ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಟಿ.ಲೀಲಾವತಿ ನೇಮಕ ಆದೇಶ ರದ್ದು ಮಾಡಿದ ಆಡಳಿತ ನ್ಯಾಯ ಮಂಡಳಿ(ಕೆಎಟಿ)…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಳ್ಳಕೆರೆ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ

ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಟಿ.ಲೀಲಾವತಿ ನೇಮಕ ಆದೇಶ ರದ್ದು ಮಾಡಿದ ಆಡಳಿತ ನ್ಯಾಯ ಮಂಡಳಿ(ಕೆಎಟಿ)…

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:

ಚಳ್ಳಕೆರೆ ನಗರಸಭೆಗೆ ಪೌರಾಯುಕ್ತರಾಗಿ ನೇಮಕ ಮಾಡಿದ್ದ ಸರ್ಕಾರದ ಆದೇಶವನ್ನು ವಜಾ ಮಾಡಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಮಹತ್ವದ ಐತಿಹಾಸಿಕ ತೀರ್ಪು ನೀಡಿದೆ. 
ನ್ಯಾಯಮೂರ್ತಿ ಜಸ್ಟೀಸ್ ಬೂದಿಹಾಳ್ ಆರ್ ಡಿ ಅಧ್ಯಕ್ಷರು ಇವರಿಂದ 2022 ರ ಅರ್ಜಿ ಸಂಖ್ಯೆ 682 23, 3, 2022 ತೀರ್ಪು ಪ್ರಕಟ ಮಾಡಿದ್ದಾರೆ.
ಶ್ರೀ ಪಾಲಯ್ಯ ನಿಕಟಪೂರ್ವ ಆಯುಕ್ತರು ನಗರಸಭೆ ಚಳ್ಳಕೆರೆ ಯುವರು ಟಿ ಲೀಲಾವತಿ ಮುಖ್ಯಾಧಿಕಾರಿಯ ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ಇವರನ್ನು ಚಳ್ಳಕೆರೆ ನಗರಸಭೆಗೆ ಪೌರಾಯುಕ್ತ ರನ್ನಾಗಿ ತಮ್ಮ ಸ್ಥಾನಕ್ಕೆ ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆ ಹೊರಡಿಸಲಾಗಿದ್ದ ದಿನಾಂಕ 3 ಜನವರಿ 2022 ರ ಅಧಿಸೂಚನೆಯನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಆಡಳಿತ ಮಂಡಳಿ ಬೆಂಗಳೂರು ಇವರು ಮೊರೆಹೋಗಿದ್ದರು.
ಈ ಸಂಬಂಧ ವಾದಗಳನ್ನು ಆಲಿಸಿದ ಘನ ನ್ಯಾಯಪೀಠ ಈ ಕೆಳಕಂಡಂತೆ ಮಹತ್ವದ ತೀರ್ಪು ನೀಡಿದೆ.
ನಗರಾಭಿವೃದ್ಧಿ ಇಲಾಖೆ ದಿನಾಂಕ 3 ಜನವರಿ 2022 ರಲ್ಲಿ ಆಯುಕ್ತ ಸಿಎನ್ಸಿ ಹುದ್ದೆಗೆ ಪ್ರತಿಕ್ರಿಯಿಸಿದರು ಚಳ್ಳಕೆರೆ ನಗರಸಭೆಗೆ ಅನರ್ಹರಾಗಿದ್ದು ಅಂದರೆ ಎರಡನೇ ಪ್ರತಿವಾದಿಯಾದ ಟಿ ಲೀಲಾವತಿಯವರು ಉಸ್ತುವಾರಿಯ ವಹಿಸುವುದನ್ನು ನಿಲ್ಲಿಸಬೇಕು ಈ ಪೋಸ್ಟ್ ತಕ್ಷಣವೇ ಜಾರಿಗೆ ಬರುತ್ತದೆ ಮತ್ತು ಜಾರಿ ಮಾಲಾದ ವರದಿ ಮಾಡಬೇಕು ಎಂದು ಆದೇಶಿಸಲಾಗಿದೆ. ಐದು ದಿನಗಳಿಗೆ ಸಕ್ಷಮ ಪ್ರಾಧಿಕಾರದ ಮುಂದೆ ಶುಲ್ಕವನ್ನು ಬಿಟ್ಟುಕೊಟ್ಟ ನಂತರ ಈ ಆದೇಶದನ್ವಯ ತಾಲೂಕ್ ತಾಸಿಲ್ದಾರ್ ಅವರು ಪ್ರಭಾರ ವಹಿಸಬೇಕು. ಪರ್ಯಾಯ ವ್ಯವಸ್ಥೆಗಳನ್ನು ಮಾಡುವವರೆಗೂ ತಾತ್ಕಾಲಿಕವಾಗಿ ರಾಜ್ಯ ಸರ್ಕಾರ ಕಾನೂನು ಅನುಸಾರವಾಗಿ ದಿನಾಂಕ 23 3, 2022 ರ ಆದೇಶದಂತೆ ಒಂದು ತಿಂಗಳ ಒಳಗೆ ಬದಲಿ ವ್ಯವಸ್ಥೆ ಮಾಡಬೇಕೆಂದು ತೀರ್ಪು ನೀಡಿದೆ.
ಎದುರಾದ ಅರ್ಜಿದಾರರಾದ ಪಾಲಯ್ಯ ಹುದ್ದೆಯನ್ನು ಹೊಂದಲು ಅರ್ಹತೆಯನ್ನು ಹೊಂದಿರುವುದಿಲ್ಲ, ಆಯುಕ್ತರ ಹುದ್ದೆ ಸಿಎಂಸಿ ಚಳ್ಳಕೆರೆ ಆದ್ದರಿಂದ ಇವರ ಅರ್ಜಿಯನ್ನು ವಜಾಗೊಳಿಸುವುದಲ್ಲಿ ಯಾವುದೇ ದೌರ್ಬಲ್ಯ ಇಲ್ಲವೆಂದು ತೀರ್ಪು ನೀಡಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜಕೀಯ ಒತ್ತಡ, ಜಾತಿ ಬಲ, ಹಣ ಬಲದಿಂದ ಪ್ರಭಾವಬೀರಿ ನಗರಾಭಿವೃದ್ಧಿ ಇಲಾಖೆ ಹುದ್ದೆಗೆ ಯೋಗ್ಯತೆ ಅಲ್ಲ ದವರನ್ನು ಮತ್ತು ಅಸಮರ್ಥರನ್ನು ನೇಮಿಸುತ್ತ ಬಂದಿದ್ದು, ಈಗ ನೀಡಿರುವ ಈ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಎಚ್ಚೆತ್ತುಕೊಂಡು. ಘನ ನ್ಯಾಯಪೀಠಕ್ಕೆ ಗೌರವ ನೀಡಬೇಕಾಗಿದೆ. ಈ ಮಹತ್ವದ ಆದೇಶಕ್ಕೆ ಸರ್ಕಾರ ಮನ್ನಣೆ ನೀಡಿ, ಮುಂದಿನ ದಿನಗಳಲ್ಲಿ ಸರ್ಕಾರವೇ ರಚಿಸಿರುವ ನಿಯಮಾವಳಿಗಳಂತೆ ಪೌರಾಯುಕ್ತ ಮತ್ತು ಮುಖ್ಯಾಧಿಕಾರಿ ಹುದ್ದೆಗಳಿಗೆ ನೇಮಿಸಬೇಕೆಂದು ಹೆಸರು ಹೇಳದ ಹಿರಿಯ ಪೌರಸೇವಾ ಅಧಿಕಾರಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
1
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply