ಹಿರಿಯೂರು ರಾಜಕೀಯ ಹೊರಗಿನವರ ಕಪಿಮುಷ್ಠಿಗೆ ಸಿಲುಕಿದೆ, ಭ್ರಷ್ಟ ವ್ಯವಸ್ಥೆಯಿಂದಾಗಿ ಅಕ್ರಮ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದ್ದು ಶಾಸಕರ ಆದಾಯ ಮೂಲವಾಗಿದೆ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ರಾಜಕೀಯ ಸಾಧನೆ ಹಿರಿಯೂರು
ಹಿರಿಯೂರು ರಾಜಕೀಯ ಹೊರಗಿನವರ ಕಪಿಮುಷ್ಠಿಗೆ ಸಿಲುಕಿದೆ, ಭ್ರಷ್ಟ ವ್ಯವಸ್ಥೆಯಿಂದಾಗಿ ಅಕ್ರಮ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದ್ದು ಶಾಸಕರ ಆದಾಯ ಮೂಲವಾಗಿದೆ…
 
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
 
ಸ್ವಾತಂತ್ರಪೂರ್ವದಲ್ಲಿ ಬ್ರಿಟಿಷರ ದುರಾಡಳಿತ  ವ್ಯವಸ್ಥೆಯ  ಬಗ್ಗೆ ಹೇಗೆ ಜನರಿಗೆ ಸ್ವಾತಂತ್ರ ಹೋರಾಟಗಾರರು ತಮ್ಮ ಹೋರಾಟದ ಮೂಲಕ ಚೈತನ್ಯ ತುಂಬಿದರು ಹಾಗೆ ಕರ್ನಾಟಕದ ಕಾಂಗ್ರೆಸ್ ,ಜೆಡಿಎಸ್ ,ಬಿಜೆಪಿ ಸರ್ಕಾರಗಳ ಪರಮನೀಚ, ಪರಮ ಭ್ರಷ್ಟ ಆಡಳಿತ ವ್ಯವಸ್ಥೆ ಹಾಗೂ ಕಮಿಷನ್ ದಂದೆಯಿಂದ ದಿಕ್ಕೆಟ್ಟಿರುವ ಈ ನಾಡಿನ  ಜನರಿಗೆ ಹೊಸ ಆಶಾಭಾವ ಮೂಡಿಸಲು, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು  ಕಳೆದ ಏಪ್ರಿಲ್ 24ರಿಂದ ರಾಜ್ಯಾದ್ಯಂತ  ಜನಚೈತನ್ಯ ಯಾತ್ರೆ ಹಮ್ಮಿಕೊಂಡಿದ್ದು ಮೇ 19 ರಂದು ಹಿರಿಯೂರನ್ನು ತಲುಪಲಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧೂ ಸ್ವಾಮಿ ತಿಳಿಸಿದರು.
ಹಿರಿಯೂರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಸ್ವಾತಂತ್ರ ಬಂದ ನಂತರ ಕೇವಲ ಎರಡು ಬಾರಿ ಬಿಟ್ಟರೆ ಸ್ಥಳೀಯ ಮುಂದಳಾತ್ವವಿಲ್ಲದೆ ಹಿರಿಯೂರು ಸೊರಗಿ ಹೋಗಿದೆ. ಬೆಂಗಳೂರು, ಬಳ್ಳಾರಿಯಿಂದ ಬರುವ ದುಡ್ಡಿನ ಕುಳಗಳು ಹಿರಿಯೂರಿನ ರಾಜಕೀಯವನ್ನು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಹೂಡಿಕೆ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ, ಹೊರಗಿನಿಂದ ಬರುವವರಿಗೆ ಸ್ಥಳೀಯ ಸಮಸ್ಯೆಗಳ ಅರಿವಿಲ್ಲ ದುಡ್ಡು ಮಾಡುವುದು  ಅಷ್ಟೆ ಅವರ ಉದ್ದೇಶವಾಗಿದೆ ಎಂದು ತಿಳಿಸಿದರು.
 
ಇಲ್ಲಿನ ಮರಳು ಮಾಫಿಯಾ, ಅಕ್ರಮ ದಂಧೆಗಳ ಜೀವನಾಡಿಯಾಗಿದೆ. ವೇದಾವತಿ, ಸುವರ್ಣಮುಖಿ ನದಿಗಳಿಂದ  ಅಕ್ರಮ ಮರಳು ತೆಗೆದು ಬೆಂಗಳೂರು ತುಮಕೂರಿಗೆ ನಿರಂತರ ಸಾಗಣೆಯಾಗುತ್ತದೆ ಅದರಿಂದ ಬರುವ ಕಮಿಷನ್ ಇಲ್ಲಿನ ಅಧಿಕಾರಿಗಳು, ಶಾಸಕರು, ಪೊಲೀಸರು, ಮಂತ್ರಿಗಳ ಅಕ್ರಮ ಸಂಪತ್ತಿನ ಮೂಲವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
 
ವಾಣಿವಿಲಾಸ ಸಾಗರಕ್ಕೆ 10 ಟಿ.ಎಮ್.ಸಿ ನೀರು ಹರಿಸಲು ಮತ್ತು ಭದ್ರಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರು ಕಳೆದ 62 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದರು ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಸ್ಥಳೀಯ ರಾಜಕೀಯ ಮುಖಂಡರು ಕೂಡ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ದೂರಿದರು.
 
ಹೈ ವೋಲ್ಟೇಜ್ ವಿದ್ಯುತ್ ಮಾರ್ಗದಲ್ಲಿ ಭೂಮಿ ನೀಡಿರುವ ರೈತರಿಗೆ ಸರ್ಕಾರ ಸರಿಯಾದ ರೀತಿಯ ಪರಿಹಾರ ನೀಡದೆ ವಂಚಿಸಿದೆ ಈ ಸರ್ಕಾರಗಳು ರೈತವಿರೋಧಿ ನೀತಿಗಳನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಖಂಡಿಸುತ್ತದೆ ಮತ್ತು ರೈತರ ಜೊತೆ ಸದಾ ನಿಲ್ಲುತ್ತದೆ ಎಂದು ತಿಳಿಸಿದರು.
 
ಧರ್ಮಪುರದ ಕೆರೆಗೆ ನೀರು ಹರಿಸುವುದಾಗಿ ಭರವಸೆ ನೀಡಿ ಅಧಿಕಾರ ಹಿಡಿದ ಎಲ್ಲ ರಾಜಕಾರಣಿಗಳು ಇದುವರೆಗೂ ಸುಳ್ಳು ಹೇಳಿ ಜನರಿಗೆ ನಂಬಿಕೆ ದ್ರೋಹ ಬಗೆದಿವೆ. ವೇದಾವತಿ,ಸುವರ್ಣಮುಖಿಯಂತಹ ನದಿಗಳು ತಾಲೂಕಿನಲ್ಲಿ ಇದ್ದರೂ ನೀರಿನ ಸಮಸ್ಯೆ ಎದುರಾಗಿದೆ. ಇದಕ್ಕೆ ಆಡಳಿತ ನಡೆಸುವವರ ಇಚ್ಚ ಶಕ್ತಿಯ ಕೊರತೆ ಕಾರಣವಾಗಿದೆ ಎಂದು ದೂರಿದರು.
ಹಿರಿಯೂರಿನ ಜನರು ಗಾಂಧಿ ವೃತ್ತದಿಂದ ತಹಶೀಲ್ದಾರ್ ಕಚೇರಿ, ಹುಳಿಯಾರ್ ರಸ್ತೆಯಲ್ಲಿ ರಸ್ತೆ ಅಗಲೀಕರಣ ಮಾಡದೆ  ಟ್ರಾಪಿಕ್ ಸಮಸ್ಯೆಯಿಂದ ಬಳಲಿದ್ದಾರೆ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸಿದ ಎಲ್ಲ ರಾಜಕಾರಣಿಗಳು ಇದಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ನಗರಸಭೆ,ತಾಸಿಲ್ದಾರ್ ಕಚೇರಿ, ನಾಡ ಕಚೇರಿ, ಗ್ರಾಮ ಪಂಚಾಯತಿಗಳಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈ ಹಿಂದೆ ಯರಬಳ್ಳಿ ಗ್ರಾಮ ಪಂಚಾಯತಿ ಸೂಪರ್ ಸೀಡ್ ಆಗಿದ್ದು ತಮಗೆಲ್ಲ ಗೊತ್ತೆ ಇದೆ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಕಚೇರಿಗಳು ಸೂಪರ್ ಸೀಡ್ ಆಗಲೂ ಅರ್ಹವಾಗಿವೆ ಎಂದರು.
 
ಇಂದು ಭ್ರಷ್ಟಾಚಾರ ಮುಗಿಲು ಮುಟ್ಟಿದೆ, JCB ಸರ್ಕಾರಗಳು ಎಲ್ಲ ಹಂತಗಳಲ್ಲೂ ಜನರನ್ನು ಸುಲಿಗೆ ಮಾಡುತ್ತಿವೆ. ರಾಜ್ಯದ ವಾರ್ಷಿಕ ಬಜೆಟ್ ಸುಮಾರು 2,65,000 ಸಾವಿರ ಕೋಟಿಯಲ್ಲಿ ಶೇ.40 ಕಮಿಷನ್ ಎಂದರೆ ಕನಿಷ್ಠ ಒಂದು ಸಾವಿರ ಕೋಟಿ ಕಿಕ್ ಬ್ಯಾಕ್ ಕಮಿಷನ್ ರಾಜ್ಯ ಸರ್ಕಾರ ಪಡೆಯುತ್ತಿದೆ. PSI ನೇಮಕಾತಿ ಹಗರಣದಲ್ಲಿ ರಾಜ್ಯ ಸರ್ಕಾರದ ಸಚಿವರೇ ನೇರವಾಗಿ ಭಾಗಿಯಾಗಿರುವುದು ಜಗತ್ ಜಾಹೀರಾಗಿದೆ, ಬಿಜೆಪಿ ಸರ್ಕಾರದ ಹಿರಿಯ ರಾಜಕಾರಣಿಯೊಬ್ಬರೆ 2500 ಕೋಟಿ ರೂ.ನೀಡಿದರೆ CM ಹುದ್ದೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ ಇಂಥ ಭ್ರಷ್ಟ ರಾಜಕಾರಣಿಗಳಿಗೆ ಅಡಳಿತ ನಡೆಸುವ ನೈತಿಕತೆ ಇದೆಯಾ ಎಂದು ಅವರು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ವಿರುದ್ದ  ವಾಗ್ದಾಳಿ ನಡೆಸಿದ ಅವರು “ಕೇಂದ್ರ ಸರ್ಕಾರ ಪ್ರಚಾರಕ್ಕೆ ನಿಂತಿದೆ. ಹೆಚ್ಚಿನ ಜಿಎಸ್ ಟಿ  ಸಂಗ್ರಹ ಮಾಡಿರುವುದೆ ತನ್ನ ಸಾಧನೆ ಎಂಬಂತೆ ಬಿಂಬಿಸಿದೆ. GST ಹೆಸರಿನಲ್ಲಿ ಸಾಮಾನ್ಯ ಜನರಿಂದ ಹೆಚ್ಚು ತೆರಿಗೆ ಸಂಗ್ರಹ ಮಾಡಿ ಜನರನ್ನು ಸುಲಿಗೆ ಮಾಡುತ್ತಿದೆ ಇದು ಬ್ರಿಟಿಷರ ತೆರಿಗೆ ಶೋಷಣೆಯನ್ನು ಮರು ಜಾರಿಗೊಳಿಸಿದೆ ತೆರಿಗೆ ಏರಿಕೆಯಿಂದ ಜನರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಖಂಡಿಸುತ್ತದೆ ಎಂದು ಅವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಚಿತ್ರದುರ್ಗ ಜಿಲ್ಲಾ  ಸಂಚಾಲಕರಾದ ಮಹೇಶ್, ಮಾರುತಿ, ಕುಮಾರ್, ಮಹೇಂದ್ರ, ವಿನಯ್ , ಸಾಮಾಜಿಕ ಹೋರಾಟಗಾರ ಹೊಳಿಯಪ್ಪ ಸಾಕ್ಯ ಮತ್ತು ನಂದನ್ ಖಂಡೇನಹಳ್ಳಿ ಹಾಜರಿದ್ದರು.
What’s your Reaction?
+1
0
+1
1
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply