ಸರ್ಕಾರಿ ಬಾಲಕರ ಬಾಲಮಂದಿರದ ನಿವಾಸಿ ಯಶವಂತ್.ಕೆ ಎನ್ನುವ ಬಾಲಕ ಕಣ್ಮರೆ…

ಕೈಂ ನ್ಯೂಸ್ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ

ಸರ್ಕಾರಿ ಬಾಲಕರ ಬಾಲಮಂದಿರದ ನಿವಾಸಿ ಯಶವಂತ್.ಕೆ ಎನ್ನುವ ಬಾಲಕ ಕಣ್ಮರೆ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಸರ್ಕಾರಿ ಬಾಲಕರ ಬಾಲಮಂದಿರದ ನಿವಾಸಿ ಯಶವಂತ್.ಕೆ (14) ಎಂಬ ಬಾಲಕ ಜೂನ್ 02ರಂದು ಕಾಣೆಯಾಗಿರುವ ಪ್ರಕರಣ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾಗಿರುವ ಬಾಲಕನ ಚಹರೆ ಇಂತಿದೆ. ಕಪ್ಪು ಮೈ ಬಣ್ಣ, 4.5 ಅಡಿ ಎತ್ತರವಿದ್ದು, ಕನ್ನಡ ಮಾತನಾಡುತ್ತಾರೆ. ತಲೆಯ ಎಡ ಭಾಗದಲ್ಲಿ ಹಳೆಯ ಗಾಯದ ಗುರುತು ಇದೆ.
ಈ ಮೇಲ್ಕಂಡ ಚಹರೆಯುಳ್ಳ ಬಾಲಕನ ಬಗ್ಗೆ ಮಾಹಿತಿ ದೊರೆತ ಕೂಡಲೆ  ಅಧೀಕ್ಷಕರು ಸರ್ಕಾರಿ ಬಾಲಕರ ಬಾಲಮಂದಿರ. ಕಲಾ ಕಾಲೇಜು ಹಿಂಭಾಗ, ಜಿಲ್ಲಾ ಪಂಚಾಯತ್ ರಸ್ತೆ, ಚಿತ್ರದುರ್ಗ. ದೂರವಾಣಿ ಸಂಖ್ಯೆ: 9535677509, 9448628586, 08194-295701ಗೆ ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0