ರೈತರಿಗೆ ಮಹತ್ವದ ಮಾಹಿತಿ, ಕಡಲೆ ಬೆಳೆಗೆ ಆಸ್ಕೋ ಕೈಟಾ ಅಂಗಮಾರಿ ರೋಗ, ಹತೋಟಿಗೆ  ಕೃಷಿ ಇಲಾಖೆ ಸಲಹೆ…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಸಾಧನೆ

ರೈತರಿಗೆ ಮಹತ್ವದ ಮಾಹಿತಿ, ಕಡಲೆ ಬೆಳೆಗೆ ಆಸ್ಕೋ ಕೈಟಾ ಅಂಗಮಾರಿ ರೋಗ, ಹತೋಟಿಗೆ  ಕೃಷಿ ಇಲಾಖೆ ಸಲಹೆ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ  ಪ್ರಸ್ತುತ ಕಡಲೆ ಬೆಳೆ ಹೂವಾಡುವ ಅಥವಾ ಕಾಯಿ ಬಿಡುವ ಹಂತದಲ್ಲಿದೆ. ಹಿರಿಯೂರು ತಾಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂದಂತೆ ಜ.17ರಂದು  ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ-ರೈತ ಸಂಜೀವಿನಿ ವಾಹನವು ಹೊಳಲ್ಕೆರೆ ತಾಲ್ಲೂಕು ಬಂಜಗೊಂಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಡಲೆ ಬೆಳೆಯನ್ನು ಪರೀಕ್ಷಿಸಿದ ಸಂದರ್ಭದಲ್ಲಿಯೂ ಸಹ ಆಸ್ಕೋ ಕೈಟಾ ಅಂಗಮಾರಿ ರೋಗ ಕಂಡುಬಂದಿರುತ್ತದೆ. ಇದೇ ತರಹ ಸುತ್ತಮುತ್ತ ಪ್ರದೇಶದಲ್ಲಿ ಹಾಗೂ ಕಡಲೆ ಬೆಳೆದಂತಹ ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಚಳ್ಳಕೆರೆ ತಾಲೂಕುಗಳಲ್ಲೂ ಕೂಡ ಈ ಸಂದರ್ಭದಲ್ಲಿ ಕಂಡುಬರುವ ಸಾಧ್ಯತೆ ಇದೆ.
ಹಾಗಾಗಿ ಈ ರೋಗದ ಹತೋಟಿಗಾಗಿ ಮ್ಯಾಂಕೋಜೆಬ್ 2ಗ್ರಾಂ ಪ್ರತಿ ಲೀಟರ್‍ಗೆ ಅಥವಾ ವೆಟಬಲ್ ಸಲ್ಪೇರ್ 2-3 ಗ್ರಾಂ ಪ್ರತಿ ಲೀಟರ್‍ಗೆ ಮತ್ತು ಕಾರ್ಬನ್‍ಡೈಜಿಯಂ 2ಗ್ರಾಂ ಪ್ರತಿ ಲೀಟರ್‍ಗೆ ಬೆರೆಸಿ ಸಿಂಪಡಿಸಬೇಕು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರು (ವಿಷಯ ತಜ್ಞರು) ತಿಳಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0