ರಾಜ್ಯದಲ್ಲಿ ಓಮೈಕ್ರಾನ್ ಸೋಂಕು ರಣಕೇಕೆ, 287 ಮಂದಿಗೆ ಓಮೈಕ್ರಾನ್ ಸೋಂಕು ದೃಢ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸೋಮವಾರ 287 ಮಂದಿಗೆ ಓಮೈಕ್ರಾನ್ ಸೋಂಕು ರಣಕೇಕೆ ಹಾಕಿದ್ದು ಕೊರೋನಾ ಜೊತೆಗೆ ಓಮೈಕ್ರಾನ್ ಮಹಾಸ್ಪೋಟವೇ ಉಂಟಾಗುತ್ತಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು ಅವರು, ಬೆಂಗಳೂರಿನಲ್ಲಿ ಸೋಮವಾರ ಹೊಸದಾಗಿ 287 ಜನರಿಗೆ ಓಮೈಕ್ರಾನ್ ಸೋಂಕು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 766ಕ್ಕೆ ಏರಿಕೆಯಾಗಿರೋದಾಗಿ ತಿಳಿಸಿದ್ದಾರೆ. ಅಂದಹಾಗೇ ನಿನ್ನೆ ರಾಜ್ಯದಲ್ಲಿ ಕೊರೋನಾ ಭೀಕರ ಮಹಾಸ್ಪೋಟವೇ ಉಂಟಾಗಿತ್ತು. 24 ಗಂಟೆಯಲ್ಲಿ ಹೊಸದಾಗಿ 34,047 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದ 13 ಮಂದಿ ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 21,071, ಬೆಳಗಾವಿ 468, ಹಾಸನ 1171, ಮೈಸೂರು 1892, ತುಮಕೂರು 1373 ಸೇರಿದಂತೆ 34,047 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿಸಿತ್ತು. 34047 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಕಾರಣ, 3220087ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಸೋಂಕಿನಿಂದ 5902 ಜನರು ಗುಣಮುಖರಾಗಿದ್ದಾರೆ. ಇದುವರೆಗೆ 2983645 ಜನರು ಗುಣಮುಖರಾಗಿದ್ದಾರೆ. ಈಗ ರಾಜ್ಯದಲ್ಲಿ 197982 ಸಕ್ರೀಯ ಸೋಂಕಿತರಿದ್ದಾರೆ ಎಂದು ತಿಳಿಸಿತ್ತು.
ಬೆಂಗಳೂರು ನಗರದಲ್ಲಿ 5, ಚಿಕ್ಕಬಳ್ಳಾಪುರದಲ್ಲಿ ಒಬ್ಬರು, ದಕ್ಷಿಣ ಕನ್ನಡದಲ್ಲಿ ಇಬ್ಬರು, ಹಾಸನ 01, ಕಲಬುರ್ಗಿ 01, ಮಂಡ್ಯ 01, ಮೈಸೂರು 01, ರಾಮನಗರ 01 ಸೇರಿದಂತೆ 13 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 38,431ಕ್ಕೆ ಏರಿಕೆಯಾಗಿದೆ.