ಏನಿದು ಟೊಮ್ಯಾಟೊ ಮಹಾಮಾರಿ, ಕೊರೊನಾ ಬೆನ್ನೆಲ್ಲೇ ಕಾಡುತ್ತಿರುವ ಮಹಾಮಾರಿ, ಸಾರ್ವಜನಿಕರೇ ಇರಲಿ ಎಚ್ಚರ…

ಅರೋಗ್ಯ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ತುಮಕೂರು ಮೇಕ್ ಇನ್ ಇಂಡಿಯಾ

ಏನಿದು ಟೊಮ್ಯಾಟೊ ಮಹಾಮಾರಿ, ಕೊರೊನಾ ಬೆನ್ನೆಲ್ಲೇ ಕಾಡುತ್ತಿರುವ ಮಹಾಮಾರಿ, ಸಾರ್ವಜನಿಕರೇ ಇರಲಿ ಎಚ್ಚರ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಏನಿದು ಟೊಮ್ಯಾಟೊ ಜ್ವರ, ಐದು ವರ್ಷದೊಳಗಿನ ಮಕ್ಕಳನ್ನು ಕಾಡುತ್ತಿರುವ ಮಹಾಮಾರಿ ಇದು.  ಕೊರೋನಾ ಕಡಿಮೆ ಆಯ್ತು ಎನ್ನುವಷ್ಟರಲ್ಲೇ ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ಕೊಟ್ಟಿದ್ದು, ಕೇರಳದಲ್ಲಿ ಕಂಡುಬಂದ ಟೊಮ್ಯಾಟೊ ಜ್ವರ(ಮಹಾಮಾರಿ) ಕರ್ನಾಟಕ ರಾಜ್ಯಕ್ಕೂ ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದೆ.

ಈಗಾಗಲೇ ಕೇರಳ ಗಡಿಭಾಗದ ಉಡುಪಿ ಜಿಲ್ಲೆಯಲ್ಲಿ ಟೊಮ್ಯಾಟೊ ವೈರಸ್ ಕಂಡುಬಂದಿದ್ದು, ನಾಲ್ಕು ವರ್ಷದ ಮಗುವಿಗೆ ಶಂಕಿತ ಟೊಮ್ಯಾಟೊ ಜ್ವರ ತಗುಲಿರುವ ಶಂಕೆ ವ್ಯಕ್ತವಾಗಿದೆ. ಸೋಂಕಿತ ಮಗುವನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಂಕಿತ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗದಲ್ಲಿ ನಿಗಾವಹಿಸಲಾಗಿದೆ.

ಚಿಕ್ಕ ಮಕ್ಕಳಲ್ಲಿ ಟೊಮ್ಯಾಟೊ ಜ್ವರ(ವೈರಸ್) ಕಾಣಿಸಿಕೊಂಡಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ ಅಲ್ಲದೆ ಶಂಕಿತ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಗಡಿ ಸೇರಿದಂತೆ ರಾಜ್ಯದ ಇತರೆ ಕಡೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಪ್ರಕರಣಗಳು ಕಂಡುಬಂದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0