ಫೆಬ್ರವರಿ 17ರಂದು ಗುರುವಾರ ದಕ್ಷಿಣಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕನ್ನಡ ನಾಡಿನ ದಕ್ಷಿಣ ಕಾಶಿಯೆಂದು ಹೆಸರಾಗಿರುವ ಹಿರಿಯೂರು ಪಟ್ಟಣದ ಶ್ರೀತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಫೆಬ್ರವರಿ 17ರಂದು ಗುರುವಾರ ಮಧ್ಯಾಹ್ನ 12 ಗಂಟೆಗೆ ಜರುಗಲಿದೆ.
ಗುರುವಾರ ಬೆಳಿಗ್ಗೆ 9.30 ಕ್ಕೆ ವೇದಾವತಿ ನದಿಯಲ್ಲಿ ಶಿವಧನಸ್ಸಿಗೆ ಗಂಗಾಸ್ನಾನ , 11 ಗಂಟೆಗೆ ಗಂಗಾಪೂಜೆ, ನಂತರ 12 ಗಂಟೆಗೆ ಸ್ವಾಮಿಯ ಬ್ರಹ್ಮರಥೋತ್ಸವ ಜರುಗಲಿದೆ. ಮತ್ತು ರಾತ್ರಿ 7 ಗಂಟೆಗೆ ಉಮಾಮಹೇಶ್ವರ, ಚಂದ್ರಮೌಳೇಶ್ವರಿ ದೇವರ ಚಿಕ್ಕ ರಥೋತ್ಸವ ನಡೆಯಲಿದೆ.
ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಇದೇ ಫೆಬ್ರವರಿ 7 ರಿಂದ ಕಂಕಣ ಕಲ್ಯಾಣೋತ್ಸವದೊಂದಿಗೆ ಪ್ರಾರಂಭಗೊಂಡಿದ್ದು, ಫೆಬ್ರವರಿ 19 ರಂದು ರಾತ್ರಿ 8 ಗಂಟೆಗೆ ಸುಮಂಗಲಿಯರಿಂದ ಕರ್ಪೂರದಾರತಿ ಕಾರ್ಯಕ್ರಮ ಜರುಗಲಿದೆ.
What’s your Reaction?
+1
+1
+1
+1
+1
+1
+1