ಸಿರಿಗೆರೆ ಮಠದ ಶಿವಕುಮಾರ ಶಿವಾಚಾರ್ಯ, ಸಾಣೇಹಳ್ಳಿ ಮಠದ ಪಂಡಿತರಾಧ್ಯ ಶಿವಚಾರ್ಯ ಶ್ರೀಗಳಿಬ್ಬರನ್ನು ಬದಲಾಯಿಸಲು ಮುಂದಾದ ಭಕ್ತರು…!?

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಬೆಂಗಳೂರು ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ

ಸಿರಿಗೆರೆ ಮಠದ ಶಿವಕುಮಾರ ಶಿವಾಚಾರ್ಯ, ಸಾಣೇಹಳ್ಳಿ ಮಠದ ಪಂಡಿತರಾಧ್ಯ ಶಿವಚಾರ್ಯ ಶ್ರೀಗಳಿಬ್ಬರನ್ನು  ಬದಲಾಯಿಸಲು ಮುಂದಾದ ಭಕ್ತರು…!?

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಸಿರಿಗೆರೆ ಬೃಹನ್ಮಠದ ಉತ್ತಾರಾಧಿಕಾರಿ ಆಯ್ಕೆ ಮಾಡುವ ವಿಚಾರ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ ಎನ್ನಲಾಗಿದೆ.

ಸಿರಿಗೆರೆ ಮಠದ ಡಾ.ಶ್ರೀಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು, ಶ್ರೀಪಂಡಿತರಾಧ್ಯ ಶಿವಚಾರ್ಯ ಸ್ವಾಮೀಜಿಗಳಿಬ್ಬರನ್ನು ಭಕ್ತರ ಆಶಯದಂತೆ ಬದಲಾವಣೆ ಮಾಡುವ ಅಗತ್ಯ ಇದ್ದು ಶೀಘ್ರದಲ್ಲೇ ಸಭೆ ಕರೆದು ಚರ್ಚಿಸಲಾಗುತ್ತದೆ ಎಂದು ಅಖಿಲ ಭಾರತ‌ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. 
ಬೆಂಗಳೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೀಠತ್ಯಾಗ, ಹೊಸಬರ ನೇಮಕಕ್ಕೆ ಇಬ್ಬರು ಸ್ವಾಮೀಜಿಗಳ ಮನವೊಲಿಸಲು ಶ್ರೀಗಳನ್ನು ಭೇಟಿ ಮಾಡಲಾಗುವುದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ಸಿರಿಗೆರೆ ಬೃಹನ್ಮಠದ ಉತ್ತಾರಾಧಿಕಾರಿ ಆಯ್ಕೆ ವಿಚಾರ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿ, ಸಿರಿಗೆರೆ ಬೃಹನ್ಮಠದ ಉತ್ತಾರಾಧಿಕಾರಿ ಆಯ್ಕೆ ಕುರಿತು ಬೆಂಗಳೂರಿನಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. 60 ವರ್ಷಕ್ಕೆ ಪೀಠತ್ಯಾಗ ಮಾಡಬೇಕು ಎಂಬುದು ಸಿರಿಗೆರೆ ಮಠದ ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕನಸಾಗಿತ್ತು. ಅದು ನನಸಾಗಬೇಕು. ಹಿಂದಿನ ಶಿವಕುಮಾರಸ್ವಾಮೀಜಿಗಳ ತೀರ್ಮಾನದಂತೆ ಸ್ವಾಮೀಜಿಗಳಿಗೆ 60 ವರ್ಷವಾದ ನಂತರ ಮರಿ ಸ್ವಾಮಿಗಳನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ, ಅದು ಆಗಲಿಲ್ಲ. ಇಬ್ಬರು ಸ್ವಾಮೀಜಿಗಳಿಗೆ ಈಗ 75 ವರ್ಷವಾಗಿದೆ. ಸಮಾಜದ ಶ್ರೀಮಠಗಳಿಗೆ ಮರಿ ಸ್ವಾಮಿ ಆಯ್ಕೆ ಮಾಡಬೇಕೆಂಬ ಸಂಕಲ್ಪ ಇಡೀ ಸಮಾಜ ಹಾಗೂ ಭಕ್ತರು ಹೊಂದಿದ್ದೇವೆ ಎಂದರು.

ಸಿರಿಗೆರೆ ಸ್ವಾಮೀಗಳಿಗೆ ಪತ್ರ ಬರೆಯಲಾಗಿದ್ದು ಅವರು ಸಮಯ ನಿಗದಿ ಮಾಡಿದರೆ ಸಮಾಜದ ಸಭೆ ಕರೆಯಲಾಗುತ್ತದೆ 75 ವರ್ಷ ಆದ ಕಾರಣ ಮಠಕ್ಕೆ ಮರಿ ಸ್ವಾಮಿ ನೇಮಕ ಮಾಡಲು ಸಮಾಜದ ಹಿರಿಯರು, ಗಣ್ಯರೆಲ್ಲ ಸೇರಿ ಸಭೆ ಮಾಡಿದ್ದೇವೆ. ಮರಿ ಸ್ವಾಮಿಗಳ ಆಯ್ಕೆ ಕುರಿತು ಸ್ವಾಮಿಗಳು ನಾವು ಸೇರಿ ಚರ್ಚೆ ಮಾಡುತ್ತೇವೆ. ಯಾವಾಗ ಸಭೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.

ಸಮಾಜದಲ್ಲಿ ಅಶಾಂತಿ ಮೂಡಿದ್ದು, ಶಿಷ್ಯ ಸಮುದಾಯದಲ್ಲಿ ಗೊಂದಲವಿದೆ. ಈ ಗೊಂದಲಗಳನ್ನು ಇಬ್ಬರು ಸ್ವಾಮೀಜಿಗಳು ನಿವಾರಿಸಬೇಕು. ಇಲ್ಲವಾದಲ್ಲಿ ಮಹತ್ತರ ತೀರ್ಮಾನದ ಜೊತೆಗೆ ಪ್ರತಿಭಟಿಸಲಾಗುವುದು ಎಂದು  ಸಿರಿಗೆರೆ ಶ್ರೀಗಳಿಗೆ ಸಮಾಜದ ಮುಖಂಡರು ಎಂಬ ಒಕ್ಕಣೆ ಇರುವ ಪತ್ರದಲ್ಲಿ ಎಚ್ಚರಿಸಲಾಗಿದೆ. ಭಕ್ತರ ಚಿಂತನೆಗೀಡು ಮಾಡಿರುವ ಏಕವ್ಯಕ್ತಿ ಡೀಡ್ ಅನ್ನು ರದ್ದುಗೊಳಿಸಿ ಶಿವಕುಮಾರ ಸ್ವಾಮೀಜಿಗಳ ಬೈಲಾವನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಹಿರಿಯ ಸ್ವಾಮೀಜಿ ಕಾಲದಲ್ಲಿ ಸಿರಿಗೆರೆ ಮಠ ಅದ್ಭುತವಾಗಿತ್ತು ಎಂದು ಪತ್ರದಲ್ಲಿದೆ ಎನ್ನಲಾಗಿದೆ.

ಸಿರಿಗೆರೆ, ಸಾಣೇಹಳ್ಳಿಯ ಸ್ವಾಮೀಜಿಗಳಿಬ್ಬರು ಭಕ್ತರ ಕೋರಿಕೆಯನ್ನು ಉದಾಸೀನ ಮಾಡದೇ ಶಿಷ್ಯರ ಮೇಲೆ ಕೋಪ, ತಾಪ, ಆಕ್ರೋಶ ವ್ಯಕ್ತಪಡಿಸದೇ ಶಿಷ್ಯರು ಸಮಾಜದ ಆಸ್ತಿ ಎಂದು ಪರಿಗಣಿಸಿ ಶಿಷ್ಯರ ಮನೋಭಿಲಾಷೆಯಂತೆ ನಡೆದುಕೊಳ್ಳಿರಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ. 

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply