ರಾಸಾಯನಿಕ ಬಳಸದೆ ಬಳಿ ಕೂದಲನ್ನು ಕಪ್ಪಾಗಿಸಬಹುದು…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ವಿಶೇಷ ಸುದ್ದಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಆಧುನಿಕ ಕಾಲಕ್ಕೆ ತಕ್ಕಂತೆ ಜನರ ಜೀವನ ಶೈಲಿಯಲ್ಲಿ ಬದಲಾವಣೆ, ಆಹಾರ ಪದ್ಧತಿ ಮತ್ತು ವಾಯು ಮಾಲಿನ್ಯದಿಂದಾಗಿ ಅನೇಕರಿಗೆ ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆ. ಹಾರ್ಮೋನುಗಳ ಅಸಮತೋಲನ, ಥೈರಾಯ್ಡ್ ಮತ್ತು ಕ್ಯಾನ್ಸರ್ ಚಿಕಿತ್ಸೆಯಂತಹ ವಿವಿಧ ಅಂಶಗಳಿಂದ ಅನೇಕ ಜನ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಾರೆ.

ಬಳಿ ಕೂದಲಿನ ಸಮಸ್ಯೆ ಅನುವಂಶಿಕವಾಗಿರಬಹುದು. ಬಿಳಿ ಕೂದಲಿನಿಂದ ಬಳಲುತ್ತಿರುವವರು ಯಾವುದೇ ರಾಸಾಯನಿಕ ಬಳಸದೆ ಕಡಿಮೆ ವೆಚ್ಚದಲ್ಲಿ ಬಳಿ ಕೂದಲನ್ನು ಕಪ್ಪಾಗಿಸಬಹುದು. ಇದಕ್ಕೆ ತೆಂಗಿನೆಣ್ಣೆ ಮತ್ತು ಆಮ್ಲಾ ಪೌಡರ್ ಬಳಸಬೇಕು. ಅರ್ಧ ಕಪ್ ತೆಂಗಿನ ಎಣ್ಣೆಗೆ ಎರಡು ಚಮಚ ನೆಲ್ಲಿಕಾಯಿ ಪುಡಿಯನ್ನು ಸೇರಿಸಬೇಕು ಮತ್ತು ಕಪ್ಪಾಗುವವರೆಗೆ ಸಣ್ಣ ಉರಿಯಲ್ಲಿ ಕುದಿಸಬೇಕು. ಮಿಶ್ರಣ ತಂಪಾದ ಮೇಲೆ ತಲೆಗೆ ಹಚ್ಚಿ ಸ್ನಾನ ಮಾಡಬೇಕು. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಬಿಳಿ ಕೂದಲು ಮಾಯವಾಗುತ್ತದೆ.

ಅಷ್ಟೇ ಅಲ್ಲ ಇದು ತಲೆಯ ಹೊಟ್ಟನ್ನು ತಡೆಯುತ್ತದೆ. ಕೂದಲನ್ನು ಸಿಲ್ಕಿಯಾಗಿಸುತ್ತದೆ. ಹಾನಿಗೊಳಗಾದ ಕೂದಲಿನ ಪುನರುತ್ಪಾದನೆಗೆ ಸಹಕಾರಿ ಆಗುತ್ತದೆ. ಆಮ್ಲದಲ್ಲಿರುವ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್‌ಗಳು ಮತ್ತು ಕೊಬ್ಬಿನಾಮ್ಲಗಳು ಕೂದಲಿಗೆ ಒಳ್ಳೆಯದು.

What’s your Reaction?
+1
0
+1
0
+1
2
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply