ರಥಸಪ್ತಮಿ: 108 ಸೂರ್ಯನಮಸ್ಕಾರ…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಜಿಲ್ಲಾ ಸುದ್ದಿ ಮಂಡ್ಯ ಸಾಧನೆ

ರಥಸಪ್ತಮಿ: 108 ಸೂರ್ಯನಮಸ್ಕಾರ…

ಚಂದ್ರವಳ್ಳಿ ನ್ಯೂಸ್, ನಾಗಮಂಗಲ :
ರಥಸಪ್ತಮಿ ಹಾಗೂ 75 ಕೋಟಿ ಸೂರ್ಯನಮಸ್ಕಾರ ಅಭಿಯಾನದ ಅಂಗವಾಗಿ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಮುಂಭಾಗ ಸಾಮೂಹಿಕವಾಗಿ 108 ಸೂರ್ಯ ನಮಸ್ಕಾರಗಳ ಅಭ್ಯಾಸ ಮಾಡಲಾಯಿತು.

ಸ್ವಾಸ್ಥ್ಯ ಮಾರ್ಗ ಹಾಗೂ ಬಸವ ಪತಂಜಲಿ ಯೋಗ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಯೋಗಾಚಾರ್ಯರಾದ ಶ್ರೀಯುತ ನಾರಾಯಣಸ್ವಾಮಿ ಯವರ ನೇತೃತ್ವದಲ್ಲಿ ಬೀಜ ಮಂತ್ರಗಳ ಪಠಣದ ಜೊತೆಗೆ 108 ಸೂರ್ಯನಮಸ್ಕಾರಗಳನ್ನು ಅಭ್ಯಾಸ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಯೋಗಾಚಾರ್ಯ ಶ್ರೀಯುತ ನಾರಾಯಣಸ್ವಾಮಿ ರವರು ಸೂರ್ಯ ಸಕಲ ಜೀವರಾಶಿ ಗಳಿಗೂ ಅರೋಗ್ಯದಾಯಕ, ರಥಸಪ್ತಮಿ ದಿನದಂದು 108 ಸೂರ್ಯ ನಮಸ್ಕಾರಗಳ ಅಭ್ಯಾಸದ ಮೂಲಕ ಸೂರ್ಯನಾರಾಯಣನ ಆರಾಧನೆ ಮಾಡುವುದು ವಿಶೇಷ ಅದರಲ್ಲೂ ಮಾಘಮಾಸದ ಸಪ್ತಮಿಯಂದು ಆಚರಿಸುವ ರಥಸಪ್ತಮಿಯ ದಿನದಂದು ಮಾಡುವ ಸೂರ್ಯ ನಮಸ್ಕಾರ ಹೆಚ್ಚು ಫಲದಾಯಕ ಎಂದರು.

ತದನಂತರ ಮಾತನಾಡಿದ ಯೋಗ ಶಿಕ್ಷಕರಾದ ಲಕ್ಷ್ಮಣ್ ಜೀ ಅವರು
“ಆರೋಗ್ಯಂ ಭಾಸ್ಕರಾದಿಚ್ಚೇ ” ಎಂಬ ನಾಣ್ಣುಡಿಯಂತೆ ಸೂರ್ಯೋಪಾಸನೆಯು ಆರೋಗ್ಯದ ದೃಷ್ಟಿಯಿಂದ ಹಲವಾರು ಅನುಕೂಲತೆಗಳನ್ನು ಒಳಗೊಂಡಿದೆ, ಆದ್ದರಿಂದಲೇ ಯೋಗಾಸನದಲ್ಲಿ ಸೂರ್ಯನಮಸ್ಕಾರಕ್ಕೆ ವಿಶೇಷವಾದ ಆದ್ಯತೆ ಲಭಿಸಿದೆ.

ಭಾರತ ಸ್ವತಂತ್ರ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಹಮ್ಮಿಕೊಂಡಿದ್ದ ಸೂರ್ಯನಮಸ್ಕಾರ ಅಭಿಯಾನದಲ್ಲಿ ಈಗಾಗಲೇ ಭಾರತೀಯರು 75 ಕೋಟಿ ಸೂರ್ಯನಮಸ್ಕಾರಗಳನ್ನು ಪೋರೈಸುವ ಮೂಲಕ ವಿಶ್ವದಾಖಲೆ ನಿರ್ಮಿಸಿರುವುದು ಅತ್ಯಂತ ಸಂತೋಷದಾಯಕ, ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಸೂರ್ಯನಮಸ್ಕಾರ ಅಭ್ಯಾಸ ರೂಡಿಸಿಕೊಳ್ಳುವುದು ಉತ್ತಮ. ಸೂರ್ಯ ನಮಸ್ಕಾರ ದೈಹಿಕ ಚಾಲನೆ, ಉಸಿರಾಟ ಕ್ರಮ ಹಾಗೂ ಸೂರ್ಯೋಪಾಸನೆಯ ಸಂಯೋಜನೆ ಯಾಗಿದ್ದು ಸೂರ್ಯನಮಸ್ಕಾರದ ಅಭ್ಯಾಸದಿಂದ ದೇಹದ ಆಲಸ್ಯ, ಜಡತ್ವ ಕಳೆದು ಮೈ-ಮನಗಳು ಉಲ್ಲಾಸಗೊಳ್ಳುವುದರ ಜೊತೆಗೆ ಮನಸ್ಸಿಗೆ ಶಾಂತಿ, ಸಂಯಮ, ಏಕಾಗ್ರತೆ ಹೆಚ್ಚುತ್ತದೆ ಅಲ್ಲದೆ ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.

ಸೂರ್ಯ ನಮಸ್ಕಾರವನ್ನು ಹೆಂಗಸರು, ಗಂಡಸರು, ಮಕ್ಕಳು, ಮುದುಕರೆನ್ನದೆ ಎಲ್ಲರೂ ಅವರವರ ವಯೋಮಾನ ಮಾತ್ತು ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ನಿತ್ಯ ಪ್ರಾತಃಕಾಲ ಅಥವಾ ಸಂಜೆ ವೇಳೆ ಅಭ್ಯಾಸ ಮಾಡುವುದರಿಂದ ಸ್ವಾಸ್ಥ್ಯ ಸಂವರ್ಧನೆಯಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಯೋಗಾಚಾರ್ಯರಾದ ಶ್ರೀಯುತ ನಾರಾಯಣಸ್ವಾಮಿ ಯವರಿಗೆ ಗೌರವ ಸಮರ್ಪಿಸಲಾಯಿತು ಮತ್ತು ಸಮಿತಿಯಲ್ಲಿ ನಿರಂತರ ಯೋಗ ಪ್ರಚಾರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೋವಿಡ್ ಸಂದರ್ಭದಲ್ಲೂ ಸೋಂಕಿತರಿಗೆ ಯೋಗ ತರಬೇತಿ ನೀಡುವ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಲಕ್ಷ್ಮಣ್ ಜೀ ಅವರ ಸೇವೆಯನ್ನು ಸ್ಮರಿಸಿ ಸಮಿತಿವತಿಯಿಂದ ಸನ್ಮಾನಿಸಲಾಯಿತು.

ಮೂವತ್ತಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ಸೂರ್ಯನಮಸ್ಕಾರ ಅಭ್ಯಾಸ ದಲ್ಲಿ ಪಾಲ್ಗೊಂಡಿದ್ದರು.

ವರದಿ-ದೇವಲಾಪುರ ಜಗದೀಶ ನಾಗಮಂಗಲ

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply