ಪಿಎಸ್ಐ, ಸಹಾಯಕ ಪ್ರಾಧ್ಯಾಪಕ ಹುದ್ದೆ ಹಗರಣವನ್ನು ಕುರಿ, ಮೇಕೆ, ದನ ಕಾಯವವರು ಹಾಗೂ ರೈತರಿಂದ ತನಿಖೆ ನಡೆಸಿದರೆ ನಿಜಾಂಶ ಹೊರಬರಲಿದೆ-ರೈತ ಸಂಘ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ಸಾಧನೆ

ಪಿಎಸ್ಐ, ಸಹಾಯಕ ಪ್ರಾಧ್ಯಾಪಕ ಹುದ್ದೆ ಹಗರಣವನ್ನು ಕುರಿ, ಮೇಕೆ, ದನ ಕಾಯವವರು ಹಾಗೂ ರೈತರಿಂದ ತನಿಖೆ ನಡೆಸಿದರೆ ನಿಜಾಂಶ ಹೊರಬರಲಿದೆ-ರೈತ ಸಂಘ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಪಿ.ಎಸ್.ಐ.ನೇಮಕದಲ್ಲಿ ಆಗಿರುವ ಹಗರಣವನ್ನು ತನಿಖೆ ನಡೆಸಲು ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಿದೆ. ಇದರಿಂದ ಸತ್ಯಾಂಶ ಹೊರಬರುವುದಿಲ್ಲ. ಅದಕ್ಕೆ ಬದಲಾಗಿ ಕುರಿ, ಮೇಕೆ, ದನ ಕಾಯವವರು ಹಾಗೂ ರೈತರಿಂದ ತನಿಖೆ ನಡೆಸಿದರೆ ಹಗರಣದ ನಿಜಾಂಶ ಹೊರಬರುವುದರಲ್ಲಿ ಅನುಮಾನವಿಲ್ಲ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸಿದ್ದಾಪುರದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಗ್ರಾಮ ಶಾಖೆ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರ ಮಿತಿ ಮೀರಿದೆ. ಪಿ.ಎಸ್.ಐ.ಹಗರಣದಲ್ಲಿ ಒಬ್ಬೊಬ್ಬರೆ ಬಯಲಿಗೆ ಬರುತ್ತಿದ್ದಾರೆ. ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿದರೆ ಯಾವ ಪ್ರಯೋಜನವಿಲ್ಲ. ಅದಕ್ಕಾಗಿ ಕುರಿ, ಮೇಕೆ, ದನ ಕಾಯುವವರು ಹಾಗೂ ರೈತರಿಂದ ತನಿಖೆ ನಡೆಸಲಿ ಎಂದರು.
ಈ ಹಿಂದೆ ಐಮಂಗಲದಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿದ್ದ ಈಗಿನ ಜಿಲ್ಲಾ ಉಸ್ತುವಾರಿ ಮಂತ್ರಿ ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರನ್ನು ಅವಹೇಳನವಾಗಿ ಕಾಣುತ್ತಿದ್ದರು. ಈಗ ಅದೇ ರೈತರ ಹಸಿರುಶಾಲು ಹೆಗಲಿಗೆ ಹಾಕಿಕೊಂಡು ಸುತ್ತಾಡುತ್ತಿದ್ದಾರೆ. ಈಗಲಾದರೂ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಿದರೆ ಒಳ್ಳೆಯದು. ಅತಿವೃಷ್ಟಿ ಅನಾವೃಷ್ಟಿಯಿಂದ ಕಂಗಾಲಾಗಿ ಸಂಕಷ್ಟದಲ್ಲಿರುವ ರೈತರಿಗೆ ಇನ್ನು ಬೆಳೆವಿಮೆ ಪಾವತಿಯಾಗಿಲ್ಲ. ಸರ್ಕಾರ ಕೂಡಲೆ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆವಿಮೆ ಹಣ ಜಮಾ ಮಾಡಬೇಕು. ರೈತರು ತಮ್ಮ ನ್ಯಾಯುತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಮೊದಲು ಸಂಘಟಿತರಾಗಬೇಕೆಂದು ಎಚ್ಚರಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ ಅಳಗವಾಡಿ, ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ ಹಳಿಯೂರು, ಗೌರವಾಧ್ಯಕ್ಷ ಕುರುಬರಹಳ್ಳಿ ಶಿವಣ್ಣ, ತಾಲ್ಲೂಕು ಅಧ್ಯಕ್ಷ ಎಂ.ಬಸವರಾಜಪ್ಪ, ಕೋಶಾಧ್ಯಕ್ಷ ವೀರಣ್ಣ ಹೊಸಹಳ್ಳಿ, ಮೇಘರಾಜ್ ಹಳಿಯೂರು, ಮಹಿಳಾಧ್ಯಕ್ಷೆ ಕುಬೇರಮ್ಮ, ಕಲ್ಲಪ್ಪ, ಮುಜಿಬುಲ್ಲಾ, ಹೆಚ್.ಆರ್.ಮುರುಗೇಶ್, ಆರ್.ಸಿ.ಮಂಜುನಾಥ, ಎನ್.ಆರ್.ಸಿದ್ದೇಶಿ, ವೀರೇಶಿ, ಶೇಖರಪ್ಪ, ನಾಗೇಶ, ರುದ್ರಪ್ಪ ಇನ್ನು ಮೊದಲಾದವರು ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ