ಮಂಗಳವಾರದ ಹೆಲ್ತ್ ಬುಲೆಟಿನ್, ಜಿಲ್ಲೆಯ ಕೋವಿಡ್ ಮಹಾ ಸ್ಫೋಟ, ಜೊತೆಯಲ್ಲಿ ಇಬ್ಬರು ಸೋಂಕಿಗೆ ಬಲಿ, ಸಾವಿನ ಸಂಖ್ಯೆ 216ಕ್ಕೆ ಏರಿಕೆ…

ಅರೋಗ್ಯ ಕೋರೊನ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ

ಮಂಗಳವಾರದ ಹೆಲ್ತ್ ಬುಲೆಟಿನ್, ಜಿಲ್ಲೆಯ ಕೋವಿಡ್ ಮಹಾ ಸ್ಫೋಟ, ಜೊತೆಯಲ್ಲಿ ಇಬ್ಬರು ಸೋಂಕಿಗೆ ಬಲಿ, ಸಾವಿನ ಸಂಖ್ಯೆ 216ಕ್ಕೆ ಏರಿಕೆ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 649 ಮಂದಿಗೆ ಸೋಂಕು ಇರುವುದು ದೃಢಪಟ್ಟಿದ್ದು ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 41,601ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 291, ಚಳ್ಳಕೆರೆ 113, ಹಿರಿಯೂರು 60, ಹೊಳಲ್ಕೆರೆ 49, ಹೊಸದುರ್ಗ 101 ಹಾಗೂ ಮೊಳಕಾಲ್ಮುರು 35 ಪ್ರಕರಣ ಸೇರಿದಂತೆ ಒಟ್ಟು 246 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಮಂಗಳವಾರ 94 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಮಂಗಳವಾರ ಒಟ್ಟು 2450 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ.  ಕೋವಿಡ್‍ನಿಂದ  ಮಂಗಳವಾರ ಇಬ್ಬರು ಮೃತಪಟ್ಟಿದ್ದು ಇದುವರೆಗೆ ಒಟ್ಟು 216 ಜನ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೆ 38,270 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 3115 ಸಕ್ರಿಯ ಪ್ರಕರಣಗಳು ಇವೆ. ಮಂಗಳವಾರದ ಪಾಸಿಟಿವ್ ರೇಟ್ 26.48 ಇದ್ದು, ಕಳೆದ ಹತ್ತು ದಿನಗಳ ಪಾಸಿಟಿವ್ ರೇಟ್ 17.07 ಇದೆ.

ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 4,97,170 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.

  ಈವರೆಗೆ 9,56,321 ಜನರ ಮಾದರಿ ಸಂಗ್ರಹಿಸಲಾಗಿದ್ದು, 9,12,009 ಜನರ ವರದಿ ನೆಗೆಟೀವ್ ಬಂದಿದೆ. ಉಳಿದ 1845 ಜನರ ವರದಿ ಬರುವುದು ಬಾಕಿ ಇದೆ. 866 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕೃತಗೊಂಡಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಾಶಿ ತಿಳಿಸಿದ್ದಾರೆ.

 

 

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply