ರೂಪಾಂತರ ಓಮೈಕ್ರಾನ್ ಸೋಂಕಿನ ಲಕ್ಷಣಗಳೇನು, ಸಾರ್ವಜನಿಕರಲ್ಲಿ ಎಚ್ಚರಿಕೆ ಅಗತ್ಯ…

ಅರೋಗ್ಯ ಕೋರೊನ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ

ರೂಪಾಂತರ ಓಮೈಕ್ರಾನ್ ಸೋಂಕಿನ ಲಕ್ಷಣಗಳೇನು, ಸಾರ್ವಜನಿಕರಲ್ಲಿ ಎಚ್ಚರಿಕೆ ಅಗತ್ಯ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ರೂಪಾಂತರ ಓಮೈಕ್ರಾನ್ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದ್ದು ಸಾರ್ವಜನಿಕರ ಎಚ್ಚರಿಕೆ ಅಗತ್ಯವಾಗಿದೆ. ಈಗಾಗಲೇ ರಾಜ್ಯದಲ್ಲಿ 77 ಪ್ರಕರಣಗಳು ಪತ್ತೆಯಾಗಿವೆ. ವಿದೇಶದಿಂದ ಆಗಮಿಸುತ್ತಿರುವ ದೇಶವಾಸಿಗಳಲ್ಲೇ ಇದು ಹೆಚ್ಚಾಗಿ ಕಂಡು ಬರುತ್ತಿದ್ದು ವಿದೇಶದಿಂದ ಬರುವಂತವರಿಗೆ ನಿರ್ಬಂಧ ಹೇರುವುದು ಅಗತ್ಯವಾಗಿದೆ.

ಎರಡು ಲಸಿಕೆ ಹಾಕಿಸಿಕೊಂಡವರನ್ನು ಆವರಿಸಿಕೊಳ್ಳುತ್ತಿರುವ ಹೊಸ ವೈರಸ್ ಓಮೈಕ್ರಾನ್ ಮಿಕ್ಕೆಲ್ಲಾ ರೂಪಾಂತರಗಳಿಗಿಂತ ವಿಭಿನ್ನವಾಗಿದೆ. ಒಮಿಕ್ರಾನ್ ಹೆಚ್ಚಾಗ್ತಿದ್ದಂತೆ ಅದರ ಗುಣಲಕ್ಷಣಗಳು ಸೂಕ್ಷ್ಮವಾಗಿ ತಿಳಿಯುತ್ತಿವೆ. ಜೊತೆಗೆ ಹೊಸ ಅಧ್ಯಯನದಲ್ಲಿ ಈ ಸೋಂಕಿನ ಎರಡು ಹೊಸ ಗುಣಲಕ್ಷಣಗಳು ಪತ್ತೆಯಾಗಿವೆ.

ಓಮೈಕ್ರಾನ್ ಸೋಂಕಿನ ಲಕ್ಷಣಗಳು?

ಓಮೈಕ್ರಾನ್ ಸೋಂಕಿನ ಪ್ರಮುಖ ಲಕ್ಷಣಗಳು ಎಂದರೆ ಮೂಗು ಬೇನೆ, ತಲೆನೋವು, ಆಯಾಸ ಅಥವಾ ಶೀತದಂತಹ ಲಕ್ಷಣಗಳು ಕಾಣಿಸಿಕೊಂಡರೆ ಓಮೈಕ್ರಾನ್ ಸೋಂಕು ಇರುವ ಸಾಧ್ಯತೆಯಿದೆ.‌ ಓಮೈಕ್ರಾನ್ ಸೋಂಕಿನ ಲಕ್ಷಣಗಳು ಸೌಮ್ಯವಾಗಿರುತ್ತವೆ ಎನ್ನಲಾಗುತ್ತಿದ್ದರೂ ಈ ಸೋಂಕು ದೀರ್ಘಕಾಲದವರೆಗೆ ಇರುತ್ತವೆ ಎಂದು ವೈಜ್ಞಾನಿಕ ಅಧ್ಯಯನದಲ್ಲಿ ತಿಳಿದುಬಂದಿದೆ.

ಓಮೈಕ್ರಾನ್ ಸೋಂಕಿನ ಮತ್ತೆರಡು ಸಿಂಪ್ಟಮ್ ಗಳನ್ನ ಗುರುತಿಸಲಾಗಿದ್ದು, ಜ಼ೋ ಕೋವಿಡ್ ಆಯಪ್ ಮಾಹಿತಿ ಪ್ರಕಾರ ವಾಕರಿಕೆ ಹಾಗೂ ಹಸಿವಾಗದಿರುವುದು ಓಮೈಕ್ರಾನ್ ಗುಣಲಕ್ಷಣ ಎನ್ನಲಾಗುತ್ತಿದೆ. ಕೊರೊನಾ ವೈರಸ್ ಸಾಮಾನ್ಯ ಲಕ್ಷಣಗಳಾದ ಹೈ ಟೆಂಪರೇಚರ್, ನಿರಂತರ ಕೆಮ್ಮು, ವಾಸನೆ ಮತ್ತು ರುಚಿ ಕಳೆದುಕೊಳ್ಳುವಿಕೆಯ ಜೊತೆಗೆ ವಾಕರಿಕೆ ಹಾಗೂ ಹಸಿವಾಗದಿರುವವರನ್ನ ಮೊದಲು ಓಮೈಕ್ರಾನ್ ಟೆಸ್ಟ್ ಗೆ ಒಳಪಡಿಸುವುದು ಉತ್ತಮ ಎಂದು ಯು.ಕೆ.ಯ ರಾಷ್ಟ್ರೀಯ ಆರೋಗ್ಯ ಇಲಾಖೆ ಅಧ್ಯಯನ ತಿಳಿಸಿದೆ.

ಅಮೆರಿಕಾದಲ್ಲಿ ತನಿಖೆ ನಡೆಸಿದ ಮೊದಲ 43 ಪ್ರಕರಣಗಳನ್ನ CDC ವಿಶ್ಲೇಷಿಸಿದೆ. ಕೆಮ್ಮು, ಆಯಾಸ, ಉಸಿರುಗಟ್ಟುವಿಕೆ, ಮೂಗು ಸೋರುವಿಕೆ ಓಮೈಕ್ರಾನ್ ನಾಲ್ಕು ಸಾಮಾನ್ಯ ಲಕ್ಷಣಗಳೆಂದು CDC ಈ ಅಧ್ಯಯನದ ನಂತರ ತಿಳಿಸಿತ್ತು. ಈಗ ಹೊಸ ಗುಣಲಕ್ಷಣದ ಬಗ್ಗೆ ತಿಳಿಸಿರುವ ರೋಗ ನಿಯಂತ್ರಣ ಕೇಂದ್ರ (CDC) ಕೆಲವು ಸಂದರ್ಭಗಳಲ್ಲಿ, ಓಮೈಕ್ರಾನ್ ಸೋಂಕಿತರಲ್ಲಿ ವಾಂತಿಯ ಲಕ್ಷಣಗಳು ಕಂಡು ಬಂದಿವೆ ಎಂದು ವೈದ್ಯಕೀಯ ಅಧ್ಯಯನಗಳು ತಿಳಿಸಿವೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply