ಭಾನುವಾರದ ಹೆಲ್ತ್ ಬುಲೆಟಿನ್, ಜಿಲ್ಲೆಯ ಯಾವ ತಾಲೂಕುಗಳಲ್ಲಿ ಎಷ್ಟು ಕೋವಿಡ್ ಸೋಂಕು ದೃಢ…?

ಅರೋಗ್ಯ ಕೋರೊನ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ

ಭಾನುವಾರದ ಹೆಲ್ತ್ ಬುಲೆಟಿನ್, ಜಿಲ್ಲೆಯ ಯಾವ ತಾಲೂಕುಗಳಲ್ಲಿ ಎಷ್ಟು ಕೋವಿಡ್ ಸೋಂಕು ದೃಢ…?

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಭಾನುವಾರದ ವರದಿಯಲ್ಲಿ 246 ಮಂದಿಗೆ ಸೋಂಕು ಇರುವುದು ದೃಢಪಟ್ಟಿದ್ದು ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 40,121ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 156, ಚಳ್ಳಕೆರೆ 32, ಹಿರಿಯೂರು 37, ಹೊಳಲ್ಕೆರೆ 05, ಹೊಸದುರ್ಗ 13 ಹಾಗೂ ಮೊಳಕಾಲ್ಮುರು 03 ಪ್ರಕರಣ ಸೇರಿದಂತೆ ಒಟ್ಟು 246 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಭಾನುವಾರ 94 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಭಾನುವಾರ ಒಟ್ಟು 1201 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ.  ಕೋವಿಡ್‍ನಿಂದ  ಭಾನುವಾರದವರೆಗೆ ಒಟ್ಟು 214 ಜನ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೆ 37,164 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 2743 ಸಕ್ರಿಯ ಪ್ರಕರಣಗಳು ಇವೆ. ಭಾನುವಾರದ ಪಾಸಿಟಿವ್ ರೇಟ್ 20.48 ಇದ್ದು, ಕಳೆದ ಹತ್ತು ದಿನಗಳ ಪಾಸಿಟಿವ್ ರೇಟ್ 13.24 ಇದೆ.

ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 4,97,170 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.

  ಈವರೆಗೆ 9,51,122 ಜನರ ಮಾದರಿ ಸಂಗ್ರಹಿಸಲಾಗಿದ್ದು, 9,09,257 ಜನರ ವರದಿ ನೆಗೆಟೀವ್ ಬಂದಿದೆ. ಉಳಿದ 878 ಜನರ ವರದಿ ಬರುವುದು ಬಾಕಿ ಇದೆ. 866 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕೃತಗೊಂಡಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಾಶಿ ತಿಳಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply