ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಸೇರಿ ಪತ್ರಕರ್ತ, ಸಾಹಿತಿಗಳು, ಸ್ವಾಮೀಜಿಗಳಿಗೆ ಕೊಲೆ ಬೆದರಿಕೆ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಬೆಂಗಳೂರು ಮೇಕ್ ಇನ್ ಇಂಡಿಯಾ

ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಸೇರಿ ಪತ್ರಕರ್ತ, ಸಾಹಿತಿಗಳು, ಸ್ವಾಮೀಜಿಗಳಿಗೆ ಕೊಲೆ ಬೆದರಿಕೆ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಗೌರಿ ಲಂಕೇಶ್ ಸಾವು ಕಣ್ಮುಂದೆ ಇದೆ, ಇದನ್ನ ಮರೆಯುವ ಮುನ್ನವೇ ಮತ್ತೊಂದು ಕೊಲೆ ಬೆದರಿಕೆ ಪತ್ರವೊಂದು ಸಾಹಿತಿಗೆ ಬಂದಿದ್ದು ಆ ಕೊಲೆ ಬೆದರಿಕೆ ಪತ್ರದಲ್ಲಿ ರಾಜಕಾರಣಿಗಳು, ಸಾಹಿತಿಗಳು, ಸ್ವಾಮೀಜಿಗಳು, ಪತ್ರಕರ್ತರ ಹೆಸರಿವುದು ಸೋಜಿಗ ತಂದಿದೆ.

 ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಾಹಿತಿ ಕುಂ. ವೀರಭದ್ರಪ್ಪ(ಕುಂವೀ) ಸೇರಿದಂತೆ ವಿಚಾರವಂತರು, ಪ್ರಗತಿಪರ ಸಾಹಿತಿಗಳು ಸೇರಿ 61 ಮಂದಿ ಹೆಸರುಳ್ಳ ಕೊಲೆ ಬೆದರಿಕೆಯಿರುವ ಪತ್ರವನ್ನು ಕುಂ. ವೀರಭದ್ರಪ್ಪ ಅವರ ಮನೆಗೆ ಕಳುಹಿಸಲಾಗಿದೆ.

ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಸಾಹಿತಿ ಬರಗೂರು ರಾಮಚಂದ್ರ, ಬಂಜಗೆರೆ ಜಯಪ್ರಕಾಶ್‌, ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಅವರಿಗೂ ಜೀವ ಬೆದರಿಕೆ ಹಾಕಲಾಗಿದೆ. 

ಸಂವಿಧಾನ ವಿರೋಧಿ, ದೇಶ ವಿರೋಧಿ, ಹಿಂದೂ ಸಮಾಜ ಹೀಯಾಳಿಸುವ ಹೇಳಿಕೆಗಳನ್ನು ಸಾಹಿತಿಗಳು, ಪ್ರೊಫೆಸರ್‌ಗಳು, ಬುದ್ಧಿಜೀವಿಗಳು ಹಾಗೂ ನಿಮ್ಮ ದುಷ್ಟಕೂಟವು ಹೇಳಿಕೆ ಕೊಡುತ್ತಿರುವುದಲ್ಲದೆ ರಾಕ್ಷಸ ಮುಸ್ಲಿಂ ಪರ ಹೇಳಿಕೆ ನೀಡುತ್ತೀರಿ. ನೀವೆಲ್ಲ ಕ್ಷಮೆ ಕೇಳಬೇಕು. ಇಲ್ಲ ಸಾಯಲು ಸಿದ್ಧರಾಗಿ. ಜೈ ಹಿಂದೂ ರಾಷ್ಟ್ರ, ಸಹಿಷ್ಣು ಹಿಂದೂ ಎಂಬ ಒಕ್ಕಣಗಳಿರುವ ಪತ್ರ ಕುವೀಂ ಅವರ ಕೈ ಸೇರಿದೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply