಜಾಥಾ ಮಾಡುವುದು ಇತರೆ ವ್ಯಾಯಮ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಈ ಸೈಕಲ್ ಜಾಥಾವು ಚಳ್ಳಕೆರೆ ಸರ್ಕಲ್ ಆರಂಭಿಸಿ ಮದಕರಿ ವೃತ್ತದ ಮೂಲಕ ಅಂಬೇಡ್ಕರ್ ವೃತ್ತ ತಲುಪಿದ ನಂತರ, ಚಿತ್ರದುರ್ಗದ ಮುಖ್ಯರಸ್ತೆ ಮೂಲಕ ಗಾಂಧಿ ವೃತ್ತದಿಂದ ನೇರವಾಗಿ ಹೊಳಲ್ಕೆರೆ ಸರ್ಕಲ್ ಮುಖಾಂತರ ಐತಿಹಾಸಿಕ ಚಂದ್ರವಳ್ಳಿ ಕೆರೆ ತಲುಪಿ- ಚಂದ್ರವಳ್ಳಿ ಕೆರೆಯಿಂದ ನೇರವಾಗಿ ಹೊಳಲ್ಕೆರೆ ಸರ್ಕಲ್ ಮೂಲಕ ಜಿಲ್ಲಾಧಿಕಾರಿಗಳ ವೃತ್ತಕ್ಕೆ ಆಗಮಿಸಿ ಕೊನೆಗೊಳಿಸಲಾಯಿತು. ಈ ಜಾಥಾದಲ್ಲಿ ಮೊದಲು 5 ಸ್ಥಾನ ಬಂದ ಸ್ಪರ್ಧಾಳುಗಳಿಗೆ ಎಸ್ಪಿ ರಾಧಿಕಾ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ತಿಪ್ಪೇಸ್ವಾಮಿ, ಡಿಎಸ್ಪಿ ಪಾಂಡುರಂಗಪ್ಪ, ಇನ್ಸ್ ಪೆಕ್ಟರ್ ಗಳಾದ ನಹೀಂ, ಸೋಮಶೇಖರ್, ರುದ್ರಸ್ವಾಮಿ ಮತ್ತು ಸಬ್ ಇನ್ಸ್ಪೆಕ್ಟರ್ ಗಳು ಮತ್ತು ಎಸ್ಐ ವೆಂಕಟಾಚಲ ಅವರು ಉಪಸ್ಥಿತರಿದ್ದರು.