ರೈತರಿಗೆ ಮಹತ್ವ ಮಾಹಿತಿ, ಕಡಲೆ ರೋಗದ ಹತೋಟಿಗೆ ಕೃಷಿ ಇಲಾಖೆ ಸಲಹೆ…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ವಿಜ್ಞಾನ

ರೈತರಿಗೆ ಮಹತ್ವ ಮಾಹಿತಿ, ಕಡಲೆ ರೋಗದ ಹತೋಟಿಗೆ ಕೃಷಿ ಇಲಾಖೆ ಸಲಹೆ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ಪ್ರಸ್ತುತ ಕಡಲೆ ಬೆಳೆ ಹೂವಾಡುವ ಹಂತದಲ್ಲಿದೆ. ಈಚೆಗೆ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಯ-ರೈತ ಸಂಜೀವಿನಿ ವಾಹನ ಹಿರಿಯೂರು ತಾಲ್ಲೂಕು ಹೂವಿನಹೊಳೆ ಗ್ರಾಮಕ್ಕೆ ಭೇಟಿ ನೀಡಿ ಕಡಲೆ ಬೆಳೆಯನ್ನು ಪರೀಕ್ಷಿಸಿದೆ.  
ಈ ಸಂದರ್ಭದಲ್ಲಿ ಕಡಲೆ ಬೆಳೆಗೆ ಅಸ್ಕೋ ಕೈಟಾ ಅಂಗಮಾರಿ ರೋಗ ಕಂಡುಬಂದಿರುತ್ತದೆ. ಇದೇ ತರಹದ ಸುತ್ತಮುತ್ತ ಪ್ರದೇಶದಲ್ಲಿ ಹಾಗೂ ಕಡಲೆ ಬೆಳೆದಂತಹ ಹಿರಿಯೂರು, ಚಿತ್ರದುರ್ಗ ಮತ್ತು ಚಳ್ಳಕೆರೆ ಭಾಗದಲ್ಲಿ ಕೂಡ ಕಂಡು ಬರುವ ಸಾಧ್ಯತೆ ಇದೆ.
ಹಾಗಾಗಿ ಈ ರೋಗದ ಹತೋಟಿಗಾಗಿ ಮ್ಯಾಕೋಜೆಬ್ 2 ಗ್ರಾಂ ಪ್ರತಿ ಲೀಟರ್‍ಗೆ ಅಥವಾ ವೆಟಬಲ್ ಸಲ್ಪೇರ್ 2-3 ಗ್ರಾಂ ಪ್ರತೀ ಲೀಟರ್‍ಗೆ ಅಥವಾ ಕಾರ್ಬನ್‍ಡೈಜಿಯಂ 2 ಗ್ರಾಂ ಪ್ರತೀ ಲೀಟರ್‍ಗೆ ಬೆರಸಿ ಸಿಂಪಡಿಸುವಂತೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರು ರೈತರಿಗೆ ಸಲಹೆ ನೀಡಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
1
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply