ಶುಕ್ರವಾರದ ಹೆಲ್ತ್ ಬುಲೆಟಿನ್, ಜಿಲ್ಲೆಯಲ್ಲಿಂದು ಓರ್ವ ಕೊರೊನಾ ಸೋಂಕಿಗೆ ಬಲಿ, ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆ…?

ಅರೋಗ್ಯ ಕೋರೊನ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ

ಶುಕ್ರವಾರದ ಹೆಲ್ತ್ ಬುಲೆಟಿನ್, ಜಿಲ್ಲೆಯಲ್ಲಿಂದು ಓರ್ವ ಕೊರೊನಾ ಸೋಂಕಿಗೆ ಬಲಿ, ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆ…?

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಶುಕ್ರವಾರದ ವರದಿಯಲ್ಲಿ 192 ಮಂದಿಗೆ ಸೋಂಕು ಇರುವುದು ದೃಢಪಟ್ಟಿದ್ದು ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 42,524ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 75, ಚಳ್ಳಕೆರೆ 35, ಹಿರಿಯೂರು 26, ಹೊಳಲ್ಕೆರೆ 27, ಹೊಸದುರ್ಗ 16 ಹಾಗೂ ಮೊಳಕಾಲ್ಮುರು 13 ಪ್ರಕರಣ ಸೇರಿದಂತೆ ಒಟ್ಟು 246 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಶುಕ್ರವಾರ 283 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಶುಕ್ರವಾರ ಒಟ್ಟು 2574 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ.  ಕೋವಿಡ್‍ನಿಂದ  ಶುಕ್ರವಾರ ಓರ್ವ ಮೃತಪಟ್ಟಿದ್ದು ಇದುವರೆಗೆ ಒಟ್ಟು 218 ಜನ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೆ 40,019 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 2287 ಸಕ್ರಿಯ ಪ್ರಕರಣಗಳು ಇವೆ. ಶುಕ್ರವಾರದ ಪಾಸಿಟಿವ್ ರೇಟ್ 07.45 ಇದ್ದು, ಕಳೆದ ಹತ್ತು ದಿನಗಳ ಪಾಸಿಟಿವ್ ರೇಟ್ 18.50 ಇದೆ.

ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 4,97,170 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.

  ಈವರೆಗೆ 9,62,870 ಜನರ ಮಾದರಿ ಸಂಗ್ರಹಿಸಲಾಗಿದ್ದು, 9,17,452 ಜನರ ವರದಿ ನೆಗೆಟೀವ್ ಬಂದಿದೆ. ಉಳಿದ 2028 ಜನರ ವರದಿ ಬರುವುದು ಬಾಕಿ ಇದೆ. 866 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕೃತಗೊಂಡಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಾಶಿ ತಿಳಿಸಿದ್ದಾರೆ.

 

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply