ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕ್ರೀಡಾ ವಸತಿ ಶಾಲಾಗೆ ಬಾಲಕ-ಬಾಲಕಿಯರ ಆಯ್ಕೆ ಪ್ರಕ್ರಿಯೆ…

ಕ್ರೀಡೆ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ವಿಶೇಷ ಸುದ್ದಿ ಸಾಧನೆ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕ್ರೀಡಾ ವಸತಿ ಶಾಲಾಗೆ ಬಾಲಕ-ಬಾಲಕಿಯರ ಆಯ್ಕೆ ಪ್ರಕ್ರಿಯೆ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದ ಕ್ರೀಡಾ ವಸತಿ ಶಾಲೆಗೆ ವಾಲಿಬಾಲ್ ಹಾಗೂ ಅಥ್ಲೇಟಿಕ್ಸ್ ಕ್ರೀಡೆಗಳಲ್ಲಿ 2022-23ನೇ ಸಾಲಿಗೆ ಜಿಲ್ಲೆಯ ಪ್ರತಿಭಾವಂತ ಬಾಲಕ ಬಾಲಕಿಯರನ್ನು ಗುರುತಿಸಿ ಕ್ರೀಡಾಶಾಲೆಗೆ ಪ್ರವೇಶ ನೀಡಲಾಗುವುದು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ಬಾಲಕ, ಬಾಲಕಿಯರು ದಿನಾಂಕ:01.06.2022ಕ್ಕೆ 10 ಮತ್ತು 11 ವರ್ಷ ಮೀರದ ಬಾಲಕ ಬಾಲಕಿಯರು ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ. ಆಯ್ಕೆಯಲ್ಲಿ ಅಭ್ಯರ್ಥಿಗಳ ದೈಹಿಕ ಸಾಮಥ್ರ್ಯ, ಶಕ್ತಿ, ಚಾಕಚಕ್ಯತೆ, ಸಹಿಷ್ಣುತೆ, ಕುಶಲತೆ, ವೇಗ ಹಾಗೂ ಆಯಾ ಕ್ರೀಡೆಗೆ ಅಗತ್ಯವಿರುವ ಎತ್ತರ ಪರೀಕ್ಷಿಸಿ ಒಟ್ಟಾರೆ ಶೇ.50ಕ್ಕೂ ಹೆಚ್ಚು ಅಂಕಗಳನ್ನು ಪಡೆದವರಿಗೆ  ಆಯ್ಕೆಗೆ ಪರಿಗಣಿಸಲಾಗುವುದು.
 ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಆಯ್ಕೆ ನಡೆಸಲಾಗುತ್ತಿದ್ದು, ಆಸಕ್ತ ಅರ್ಹ ಬಾಲಕ ಬಾಲಕಿಯರು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಿದ ವಯೋಮಿತಿ ಪತ್ರದೊಂದಿಗೆ ಆಯ್ಕೆ ನಡೆಸುವ ಸ್ಥಳದಲ್ಲಿ ವರದಿ ಮಾಡಿಕೊಳ್ಳಬೇಕು.
ಜ.27ರಂದು ಬೆಳಗ್ಗೆ 10ಕ್ಕೆ ಮೊಳಕಾಲ್ಮೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಜ.28 ಬೆಳಗ್ಗೆ 10ಕ್ಕೆ ಚಳ್ಳಕೆರೆ ತಾಲ್ಲೂಕು ಕ್ರೀಡಾಂಗಣ, ಜ.31 ಬೆಳಗ್ಗೆ 10ಕ್ಕೆ ಹೊಳಲ್ಕೆರೆ ತಾಲ್ಲೂಕು ಕ್ರೀಡಾಂಗಣ, ಫೆ.1ರಂದು ಬೆಳಗ್ಗೆ 10ಕ್ಕೆ ಹೊಸದುರ್ಗ ತಾಲ್ಲೂಕು ಕ್ರೀಡಾಂಗಣ, ಫೆ.2ರಂದು ಬೆಳಗ್ಗೆ 10ಕ್ಕೆ ಹಿರಿಯೂರು ತಾಲ್ಲೂಕು ಕ್ರೀಡಾಂಗಣ, ಫೆ 3ರಂದು ಬೆಳಗ್ಗೆ 10ಕ್ಕೆ ಚಿತ್ರದರ್ಗದ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಯಾವುದೇ ತಾಲ್ಲೂಕಿನ ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ತಾಲ್ಲೂಕು ಕೇಂದ್ರಗಳಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ ಫೆಬ್ರವರಿ 4ರಿಂದ ಫೆಬ್ರವರಿ 19ರವರೆಗೆ ಪ್ರತಿನಿತ್ಯ ಬೆಳಗ್ಗೆ 10.30ಕ್ಕೆ ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆಯುವ ಆಯ್ಕೆ ಟ್ರಯಲ್ಸ್‍ನಲ್ಲಿ ಸಂಬಂಧಪಟ್ಟ ದಾಖಲೆಗಳೊಂದಿಗೆ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಾಲಿಬಾಲ್ ತರಬೇತುದಾರರಾದ ಮಹಮ್ಮದ್ ಮುಹೀಬುಲ್ಲಾ ಚಿತ್ರದುರ್ಗ ಮೊ:9611673475 ಹಾಗೂ ಅಥ್ಲೆಟಿಕ್ಸ್ ತರಬೇತುದಾರರಾದ ತಿಪ್ಪಣ್ಣ ಎಸ್ ಮಾಳಿ ಚಿತ್ರದುರ್ಗ ಮೊ:9380889647 ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply