ಮಾನಸಿಕ ಹಾಗೂ ದೈಹಿಕವಾಗಿ ಸಬಲರಾಗಿರಲು ಸೂರ್ಯ ನಮಸ್ಕಾರ ಸಹಕಾರಿ….

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಸಾಧನೆ

ಮಾನಸಿಕ ಹಾಗೂ ದೈಹಿಕವಾಗಿ ಸಬಲರಾಗಿರಲು ಸೂರ್ಯ ನಮಸ್ಕಾರ ಸಹಕಾರಿ….

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಸೂರ್ಯ ನಮಸ್ಕಾರದಿಂದ ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಅನುಕೂಲಗಳಿವೆ. ಕಷವಾದರೂ ಮಾಡುತ್ತಾ ಹೋದರೆ ಮಾನಸಿಕ ಹಾಗೂ ದೈಹಿಕವಾಗಿ ಸಬಲರಾಗಿರಲು ಸಹಕಾರಿಯಾಗುತ್ತದೆಂದು ಚಿತ್ರದುರ್ಗ ಜಿಲ್ಲಾ ಯೋಗ ಸಂಸ್ಥೆಯ ಅಧ್ಯಕ್ಷ ರಂಗನಾಥ ಅಭಿಪ್ರಾಯ ಪಟ್ಟರು.
 ಅವರು  ನಗರದ  ನೀಲಕಂಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ  ಚಿತ್ರದುರ್ಗ ಜಿಲ್ಲಾ ಯೋಗ ಸಂಸ್ಥೆ, ರೋಟರಿ ಕ್ಲಬ್ ಪೋರ್ಟ್, ಇನ್ನರ್ ವೀಲ್ ಕ್ಲಬ್ ಚಿತ್ರದುರ್ಗ ಹಾಗೂ ವೀರಶೈವ ಸಮಾಜ ಇವರುಗಳ ಸಹಯೋಗದಲ್ಲಿ ರಥಸಪ್ತಮಿ ಪ್ರಯುಕ್ತ ಏರ್ಪಡಿಸಿದ್ದ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 108 ಬಾರಿ ಸೂರ್ಯ ನಮಸ್ಕಾರ ಮಾಡಲು 29 ನಿಮಿಷ ಅವಧಿ ಬೇಕು. ಇದಕ್ಕೆ ಪ್ರತಿ ದಿನ ಮಾಡುವುದರಿಂದ ಮಾತ್ರ ಸಾಧ್ಯ. ದೇಹ ಮತ್ತು ಮನಸ್ಸಿನ ಮೇಲೆ  ಪರಿಣಾಮ ಬೀರುವ ಇಂತಹ ಯೋಗ ಅಗತ್ಯ ಎಂದು ಹೇಳಿದರು. 
  ಯೋಗ ತರಬೇತಿ ಸಂಸ್ಥೆಯ ಮುಖ್ಯಸ್ಥರು ಹಾಗೂ ತರಬೇತಿದಾರ ಎಲ್.ಎಸ್. ಚಿನ್ಮಯಾನಂದ ಮಾತನಾಡಿ ಯೋಗದಲ್ಲಿ ಮೂರು ಬಗೆ. ಧ್ಯಾನ, ಪ್ರಾಣಾಯಾಮ ಮತ್ತು ಆಸನ. ಈ ಮೂರು ಸಹ ನಮಗೆ ಒಂದೊಂದು ರೀತಿಯಲ್ಲಿ ಸಹಕಾರಿ ಸೂರ್ಯ ಸಕಲ ಜೀವರಾಶಿಗೂ ಚೈತನ್ಯ ದಾಯಕ. ಅಂತಹ ಶಕ್ತಿಯಿಂದ ಮನುಷ್ಯನಿಗೆ ಸಕಲ ರೀತಿಯಲ್ಲಿ ಪ್ರಯೋಜನಗಳಿವೆ.ಅದರ ಸದ್ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು. 
 ವೇದಿಕೆಯಲ್ಲಿ ಟಿ.ವೀರಭದ್ರಸ್ವಾಮಿ ರಂಗಸ್ವಾಮಿ, ಸೇರಿದಂತೆ  ಯೋಗ ವಿದ್ಯಾರ್ಥಿಗಳು ಹಾಗೂ ಸಹಯೋಗ ವಹಿಸಿಕೊಂಡ ಪದಾಧಿಕಾರಿಗಳು ಭಾಗವಹಿಸಿದ್ದರು. 

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply