ಮಿಂಚಿನ ಕಾರ್ಯಾಚರಣೆ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ 8 ಮಂದಿ ಆರೋಪಿಗಳ ಬಂಧಿಸಿದ ಪೊಲೀಸರು…

ಕೈಂ ನ್ಯೂಸ್ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ

ಮಿಂಚಿನ ಕಾರ್ಯಾಚರಣೆ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ 8 ಮಂದಿ ಆರೋಪಿಗಳ ಬಂಧಿಸಿದ ಪೊಲೀಸರು…

ಚಂದ್ರವಳ್ಳಿ ನ್ಯೂಸ್. ಚಿತ್ರದುರ್ಗ:

ಕಾನೂನು ಬಾಹಿರವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದ ಮತ್ತು ಗಾಂಜಾ ಸೇದುತ್ತಿದ್ದ 8 ಮಂದಿ ಆರೋಪಿಗಳನ್ನು ಗಾಂಜಾ ಸೊಪ್ಪು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಚಿತ್ರದುರ್ಗ ನಗರದ ಜಟ್ ಪಟ್ ನಗರದಿಂದ ಕುರುಬರ ಗುಡ್ಡಕ್ಕೆ ಹೋಗುವ ರಸ್ತೆಯ ಸ್ಮಶಾನದ ಮುಂಭಾಗದಲ್ಲಿ ಗಾಂಜಾ ಸೊಪ್ಪನ್ನು ಮಾರುವುದು ಮತ್ತು ಸೇದುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಸೂಚನೆ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಡಿವೈಎಸ್ಪಿ ಪಾಂಡುರಂಗ ಇವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಯೀಂಅಹಮದ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ ಪೊಲೀಸರು ಗಾಂಜಾ ಸೊಪ್ಪು ಮಾರುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. 
ಜೋಗಿಮಟ್ಟಿ ರಸ್ತೆಯ ಸೋಮಶೇಖರ್ ಯಾನೆ ಡೆಡ್ಲಿ ಸೋಮ, ಬಸವಣ್ಣನ ದೇವಸ್ಥಾನದ ಹತ್ತಿರದ  ಭರತ್ ಯಾನೆ ಬೆಣ್ಣೆ, ದಾದಾಪೀರ್ ಯಾನೆ ದಾದು, ಬಾಸ್ಕರಾ ಚಾರಿ, ದಸ್ತಗಿರಿ ತಂದೆ ನೂರುಲ್ಲಾ, ಗೌಸ್ ಪೀರ್, ಬಾಬಾ ಪಕೃದ್ದೀನ್, ಸಾತ್ವಿಕ್ ಇವರುಗಳನ್ನು ಬಂಧಿಸಿದ್ದಾರೆ.

ಸೀನ ಯಾನೆ ಜಪಾನ್ ಸೀನ, ಸೋಮಶೇಖರ್ ಯಾನೆ ಡೆಡ್ಲಿ ಸೋಮ, ಭರತ್ ಯಾನೆ ಬೆಣ್ಣೆ ಇವರುಗಳು ಆಂಧ್ರಪ್ರದೇಶದ ವಿಶಾಕ ಪಟ್ಟಣಕ್ಕೆ ಹೋಗಿ ಅಲ್ಲಿ ಗೋವಿಂದಪ್ಪ ಎಂಬುವವರ ಬಳಿ ಗಾಂಜಾ ಸೊಪ್ಪನ್ನು ಖರೀದಿಸಿಕೊಂಡು ಚಿತ್ರದುರ್ಗಕ್ಕೆ ಬಂದು ಚಿತ್ರದುರ್ಗದ ಜಟ್-ಪಟ್ ನಗರದ ಬಳಿ ಇರುವ ಸ್ಮಶಾನ, ಗುಡ್ಡ, ಜಾಲಿಗಳಲ್ಲಿ, ಅಗಳೇರಿಯ ಕೆಂಚಪ್ಪನ ಬಾವಿ ಹಾಗೂ ಗುಡ್ಡದ ಕಡೆಗಳಲ್ಲಿ ಹಾಗೂ ಇತರೆ ನಿರ್ಜನ ಪ್ರದೇಶಗಳಿಗೆ ಗ್ರಾಹಕರನ್ನು ಕರೆಯಿಸಿಕೊಂಡು ಸಣ್ಣ-ಸಣ್ಣ ಕವರ್ ಗಳಲ್ಲಿ ಗಾಂಜಾ ಸೊಪ್ಪನ್ನು ತುಂಬಿ ಗ್ರಾಹಕರಿಗೆ ೪೦೦ ರೂ.ಗಳಿಗೆ ೧ ಪ್ಯಾಕೇಟ್ ನಂತೆ ಮಾರಾಟ ಮಾಡುತ್ತಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. 80 ಸಾವಿರ ರೂ. ಮೌಲ್ಯದ 8 ಕೆ.ಜಿ ಗಾಂಜಾ ಸೊಪ್ಪು, ಆಟೋ, 2 ಸಾವಿರ ನಗದು ವಶ ಪಡಿಸಿಕೊಂಡಿದ್ದಾರೆ. 
ನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂಧಿಯವರ ಕಾರ್ಯವನ್ನು ಪೊಲೀಸ್ ಅಧೀಕ್ಷಕ ಪರಶುರಾಂ  ಶ್ಲಾಘಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ