ಕೋಟೆ ನಾಡಿನಲ್ಲಿ ಎಗ್ಗಿಲ್ಲದೆ ಮಾರಾಟವಾಗುತ್ತಿದೆ ಕಲಬೆರಕೆ ಅಡುಗೆ ಎಣ್ಣೆ…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ

ಕೋಟೆ ನಾಡಿನಲ್ಲಿ ಎಗ್ಗಿಲ್ಲದೆ ಮಾರಾಟವಾಗುತ್ತಿದೆ ಕಲಬೆರಕೆ ಅಡುಗೆ ಎಣ್ಣೆ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ ಬೆರಕೆ ಅಕ್ರಮ ಆಯಿಲ್ ದಂಧೆ ಬಂದ್ ಮಾಡಿ ದಂಧಕೋರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜೈ ಹಿಂದ್ ರಕ್ಷಣಾ ವೇದಿಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿ ಆಗ್ರಹಿಸಿದೆ. 
ಆಹಾರ ಪದಾರ್ಥಗಳ ಬೆಲೆ ಗಗನಕ್ಕೆರಿದ್ದು ಇದರಿಂದ ಸಾಮಾನ್ಯ ಜನತೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಈ ಬೆಲೆ ಏರಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಆಯಿಲ್ ದಂಧೆಕೋರರು ಪ್ರತಿಯೊಂದು ದಿನಸಿ ಪದಾರ್ಥಗಳಲ್ಲಿ ಕಲಬೆರಕೆ ಮಾಡುತ್ತಿದ್ದು, ಇದರಿಂದ ಸಾಮಾನ್ಯ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.
ಅಡುಗೆ ಆಯಿಲ್ ಬೆಲೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಚಿತ್ರದುರ್ಗದ ಹಿರಿಯೂರು ಟೋಲ್ ಸಮೀಪ ಆದಿತ್ಯ ಹೋಟೆಲ್ ಹತ್ತಿರವಿರುವ ಸರ್ದಾರಜಿ ಡಾಬಾದ ಹತ್ತಿರ ಪ್ರತಿದಿನ ರಾತ್ರಿ ೧೦ಗಂಟೆ ನಂತರ ಟ್ಯಾಂಕರ್ ಲಾರಿಯಲ್ಲಿ ಮುಂಬೈಯಿಂದ ಅತಿ ಕಡಿಮೆ ಬೆಲೆಗೆ ಜೀವನಕ್ಕೆ ಮಾರಕವಾದ ಕೆಮಿಕಲ್ ಆಯಿಲ್ ತಂದು 100 ಲೀಟರ್ ಬ್ಯಾರೆಲ್‌ಗಳಿಗೆ ತುಂಬಿ ಅದನ್ನು ಅಡುಗೆ ಎಣ್ಣೆಗೆ ಕಲಬೆರಕೆ ಮಾಡಿ ಅಕ್ರಮವಾಗಿ ಸಾಗಾಟ ಮಾಡಿ ಸರ್ಕಾರಕ್ಕೂ ಹಾಗೂ ಸಾಮಾನ್ಯ ಜನರಿಗೂ ಮೋಸ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಈ ಅಕ್ರಮ ಆಯಿಲ್ ದಂಧೆಯ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಹೋದರೂ ಸಹ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ರಮ ಆಯಿಲ್ ದಂಧೆಕೋರ ಸಮಾಜಘಾತುಕರ ಮೇಲೆ ಸೂಕ್ತ ಕಠಿಣ ಕಾನೂನು ರೀತ್ಯಾ ಕ್ರಮ ಕೈಗೊಂಡು ಕಲಬೆರಕೆ ಆಯಿಲ್ ದಂಧೆ ಮುಟ್ಟುಗೋಲು ಹಾಕಬೇಕೆಂದು ಇಲ್ಲದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಅಕ್ರಮ ಕಲಬೆರಕೆ ಆಯಿಲ್ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು  ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಹಾಗೂ ಐ.ಜಿ.ಪಿ ಸಾಹೇಬರು ಇವರುಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಸೈಯದ್ ಅಕ್ತರ್, ಜಬೀವುಲ್ಲಾ, ಚಂದ್ರಪ್ಪ, ಮಜರ್, ಮುನೀರ್, ಸಂತೋಷ್ ಇನ್ನಿತರರು ಉಪಸ್ಥಿತರಿದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply