ಮಗುವಿನ ಆರೋಗ್ಯ ಸ್ಥಿರತೆ ಕಾಪಾಡಲು ಸ್ವರ್ಣ ಬಿಂದು ಪ್ರಾಶನ ಅತಿ ಅವಶ್ಯ: ಡಾ.ಸುನೀಲ್ ಕುಮಾರ್…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಜಿಲ್ಲಾ ಸುದ್ದಿ ಸಾಧನೆ ಹಿರಿಯೂರು
ಮಗುವಿನ ಆರೋಗ್ಯ ಸ್ಥಿರತೆ ಕಾಪಾಡಲು ಸ್ವರ್ಣ ಬಿಂದು ಪ್ರಾಶನ ಅತಿ ಅವಶ್ಯ: ಡಾ.ಸುನೀಲ್ ಕುಮಾರ್…
 
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
 
ಆಯುರ್ವೇದ ವೈದ್ಯ ಪದ್ಧತಿಯಲ್ಲಿ, ಮಗು ಹುಟ್ಟಿದ ದಿನದಿಂದ ಆ ಮಗು ಆರೋಗ್ಯ ಸ್ಥಿರತೆ ಕಾಪಾಡಿಕೊಳ್ಳಲು, ಸ್ವರ್ಣ ಬಿಂದು ಪ್ರಾಶನ ಅತಿ ಅವಶ್ಯವಾದುದು, ಪ್ರತಿ ಮಕ್ಕಳಿಗೂ ಇದು ಅತಿ ಶ್ರೇಷ್ಠ ಪುಷ್ಯ ನಕ್ಷತ್ರದ ದಿನದಂದು ದೊರೆಯಬೇಕು ಎಂಬುದಾಗಿ ಚಳ್ಳಕೆರೆ ಬಾಪೂಜಿ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜಿನ ಆರ್.ಎಂ.ಒ ಡಾ.ಸುನೀಲ್ ಕುಮಾರ್ ತಿಳಿಸಿದರು.
ಹಿರಿಯೂರಿನ ಯೂರೋ ಇಂಟರ್ ನ್ಯಾಷನಲ್ ಸ್ಕೊಲ್ ನ ಆವರಣದಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಕ್ಕಳಿಗೆ ಸ್ವರ್ಣ ಬಿಂದು ಪ್ರಾಶನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುರೋಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ನ ಮುಖ್ಯಸ್ಥ ಘನಶಂಕರ್  ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗೆ ನಾವು ಶಿಕ್ಷಕರು ಹಾಗೂ ಪೋಷಕರು ಪ್ರಥಮ ಆದ್ಯತೆ ನೀಡುವುದು ಅತ್ಯಾವಶ್ಯಕವಾಗಿದ್ದು ನಮ್ಮ ಸಂಸ್ಥೆಯ ವತಿಯಿಂದ ಎಲ್ಲಾ ಸಾರ್ವಜನಿಕರಿಗೂ ಉಚಿತವಾಗಿ ಈ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ
ಈ ಕೊರೊನಾ ರೂಪಾಂತರಿ ವೈರಸ್ ಓಮೈಕ್ರಾನ್ ನಂತಹ ಇನ್ನಿತರ ಸೋಂಕುಗಳಿಂದ ಪಾರಾಗಲು, ಸಾರ್ವಜನಿಕರು ಸ್ವಯಂ ಸ್ವಚ್ಛತೆ, ಸಾಮಾಜಿಕ ಅಂತರವಲ್ಲದೇ, ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದ ದಿನಚರಿಯನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವುದು ಅತಿ ತುರ್ತುಕ್ರಮವಾಗಿದೆ ಎಂದರು.
ಆರಂಭದಲ್ಲಿ ಮುಖ್ಯ ಶಿಕ್ಷಕರಾದ ಕೀರ್ತನಾ ಎಲ್ಲರನ್ನು ಸ್ವಾಗತಿಸಿದರು, ಕೊನೆಯಲ್ಲಿ ಶಿಕ್ಷಕಿ ರೂಪ ವಂದನಾರ್ಪಣೆ ನೆರವೇರಿಸಿದರು, ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಸಾರ್ವಜನಿಕರೂ ಉಪಸ್ಥಿತರಿದ್ದರು.
 
 
 
 
 
 
 
 

 
 
 
 
 
What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply