ಕಣ್ಣು ರೋಗಗಳ ಕುರಿತು ಗ್ರಾಮೀಣ ಜನತೆ ಎಚ್ಚರ ವಹಿಸಬೇಕು-ಡಾ.ಚಂದ್ರಮೌಳಿ…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಜಿಲ್ಲಾ ಸುದ್ದಿ ಸಾಧನೆ ಹಿರಿಯೂರು

ಕಣ್ಣು ರೋಗಗಳ ಕುರಿತು ಗ್ರಾಮೀಣ ಜನತೆ ಎಚ್ಚರ ವಹಿಸಬೇಕು-ಡಾ.ಚಂದ್ರಮೌಳಿ…

ಚಂದ್ರವಳ್ಳಿ ನ್ಯೂಸ್, ಹಿರಿಯೂರು:

ಹಿರಿಯೂರು ತಾಲೂಕಿನ ವಾಣಿವಿಲಾಸಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕ ಕಾರ್ಯಕ್ರಮ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಸಿಬ್ಬಂದಿವರ್ಗದ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ವಾಣಿವಿಲಾಸಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಮೌಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಣ್ಣು ರೋಗಗಳ ಬಗ್ಗೆ ಗ್ರಾಮೀಣ ಜನತೆ ಅಸಡ್ಡ ತೋರುವುದು ಬೇಡ, ಸದಾ ಎಚ್ಚರಿಕೆ ವಹಿಸಬೇಕು, ಕಾಲ ಕಾಲಕ್ಕೆ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಸುರಕ್ಷಾ ಅಧಿಕಾರಿಗಳಾದ ವೀಣಾ, ರಹಮತ್ ಉನ್ನಿಸಾ, ಲಕ್ಷ್ಮೀದೇವಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಮೋಹನ್, ಶೀಲಾ, ನಿರೀಕ್ಷಣಾ ಅಧಿಕಾರಿ ಚಂದ್ರಶೇಖರ್, ವಿವೇಕ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply