ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕ್ರೀಡಾ ಶಾಲೆಗೆ ಬಾಲಕ, ಬಾಲಕಿಯರ ಆಯ್ಕೆ ಪ್ರಕ್ರಿಯೆ ಆರಂಭ…

ಕ್ರೀಡೆ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕ್ರೀಡಾ ಶಾಲೆಗೆ ಬಾಲಕ, ಬಾಲಕಿಯರ ಆಯ್ಕೆ ಪ್ರಕ್ರಿಯೆ ಆರಂಭ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2022-23ನೇ ಸಾಲಿಗೆ ರಾಜ್ಯ ಮಟ್ಟದ ಕ್ರೀಡಾ ಶಾಲೆ, ಕ್ರೀಡಾ ನಿಲಯಗಳಿಗೆ ಪ್ರತಿಭಾನ್ವಿತ ಬಾಲಕ, ಬಾಲಕಿಯರನ್ನು ತಾಲ್ಲೂಕು ಮಟ್ಟದಲ್ಲಿ ಆಯ್ಕೆ ಮಾಡಲು ಆಯ್ಕೆ ಪ್ರಕ್ರಿಯೆಯನ್ನು ಆಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್ ಬಾಲ್, ವಾಲಿಬಾಲ್, ಫುಟ್‍ಬಾಲ್, ಸೈಕ್ಲಿಂಗ್, ಜೂಡೋ, ಜಿಮ್ನಾಸ್ಟಿಕ್ ಮತ್ತು ಕುಸ್ತಿ ಕ್ರೀಡೆಗಳಲ್ಲಿ ಆಯ್ಕೆಯನ್ನು ಏರ್ಪಡಿಸಲಾಗಿದೆ.
ಜ.6ರಂದು ಬೆಳಿಗ್ಗೆ 11ಕ್ಕೆ ಚಳ್ಳಕೆರೆ ತಾಲ್ಲೂಕು ಕ್ರೀಡಾಂಗಣ, ಜ.07ರಂದು ಬೆಳಿಗ್ಗೆ 11ಕ್ಕೆ ಹೊಳಲ್ಕೆರೆ ತಾಲ್ಲೂಕು ಕ್ರೀಡಾಂಗಣ, ಜ.08ರಂದು ಬೆಳಿಗ್ಗೆ 11ಕ್ಕೆ ಹೊಸದುರ್ಗ ತಾಲ್ಲೂಕು ಕ್ರೀಡಾಂಗಣ, ಜ.10 ರಂದು ಬೆಳಿಗ್ಗೆ 11ಕ್ಕೆ ಹಿರಿಯೂರು ತಾಲ್ಲೂಕು ಕ್ರೀಡಾಂಗಣ ಹಾಗೂ ಜ.11ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.  
ಯಾವುದೇ ತಾಲ್ಲೂಕಿನ ಬಾಲಕ ಬಾಲಕಿಯರು ಆಯಾ ತಾಲ್ಲೂಕಿನ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ, ಜ.11ರಂದು ಚಿತ್ರದುರ್ಗದಲ್ಲಿ ನಡೆಯುವ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಆಯ್ಕೆ ಟ್ರಯೆಲ್ಸ್‍ನಲ್ಲಿ ಪಾಲ್ಗೊಳ್ಳಬಹುದು.
ಅರ್ಹತೆ: ಕಿರಿಯರ ವಿಭಾಗದ ಕ್ರೀಡಾ ಆಯ್ಕೆಗೆ ಬಯಸುವ ಬಾಲಕ, ಬಾಲಕಿಯರು 2022ರ ಜೂನ್1ಕ್ಕೆ  14 ವರ್ಷ ಮೀರಿರಬಾರದು ಹಾಗೂ 8ನೇ ತರಗತಿಗೆ ಸೇರಲು ಅರ್ಹತೆ ಪಡೆದಿರಬೇಕು. ಹಿರಿಯರ ವಿಭಾಗದ ಕ್ರೀಡಾ ಆಯ್ಕೆಗೆ ಬಯಸುವ ಬಾಲಕ, ಬಾಲಕಿಯರು
2022ರ ಜೂನ್01ಕ್ಕೆ 18 ವರ್ಷ ಮೀರಿರಬಾರದು ಹಾಗೂ ಪ್ರಥಮ ಪಿ.ಯು.ಸಿಗೆ ಸೇರಲು  ಅರ್ಹತೆ ಪಡೆದಿರಬೇಕು.
ಹೆಚ್ಚಿನ ಮಾಹಿತಿಗಾಗಿ ವಾಲಿಬಾಲ್ ತರಬೇತುದಾರ ಮಹಮ್ಮದ್ ಮುಹೀಬುಲ್ಲಾ ಮೊ. 9611673475 ಹಾಗೂ ಅಥ್ಲೆಟಿಕ್ಸ್ ತರಬೇತುದಾರ ತಿಪ್ಪಣ್ಣನ ಎಸ್ ಮಾಳಿ ಅವರ ಮೊಬೈಲ್ ಸಂಖ್ಯೆ 9380889647 ಗೆ ಸಂಪರ್ಕಿಸಬಹುದು ಎಂದು ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply