ಶಿವರಾತ್ರಿ ಮಹೋತ್ಸವದ ಅಂಗವಾಗಿ ನಡೆಯುವ 92ನೇ ಶಿವನಾಮ ಸಪ್ತಾಹಕ್ಕೆ ದಾನಿಗಳು, ಭಕ್ತರು ಹೆಚ್ಚಿನ ಆರ್ಥಿಕ ಸಹಾಯ ಮಾಡಬೇಕು-ಮಾದಾರ ಚನ್ನಯ್ಯ ಸ್ವಾಮೀಜಿ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಸಾಧನೆ

ಶಿವರಾತ್ರಿ ಮಹೋತ್ಸವದ ಅಂಗವಾಗಿ ನಡೆಯುವ 92ನೇ ಶಿವನಾಮ ಸಪ್ತಾಹಕ್ಕೆ ದಾನಿಗಳು, ಭಕ್ತರು ಹೆಚ್ಚಿನ ಆರ್ಥಿಕ ಸಹಾಯ ಮಾಡಬೇಕು-ಮಾದಾರ ಚನ್ನಯ್ಯ ಸ್ವಾಮೀಜಿ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಿವನ ಆರಾಧನೆ ಹಾಗೂ ಜನರಲ್ಲಿ ಸಾಮಾಜಿಕ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಮಹಾ ಶಿವರಾತ್ರಿ ಮಹೋತ್ಸವದ 92ನೇ ಶಿವನಾಮ ಸಪ್ತಾಹವಾಗಲಿ ಎಂದು ಮಾದಾರ ಚನ್ನಯ್ಯ ಗುರುಪೀಠಾಧ್ಯಕ್ಷರಾದ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳು ತಿಳಿಸಿದರು.
ನಗರದ ಶ್ರೀ ಕಬೀರಾನಂದಾಶ್ರಮದವತಿಯಿಂದ ನಡೆಯಲಿರುವ ಶಿವರಾತ್ರಿ ಮಹೋತ್ಸವದ 92ನೇ ಶಿವನಾಮ ಸಪ್ತಾಹದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಶಿವರಾತ್ರಿಯ ಶಿವನಾಮ ಸಪ್ತಾಹವೂ ಸಾಂಸ್ಕೃತಿಕ, ಆಧ್ಯಾತ್ಮಿಕ ಶ್ರದ್ದಾ ಭಕ್ತಿಯ ಉತ್ಸವವಾಗಬೇಕಿದೆ. ನಮ್ಮ ಜನಪದ ಸಂಸ್ಕೃತಿಯನ್ನು ಬಿಂಬಿಸುವ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯಬೇಕಿದೆ. ಶಿವನ ಆರಾಧನೆ ಮಾಡುವುದರ ಮೂಲಕ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಈ ಕಾರ್ಯಕ್ರಮದಲ್ಲಿ ಮಾಡಬೇಕಿದೆ. ವರ್ಷದಿಂದ ವರ್ಷಕ್ಕೆ ಶಿವರಾತ್ರಿಯ ಶಿವನಾಮ ಸಪ್ತಾಹ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿದೆ. ಕಳೆದ ಬಾರಿ ಕೊರೊನಾ ಪ್ರಾರಂಭವಾಗಿತ್ತು ಆದರೆ ಈ ಬಾರಿ ಕೊರೊನಾ ಮುಗಿಯುವ ಹಂತಕ್ಕೆ ತಲುಪಿದೆ. ಶಿವನಾಮ ಸಪ್ತಾಹ ನಡೆಯುವುದು ಕಬೀರಾನಂದಾಶ್ರಮದಲ್ಲಿ ಮಾತ್ರ. ಈ ಹಿಂದೆ ಸೀಮಿತವಾಗಿದ್ದ ಆಚರಣೆ ಶಿವಲಿಂಗಾನಂದ ಶ್ರೀಗಳು ಬಂದ ಮೇಲೆ ನಾಡಿನಾದ್ಯಾಂತ ಹೆಸರನ್ನು ಮಾಡುವ ರೀತಿಯಲ್ಲಿ ಆಚರಣೆಯಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.
ತಮ್ಮ ದುಡಿಮೆಯಲ್ಲಿ ಧರ್ಮಕ್ಕಾಗಿ ಸ್ವಲ್ಪ ಹಣವನ್ನು ತೆಗೆದಿಡಬೇಕಿದೆ ಅದರಂತೆ ಈ ಬಾರಿಯೂ ಶೇ. ೨೫ರಷ್ಟು ವೆಚ್ಚ ಹೆಚ್ಚಾಗಲಿದೆ ಇದರಿಂದ ಭಕ್ತಾಧಿಗಳು ಉದಾರವಾಗಿ ದಾನ ಮಾಡುವುದರ ಮೂಲಕ ಶಿವರಾತ್ರಿ ಸಪ್ತಾಹಕ್ಕೆ ನೆರವಾಗಬೇಕಿದೆ ಎಂದು ಮಾದಾರ ಶ್ರೀಗಳು ತಿಳಿಸಿದರು.
ಶಿವರಾತ್ರಿಯ ಶಿವನಾಮ ಸಪ್ತಾಹದಲ್ಲಿ ಶ್ರೀಗಳು ನೀಡಿದ ಕೆಲಸವನ್ನು ಮಾಡುವುದಾಗಿ ತಿಳಿಸಿದ ಮಾದಾರ ಸ್ವಾಮೀಜಿಗಳು, ಈ ಬಾರಿಯ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡುವ ಭರವಸೆ ನೀಡಿದರಲ್ಲದೆ, ಶಿವರಾತ್ರಿ ಮಹೋತ್ಸವ ದೇಶದ ಗಮನ ಸೆಳೆಯುವ ಕಾರ್ಯವಾಗಬೇಕಿದೆ ಎಂದು ಮಾದಾರ ಚನ್ನಯ್ಯ ಶ್ರೀಗಳು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಕಬೀರಾನಂದಾಶ್ರಮದ ಶ್ರೀಶಿವಲಿಂಗಾನಂದ ಶ್ರೀಗಳು ಮಾತನಾಡಿ, ಸರ್ಕಾರ ವಾರಾಂತ್ಯದ ಕರ್ಫ್ಯೂ ತೆಗೆಯುವುದರ ಮೂಲಕ ನಮ್ಮ ಆತಂಕ ದೂರ ಮಾಡಿದೆ. ಕೊರೊನಾ ನಿಯಮದಡಿ ನಮ್ಮ ಕಾರ್ಯಕ್ರಮ ಮಾಡಲಾಗುವುದು. ಹಣವನ್ನು ನೀಡುವಾಗ ಕೆಲವರು ಮುಖವನ್ನು ಗಂಟು ಮಾಡುತ್ತಾರೆ. ಆದರೆ ಕೆಲವರು ಸಂತೋಷದಿಂದ ನೀಡುತ್ತಾರೆ. ಸದ್ಭಾವನೆಯಿಂದ ಶ್ರೀಮಠ ನಡೆಯುತ್ತಿದೆ ಎಂದು ತಿಳಿಸಿದರು.
ಭಕ್ತಿಯಿಂದ ಕೆಲಸ ಮಾಡಿದಾಗ ನಮ್ಮ ಸಂಕಷ್ಟಗಳು ದೂರವಾಗಲಿದೆ. ತಮ್ಮ ಸೇವೆ ಅನನ್ಯವಾಗಿರಲಿ ಅಚ್ಚುಕಟ್ಟಾಗಿ ಶಿವರಾತ್ರಿ ಸಪ್ತಾಹ ನಡೆಯಬೇಕಿದೆ. ಇದಕ್ಕ ಎಲ್ಲರ ಸಹಕಾರ, ಸಹಾಯ ಅಗತ್ಯವಾಗಿದೆ ಎಂದು ಶಿವಲಿಂಗಾನಂದ ಶ್ರೀಗಳು ಹೇಳಿದರು.
ಬಿಜೆಪಿ ಮುಖಂಡ ಸಿದ್ದೇಶ್ ಯಾದವ್ ಮಾತನಾಡಿ, ಕಳೆದ ಬಾರಿ ಶಿವರಾತ್ರಿ ಮಹೋತ್ಸವದ ಸಮಯದಲ್ಲಿ ಕರೋನಾ ಅಲೆ ಪ್ರಾರಂಭವಾಗಿತ್ತು ಆದರೆ ಈ ಬಾರಿ ಅದು ಮುಗಿಯುವ ಹಂತ ತಲುಪಿದೆ. ಕಳೆದ ಬಾರಿಯ ಕಾರ್ಯಕ್ರಮದಲ್ಲಿ ಅನೇಕ ಮಂತ್ರಿಗಳು ಅನಿವಾರ್ಯ ಕಾರಣದಿಂದ ಆಗಮಿಸಿಲ್ಲ, ಆದರೆ ಈ ಬಾರಿ ಸಾಧ್ಯವಾದಷ್ಟು ಸಚಿವರನ್ನು ಕರೆತರುವ ಕಾರ್ಯವನ್ನು ಮಾಡಲಾಗುವುದು. ಕಳೆದ ಬಾರಿ ಉಸ್ತುವಾರಿ ಸಚಿವರನ್ನು ಕರೆತರಲಾಗಲಿಲ್ಲ ಆದರೆ ಈ ಬಾರಿ ಮುಂಚಿನಿಂದಲೇ ಕಾರ್ಯಕ್ರಮಕ್ಕೆ ಕರೆ ತರುವ ಕಾರ್ಯವನ್ನು ಪ್ರಮಾಣಿಕವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಕಬೀರಾನಂದಾಶ್ರಮದ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್‌ಕುಮಾರ್ ಮಾತನಾಡಿ ಈ ವರ್ಷ ಫೆ.22 ರಿಂದ ಮಾ.01ರವರೆಗೆ ಮಹಾ ಶಿವರಾತ್ರಿ ಮಹೋತ್ಸವದ ಅಂಗವಾಗಿ 92ನೇ ಶಿವನಾಮ ಸಪ್ತಾಹ ನಡೆಯಲಿದೆ. ಕಳೆದ 2 ವರ್ಷದಿಂದ ಸುರಕ್ಷತೆಯೊಂದಿಗೆ ಕಾರ್ಯಕ್ರಮ ಮಾಡಲಾಗಿದೆ. 91ನೇ ಸಪ್ತಾಹದಲ್ಲಿ ದಾನಿಗಳಿಂದ ಸಂಗ್ರಹವಾದ ಹಣದ ಜೊತೆಗೆ ಶ್ರೀಮಠದಿಂದ ಹಣವನ್ನು ಹಾಕುವುದರ ಮೂಲಕ ಕಾರ್ಯಕ್ರಮ ಮಾಡಲಾಯಿತು. ಈ ಬಾರಿ ಕಳೆದ ಬಾರಿಗಿಂತ ಖರ್ಚು ಹೆಚ್ಚಾಗಲಿದೆ. ಇದರಿಂದ ದಾನಿಗಳು ಭಕ್ತಾಧಿಗಳು ಉದಾರವಾಗಿ ದಾನ ಮಾಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೆ ಕಾರಣರಾಗಬೇಕಿದೆ ಎಂದು ಮನವಿ ಮಾಡಿದರು.
ಎಲ್ಲರು ನೋಡುವಂತೆ ಆನ್‌ಲೈನ್‌ನಲ್ಲಿ ಕಾರ್ಯಕ್ರಮ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಇದರಿಂದ ಆಯವ್ಯಯದಲ್ಲಿ ವ್ಯತ್ಯಾಸವಾಗಲಿದೆ ಇದರಿಂದ ದಾನ ಮಾಡುವವರು ಉದಾರವಾಗಿ ಮಾಡಬೇಕಿದೆ. ಅಲ್ಲದೆ ಬೇರೆಯವರಿಂದಲೂ ದಾನವನ್ನು ಕೂಡಿಸುವ ಕಾರ್ಯಕ್ಕೆ ಮುಂದಾಗುವಂತೆ ಪ್ರಶಾಂತ್ ಕೋರಿದರು.
ಕಾರ್ಯಕ್ರಮದಲ್ಲಿ ನಾಗರಾಜ್ ಸಂಗಂ, ಗೋಪಾಲಸ್ವಾಮಿ ನಾಯಕ್, ಮಂಜುನಾಥ್ ಗುಪ್ತ, ಭದ್ರಾವತಿ ಶ್ರೀಮಠದ ಕಾರ್ಯದರ್ಶಿ ರಾಮಮೂರ್ತಿ, ಗುತ್ತಿಗೆದಾರರಾದ ಸತೀಶ್, ವೀರಣ್ಣ, ನಗರಸಭಾ ಸದಸ್ಯ ವೆಂಕಟೇಶ್, ಶಿವರಾತ್ರಿ ಮಹೋತ್ಸವದ 92ನೇ ಶಿವನಾಮ ಸಪ್ತಾಹ ಕಾರ್ಯಕ್ರಮದ ಬಗ್ಗೆ ಸಲಹೆ, ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್ ಉಪಸ್ಥಿತರಿದ್ದರು. ಸುಬ್ರಾಯ್ ಭಟ್‌ರು ವೇದ ಘೋಷ ವಾಚನ ಮಾಡಿದರು. ಶಿಕ್ಷಕಿ ಜ್ಯೋತಿ ಪ್ರಾರ್ಥಿಸಿದರು. ಪ್ರಶಾಂತ್ ಸ್ವಾಗತಿಸಿದರು. ಮುರುಗೇಶ್ ನಿರೂಪಿಸಿ ವಂದಿಸಿದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ