ಪರಿಶುದ್ಧ ಗಾಳಿಗಾಗಿ ನಗರದ ಎಲ್ಲ ಪಾರ್ಕ್ ಗಳ ಅಭಿವೃದ್ಧಿ-ಶಾಸಕ ಜಿ.ಎಚ್.ತಿಪ್ಪಾರೆಡ್ಡಿ…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ

ಪರಿಶುದ್ಧ ಗಾಳಿಗಾಗಿ ನಗರದ ಎಲ್ಲ ಪಾರ್ಕ್ ಗಳ ಅಭಿವೃದ್ಧಿ-ಶಾಸಕ ಜಿ.ಎಚ್.ತಿಪ್ಪಾರೆಡ್ಡಿ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ನಿವಾಸಿಗಳಿಗೆ ಪರಿಶುದ್ಧ ಗಾಳಿಗಾಗಿ ನಗರದ ಎಲ್ಲ ಪಾರ್ಕ್ ಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತಿದ್ದು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಅಲ್ಲದೆ ಪಾರ್ಕ್ ಗಳಲ್ಲಿ ಸ್ವಚ್ಛತೆ ಕಾಪಡಿಕೊಳ್ಳಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ರುಡ್ ಸೆಟ್ ಪಕ್ಕದಲ್ಲಿ ನಿರ್ಮಿಸಿರುವ ನೂತನ ಪಾರ್ಕ್ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಜನರು ತಮ್ಮ ಸಂಜೆಯ ಸಮಯ ಮತ್ತು ಉತ್ತಮ ಗಾಳಿಗಾಗಿ ಪಾರ್ಕ್ ಗಳ ಮೊರೆ ಹೋಗಿತ್ತಿದ್ದಾರೆ. ನಗರದಲ್ಲಿ ಪಾರ್ಕ್ ಅಭಿವೃದ್ಧಿ ಮಾಡಲಾಗುತ್ತಿದ್ದು ಕೋವಿಡ್ ನಿಂದ ಸ್ವಲ್ಪ ನಿಧಾನವಾಗಿದೆ. ಜನರಿಗೆ ಉತ್ತಮ ಮನೆಯಂತೆ ಸುತ್ತಮುತ್ತಲಿನ ಪರಿಸರ ಬೆಳೆಸುವುದು ಅಷ್ಟೆ ಮುಖ್ಯವಾಗಿದೆ. ಮನೆಯಲ್ಲಿ ಬಳಿ ಗಿಡ ಮರಗಳನ್ನು ಬೆಳೆಸಿಕೊಳ್ಳಬೇಕು. ಪಾರ್ಕ್ ನಿಂದ ಹಿರಿಯ ನಾಗರಿಕರು, ಮಹಿಳೆಯರು, ಯುವಕರು ,ಮಕ್ಕಳಿಗೆ ಸೇರಿ ಎಲ್ಲಾರಿಗೂ ಅನುಕೂಲವಾಗುತ್ತದೆ ಎಂದರು.

ಸಾರ್ವಜನಿಕರು ಸ್ವಚ್ಛತೆ ಮರೆತಿದ್ದಾರೆ, ತಮ್ಮ ಮನೆಯನ್ನು ಯಾವ ರೀತಿ ಸ್ವಚ್ಛವಾಗಿ ಇಟ್ಟಿರುತ್ತಾರೆಯೋ ಅದೇ ರೀತಿ  ಪಾರ್ಕ್ ಗಳಲ್ಲೂ ಸ್ವಚ್ಛತೆ ಕಾಪಾಡಬೇಕು, ಇದರ ಉಪಯೋಗ ಪಡೆಯುವವರು ನೋಡಿಕೊಂಡರೆ ಉತ್ತಮ ವಾತಾವರಣವಿರುತ್ತದೆ ಎಂದು ತಿಳಿಸಿದರು.

5 ಲಕ್ಷ ರೂ ವೆಚ್ಚದಲ್ಲಿ ಜೋಗಿಮಟ್ಟಿ ರಸ್ತೆಯ ಬನ್ನಿಕಾಳಮ್ಮ ದೇವಸ್ಥಾನದ ಬಳಿ ಉದ್ಯಾನವನ ಮತ್ತು ಜಿಮ್ ಸಹ ಉದ್ಘಾಟಿಸಲಾಗಿದೆ. ಸುಣ್ಣದ ಗುಮ್ಮಿ ವಿಚಾರವಾಗಿ ಸಾರ್ವಜನಿಕರು ಸ್ಥಳಾಂತರಿಸಲು ಮನವಿ ಮಾಡಿದ್ದಾರೆ. ಆದರೆ ಸ್ಥಳಾಂತರಿಸುವುದು ನನಗೆ ಕಷ್ಟವೇನಲ್ಲ ಬದಲಿ ಜಾಗದ ಸಮಸ್ಯೆಯಾಗಿದೆ. ಇವರಿಗೆ ಎಲ್ಲಿ ಜಾಗ ನೀಡಬೇಕೆಂದು ತಿಳಿಯುತ್ತಿಲ್ಲ ಎಂದರು.
ನನ್ನ ಕ್ಷೇತ್ರದಲ್ಲಿ ಜಾಗದ ಸಮಸ್ಯೆ ಇದೆ. ಹಣ ನೀಡಿದರು ಎಲ್ಲಿಯೂ ಜಾಗ ಸಿಗುತ್ತಿಲ್ಲ. ಮನೆಗಾಗಿ ಸಾವಿರಾರು ಅರ್ಜಿಗಳು ಬಂದಿವೆ. ಅವರಿಗೆ ಮನೆ ನಿರ್ಮಾಣ ಮಾಡಲು ಜಾಗದ ಕೊರತೆ ಕಾಡುತ್ತಿದೆ. ಈಗಾಗಲೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಲಾಗಿದೆ, ಮುಂದಿನ ದಿನದಲ್ಲಿ ದಿನದ 24 ಗಂಟೆ ನೀರನ್ನು ನೀಡಲಾಗುವುದು. ಪೈಪ್ ಮೂಲಕ ಗ್ಯಾಸ್ ಸಂಪರ್ಕ ನೀಡುವ ಕಾರ್ಯ ಭರದಿಂದ ಸಾಗಿದೆ. ಮುಂದಿನ ದಿನದಲ್ಲಿ ನಿಮ್ಮ ಬಡಾವಣೆಗೂ ಸಂಪರ್ಕ ನೀಡಲಾಗುವುದು ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.

ನಗರಾಭಿವೃದ್ದಿ ಪ್ರಾಧಿಕಾರದಿಂದ ಇಲ್ಲಿ ಉತ್ತಮವಾದ ಜಿಮ್ ಸಾಧನಗಳ ಅಳವಡಿಕೆ ಮಾಡಲಾಗಿದೆ. ಇದರ ಸದುಪಯೋಗ ಮಾಡಿಕೊಳ್ಳಿ, ಕಸದ ರಾಶಿ ಬೀಳದ ಹಾಗೇ ನೋಡಿಕೊಳ್ಳಿ ಮನೆಯಿಂದ ಇಂತಿಷ್ಟು ಹಣವನ್ನು ನೀಡುವುದರ ಮೂಲಕ ಯಾರಿಗಾದರೂ ಕೆಲಸ ನೀಡಿ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಶಾಸಕರು ಸೂಚನೆ ನೀಡಿದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬದರಿನಾಥ್, ಸದಸ್ಯರಾದ ಮಂಜುನಾಥ್, ಓಂಕಾರ್, ರೇಖಾ, ಆಯುಕ್ತ ವಿಜಯಕುಮಾರ್, ನಗರಸಭೆಯ ಮಾಜಿ ಸದಸ್ಯ ಮಹೇಶ್, ಇಂಜಿನಿಯರ್ ಕಿರಣ್, ಗುತ್ತಿಗೆದಾರ ಕುಮಾರ್, ನಾಗರಾಜ್ ಸೇರಿದಂತೆ ಬಡಾವಣೆಯ ಜನತೆ ಭಾಗವಹಿಸಿದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply