ಟೀ ಪುಡಿಯಲ್ಲಿ ಭಾರಿ ಪ್ರಮಾಣದಲ್ಲಿ ಕಲ ಬೆರಕೆ, ಆರೋಗ್ಯದ ಮೇಲೆ ದುಷ್ಪರಿಣಾಮ-ಟಾಟಾ ಕಣ್ಣನ್‍ದೇವನ್ ಎಚ್ಚರಿಕೆ…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ

ಟೀ ಪುಡಿಯಲ್ಲಿ ಭಾರಿ ಪ್ರಮಾಣದಲ್ಲಿ ಕಲ ಬೆರಕೆ, ಆರೋಗ್ಯದ ಮೇಲೆ ದುಷ್ಪರಿಣಾಮ-ಟಾಟಾ ಕಣ್ಣನ್‍ದೇವನ್ ಎಚ್ಚರಿಕೆ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ದುಷ್ಪರಿಣಾಮ ಬಗ್ಗೆ ಅರಿವು ಇದ್ದರೂ ಕಲಬೆರಕೆ ಚಹಾ ಬಳಕೆ: ಆತಂಕ
ಚಿತ್ರದುರ್ಗ: ಕಲಬೆರಕೆ ಚಹಾದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಬಗ್ಗೆ ಹೊಸ ತಲೆಮಾರಿನ ಶೇಕಡ 76ರಷ್ಟು ಮಂದಿ ಅರಿವು ಇದ್ದರೂ, ಶೇ. 65ರಷ್ಟು ಜನರು ಇನ್ನೂ ತಮ್ಮ ಮನೆಗಳಲ್ಲಿ ಬಿಡಿಬಿಡಿಯಾದ ಚಹಾಪುಡಿ ಬಳಸುತ್ತಾರೆ ಎನ್ನುವ ಆತಂಕಕಾರಿ ಅಂಶ ಟಾಟಾ ಕಣ್ಣನ್‍ದೇವನ್ ಚಹಾ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ಇಂಥ ಕಲಬೆರಕೆ ಚಹಾ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಇತ್ತೀಚೆಗೆ ನಡೆಸಿದ ‘ಕರ್ನಾಟಕ ಗುಣಮಟ್ಟದ ವಿರೋಧಾಭಾಸ’ ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ. ರಾಜ್ಯದ 7 ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು, ಮೈಸೂರು, ಬಾಗಲಕೋಟೆ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆಗಳಲ್ಲಿನ ನಾಲ್ಕು ವಿಭಿನ್ನ ಬಗೆಯ ವಯೋಮಾನದ ವರ್ಗಗಳಿಗೆ ಸೇರಿದ 2,000 ಕ್ಕೂ ಹೆಚ್ಚು ಜನರನ್ನು ಈ ಸಮೀಕ್ಷೆಗೆ ಸಂದರ್ಶಿಸಲಾಗಿದೆ.
ಕರ್ನಾಟಕದ ಹೊಸ ತಲೆಮಾರಿನವರಲ್ಲಿ ಶೇ 89ರಷ್ಟು ಜನರು ಪ್ರತಿ ದಿನ 2 ಅಥವಾ ಅದಕ್ಕಿಂತ ಹೆಚ್ಚು ಕಪ್ ಚಹಾವನ್ನು ವಾಡಿಕೆಯಂತೆ ಸೇವಿಸುತ್ತಾರೆ. ಗ್ರಾಹಕರು ಕಲಬೆರಕೆಯಿಲ್ಲದ ಚಹಾ ಸೇವನೆಯ ಆರೋಗ್ಯ ಪ್ರಯೋಜನಗಳನ್ನು ಒಪ್ಪಿಕೊಳ್ಳುತ್ತಾರೆ. ಆದಾಅಗ್ಯೂ ಬಿಡಿಯಾಗಿ ದೊರೆಯುವ ಚಹಾ ಪುಡಿಯನ್ನೇ ಹೆಚ್ಚಾಗಿ ಖರೀದಿಸುತ್ತಾರೆ ಎಂದು ಟಾಟಾ ಗ್ರಾಹಕ ಉತ್ಪನ್ನಗಳ ಲಿಮಿಟೆಡ್‍ನ ಭಾರತ ಮತ್ತು ದಕ್ಷಿಣ ಏಷ್ಯಾದ ಪ್ಯಾಕೇಜ್ಡ್ ಪಾನೀಯಗಳ ಅಧ್ಯಕ್ಷ ಪುನೀತ್ ದಾಸ್ ಮತ್ತು ಪೌಷ್ಟಿಕತಜ್ಞೆ ಕವಿತಾ ದೇವಗನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಹೊಸ ತಲೆಮಾರಿನವರಲ್ಲಿ ಕಾಲು ಭಾಗಕ್ಕಿಂತಲೂ ಹೆಚ್ಚು ಜನರಿಗೆ (ಶೇ 26ರಷ್ಟು) ಕಲಬೆರಕೆಯನ್ನು ಪರೀಕ್ಷಿಸುವ ಬಗೆ ತಿಳಿದಿಲ್ಲ. ಆದ್ದರಿಂದ ಮಾರುಕಟ್ಟೆಯಲ್ಲಿ ಬಿಡಿಬಿಡಿಯಾಗಿ ದೊರೆಯುವ ಚಹಾಪುಡಿಯು ಉತ್ತಮ ಗುಣಮಟ್ಟದ್ದಾಗಿದೆ ಎಂದೇ ಅವರು ಭಾವಿಸುತ್ತಾರೆ ಎಂದು ವಿವರಿಸಿದ್ದಾರೆ. ಕಲಬೆರಕೆ ಚಹಾವು ಸೇವಿಸುವವರ ಆರೋಗ್ಯಕ್ಕೆ ದೊಡ್ಡ ಹಾನಿ ಉಂಟು ಮಾಡುವುದರಿಂದ, ಭಾರತದ ಚಹಾ ಮಂಡಳಿಯು ಯಾವುದೇ ಬಣ್ಣಗಳ ಸೇರ್ಪಡೆಗಳಿಲ್ಲದ ಚಹಾ ಪುಡಿಯನ್ನೇ ಬಳಸಲು ಶಿಫಾರಸು ಮಾಡುತ್ತದೆ ಎಂದು ಉದಯಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply