ಹಣ್ಣು ತರಕಾರಿ ವ್ಯಾಪಾರಿಗಳಿಗೆ ಉಚಿತ ಹೈಜೆನಿಕ್ ಕಿಟ್ ವಿತರಣೆ, ಹೆಸರು ನೋಂದಾಯಿಸಲು ಮನವಿ…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಜಿಲ್ಲಾ ಸುದ್ದಿ ಸಾಧನೆ ಹಿರಿಯೂರು
ಹಣ್ಣು ತರಕಾರಿ ವ್ಯಾಪಾರಿಗಳಿಗೆ ಉಚಿತ ಹೈಜೆನಿಕ್ ಕಿಟ್ ವಿತರಣೆ, ಹೆಸರು ನೋಂದಾಯಿಸಲು ಮನವಿ…
 
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ನಗರಸಭೆಯಲ್ಲಿ ನೊಂದಾಯಿಸಿ ಪರವಾನಿಗೆ ಇರುವ ತಳ್ಳುವ ಗಾಡಿಗಳಲ್ಲಿ ಹಣ್ಣು ಮತ್ತು ತರಕಾರಿಗಳನ್ನ ಮಾರಾಟ ಮಾಡುವ ಮಾರಾಟಗಾರರಿಗೆ ಉಚಿತ ಹೈಜೆನಿಕ್ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಛೇರ್ಮನ್ ಹೆಚ್.ಎಸ್.ಸುಂದರರಾಜ್ ತಿಳಿಸಿದ್ದಾರೆ.
ನಗರದ ರೋಟರಿ ಸಭಾಭವನದಲ್ಲಿ ಇದೇ ತಿಂಗಳು 16ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಆದ್ಯತೆ ಮೇರೆಗೆ ಮೊದಲು ಬಂದ 200 ಜನ ಫಲಾನುಭವಿಗಳಿಗೆ ಮಾತ್ರ ಈ ಹೈಜನಿಕ್ ಕಿಟ್ ಗಳನ್ನು ವಿತರಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ತಳ್ಳುಗಾಡಿ ಮಾರಾಟಗಾರರು ಪಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಅರ್ಹ ಫಲಾನುಭವಿಗಳು ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾದ ನಾರಾಯಣಾಚಾರ್ ಮಾತಾ ಜ್ಯೂಯಲರ್ಸ್ ಗಾಂಧಿ ವೃತ್ತ ಹಿರಿಯೂರು ಮೊಬೈಲ್ ನಂಬರ್ 9880711103 ಇವರಲ್ಲಿ ತಮ್ಮ ಗುರುತಿನ ಪತ್ರದೊಂದಿಗೆ ಹೆಸರುಗಳನ್ನು ನೋದಾಯಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
What’s your Reaction?
+1
0
+1
0
+1
0
+1
0
+1
0
+1
0
+1
0