ಎಸಿಬಿ ದಾಳಿ, ಮಹಾ ಭ್ರಷ್ಟರಾದ ಪಿಡಿಒ ಸುಷ್ಮಾರಾಣಿ ಮತ್ತು ಕಂಪ್ಯೂಟರ್ ಆಪರೇಟರ್ ಜಯಲಕ್ಷ್ಮಿ ಜೈಲು ಕಂಬಿ ಹಿಂದೆ, ನಿಟ್ಟುಸಿರು ಬಿಟ್ಟ ನಿವಾಸಿಗಳು…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ ಸಾಧನೆ

ಎಸಿಬಿ ದಾಳಿ, ಮಹಾ ಭ್ರಷ್ಟರಾದ ಪಿಡಿಒ ಸುಷ್ಮಾರಾಣಿ ಮತ್ತು ಕಂಪ್ಯೂಟರ್ ಆಪರೇಟರ್ ಜಯಲಕ್ಷ್ಮಿ ಜೈಲು ಕಂಬಿ ಹಿಂದೆ, ನಿಟ್ಟುಸಿರು ಬಿಟ್ಟ ನಿವಾಸಿಗಳು…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಎಸಿಬಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು ಗ್ರಾಮ ಪಂಚಾಯಿತಿಯ ಮಹಾ ಭ್ರಷ್ಟರಾದ ರಾಣಿಯರಿಬ್ಬರು ಜೈಲು ಕಂಬಿ ಎಣಿಸುವಂತಾಗಿದೆ.

ಚಿತ್ರದುರ್ಗ ತಾಲೂಕಿನ ಮದಕರಿಪುರ ಗ್ರಾಮ ಪಂಚಾಯತಿ ಪಿಡಿಒ ಸುಷ್ಮಾರಾಣಿ ಮತ್ತು ಕಂಪ್ಯೂಟರ್ ಆಪರೇಟರ್ ಜಯಲಕ್ಷ್ಮಿ ಇವರುಗಳು ಲಂಚ ಪಡೆಯುವ ಸಂದರ್ಭದಲ್ಲಿ ಎಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಬಂಧಿತ ಆರೋಪಿಗಳು ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು ಸುರೇಶ್ ಎಂಬ ವ್ಯಕ್ತಿ ನೀಡಿದ ದೂರು ಆಧರಿಸಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದೂರುದಾರ ಮತ್ತು ಒಂದು ವರ್ಷಗಳ ಕಾಲ ಗ್ರಾಪಂ ಕಚೇರಿಗೆ ಅಲೆದ ಸಂತ್ರಸ್ತ ವ್ಯಕ್ತಿ ಸುರೇಶ್ ತಮ್ಮ ಆಸ್ತಿಯ  ಇ-ಸ್ವತ್ತು ಮಾಡಿಕೊಡುವಂತೆ ಮನವಿ ಮಾಡಿದ್ದರೂ ಇವರಿಬ್ಬರೂ ರಾಣಿಯರು ಲಂಚಕ್ಕಾಗಿ ಸುರೇಶ್ ಅವರನ್ನು ಪೀಡಿಸಿದ್ದರು. ಹೀಗೆ ಒಂದು ವರ್ಷದಿಂದ ಅಲೆದರೂ ಇ-ಸ್ವತ್ತು ಮಾಡಿಕೊಡದೇ ಸತಾಯಿಸಿದ್ದ ಪಿಡಿಒ ಅವರ ವಿರುದ್ಧ ಬೇಸತ್ತ ಸುರೇಶ್ ಎಸಿಬಿಗೆ ದೂರು ನೀಡಿದ್ದರು.

ಎಸಿಬಿ ಡಿವೈಎಸ್​​ಪಿ ಪ್ರತಾಪ್ ರೆಡ್ಡಿ ಮತ್ತು ಸಿಪಿಐ ಪ್ರವೀಣ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಆರು ಸಾವಿರ ರೂ. ಲಂಚ ಸ್ವೀಕರಿಸುವಾಗ ಇವರಿಬ್ಬರನ್ನು ಹಿಡಿದಿದ್ದಾರೆ. ಅಲ್ಲದೆ ಮೊಬೈಲ್ ಮೂಲಕವೂ ಒಂದಿಷ್ಟು ಮಾತುಕತೆಯ ವಿವರಗಳನ್ನು ಎಸಿಬಿ ಅಧಿಕಾರಿಗಳು ಸಂಗ್ರಹ ಮಾಡಿದ್ದಾರೆ.

ಕಣ್ಣೀರ ರಾಣಿ ಅಲಿಯಾಸ್ ಸುಷ್ಮಾರಾಣಿ- ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಂತೆ ಇರುವ ಮದಕರಿ ಪುರ ಗ್ರಾಮ ಪಂಚಾಯಿತಿ ಪಿಡಿಒ ಹುದ್ದೆ ಎಂದರೆ ನಿತ್ಯ ಚಿನ್ನದ ಮೊಟ್ಟೆ ಹಿಡುವಂತಿದೆ. ಇ-ಸ್ವತ್ತು, ಕೈಗಾರಿಕೆಗಳಿಗೆ ಎನ್ ಒಸಿ, ಭೂ ಪರಿವರ್ತನೆಗೆ ಅನುಮತಿ ಸೇರಿದಂತೆ ಇತರೆ ಯಾವುದೇ ಕೆಲಸ ಕಾರ್ಯಗಳಿಗೆ ಪಿಡಿಒ ಲಕ್ಷಾಂತರ ರೂ.ಗಳ ಬೇಡಿಕೆ ಇಡುತ್ತಿದ್ದರು ಎನ್ನುವ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿದೆ. ಅಲ್ಲದೆ ಗ್ರಾಮಸ್ಥರ ಮಧ್ಯ, ಸದಸ್ಯ-ಸದಸ್ಯರ ಮಧ್ಯ ಕಿತ್ತಾಟ ಹಚ್ಚಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ ಸುಷ್ಮಾರಾಣಿ ಅವರು ಗ್ರಾಪಂ ಕಚೇರಿಗೆ ಅಲೆದು ಸುಸ್ತಾಗಿ ಒಂದಿಷ್ಟು ಬೇಸರದಿಂದ ಪಿಡಿಒ ವಿರುದ್ಧ ಮಾತನಾಡಿದರೆ ಅದನ್ನೇ ಬಂಡವಾಳ ಮಾಡಿಕೊಂಡು ಕಣ್ಣೀರಧಾರೆ ಹರಿಸುತ್ತಾ ಅನುಕಂಪ ಗಿಟ್ಟಿಸುತ್ತಿದ್ದರು. ಅಷ್ಟೇ ಅಲ್ಲದೆ ಕ್ಷೇತ್ರದ ಶಾಸಕರಿಗೂ ಕ್ಯಾರೇ ಎನ್ನುತ್ತಿರಲಿಲ್ಲ, ಪಿಡಿಒ ಒಡೆದು ಆಳುವ ನೀತಿ ಅನುಸರಿಸುತ್ತಿದ್ದು ನಿತ್ಯ ಹಣವನ್ನು ಲೂಟಿ ಮಾಡುತ್ತಿದ್ದರು ಎನ್ನುವ ಆರೋಪಗಳು ಸಾಕಷ್ಟು ಕೇಳಿ ಬಂದಿದ್ದವು. ಇ-ಸ್ವತ್ತು ಮಾಡಿಸಲು ಅಲೆದಿದ್ದು ಸುರೇಶ್ ಒಬ್ಬರೇ ಅಲ್ಲ, ಪೊಲೀಸರು ಸೇರಿದಂತೆ ಸಾರ್ವಜನಿಕರು, ಉದ್ದಿಮೆದಾರರು ಸಕಾಲದಲ್ಲಿ ಇ-ಸ್ವತ್ತು ಆಗದೆ ಸಾಕಷ್ಟು ಕಣ್ಣೀರು ಹಾಕಿದ್ದರು. ಈಗ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ.

What’s your Reaction?
+1
1
+1
2
+1
2
+1
4
+1
0
+1
0
+1
1
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply