ಮೇ ಮೊದಲ ವಾರ ನಿತ್ಯ 25 ಸಾವಿರ ಕೊರೊನಾ ಕೇಸ್‌ ಪತ್ತೆ, ಸಾವು ಹೆಚ್ಚಳ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಿ-ಡಾ.ಸಿ.ಎನ್‌.ಮಂಜುನಾಥ್‌…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಬೆಂಗಳೂರು ಮೇಕ್ ಇನ್ ಇಂಡಿಯಾ

ಮೇ ಮೊದಲ ವಾರ ನಿತ್ಯ 25 ಸಾವಿರ ಕೊರೊನಾ ಕೇಸ್‌ ಪತ್ತೆ, ಸಾವು ಹೆಚ್ಚಳ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಿ-ಡಾ.ಸಿ.ಎನ್‌.ಮಂಜುನಾಥ್‌…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ವಿಶ್ವವನ್ನು ಕೊರೊನಾ ವೈರಸ್ ಬಿಟ್ಟು ಬಿಡದಂತೆ ಕಾಡುತ್ತಿದ್ದು ಸಾರ್ವಜನಿಕರು ಅತಿ ಎಚ್ಚರ ವಹಿಸುವುದು ತುಂಬಾ ಒಳ್ಳೆಯದು. ಕೊರೊನಾ ಮಹಾಮಾರಿ ಹೋಗಿದೆ ಜನರೆಲ್ಲಾ ನಿರಾಳರಾಗಿದ್ದಾರೆ. ಎಷ್ಟೋ ಜನ ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಾರೆ. ಮೇ ಮೊದಲ ವಾರದಲ್ಲೇ​ ಕೋವಿಡ್ ನಾಲ್ಕನೇ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ಇದೆ ಎಂದು ಕೊರೊನಾ ತಾಂತ್ರಿಕ ಸಮಿತಿ ಸದಸ್ಯರಾದ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದ್ದಾರೆ.

ಈ ಬಾರಿ ನಾಲ್ಕನೇ ಅಲೆಯಲ್ಲಿ ಮೊದಲ ಅಲೆಗಿಂತ ಹೆಚ್ಚೆಚ್ಚು ಸೋಂಕು ವರದಿಯಾಗಲಿದೆ. ಮೇ ಮೊದಲ ವಾರದ ವೇಳೆಗೆ ನಿತ್ಯ 25 ಸಾವಿರ ಕೊರೊನಾ  ಕೇಸ್‌ ಗಳು ವರದಿಯಾಗಲಿದೆ. ಸಾವು ಕೂಡಾ ಮೊದಲು ಅಲೆಗಿಂತ ಕಡಿಮಯಿಲ್ಲದೇ ವರದಿಯಾಗಲಿದೆ. ಹೀಗಾಗಿ ಮುನ್ನೆಚ್ಚರಿಕೆ ಅಗತ್ಯ ಎಂದು ಡಾ. ಸಿ.ಎನ್‌.ಮಂಜುನಾಥ್‌ ಎಚ್ಚರಿಸಿದ್ದಾರೆ.

ಸಾರ್ವಜನಿಕರಿಗೆ ಅಗತ್ಯವಾದ ಜಾಗೃತಿ ಮೂಡಿಸಬೇಕು ಮಾಸ್ಕ್​ ಧರಿಸುವುದು, ಎಲ್ಲಾ ಸಾರ್ವಜನಿಕ ಪ್ರದೇಶಗಳು, ಸಭೆಗಳಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
1
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply