ಸಾವು ಯಾರಿಗೆ ಬರಲ್ಲ, ಹತ್ತಿರದಲ್ಲೇ ನಾಲ್ವರ ಮೇಲೆ ದೇವೇಗೌಡ ಹೋಗುತ್ತಾರೆ- ಕೆ.ಎನ್.ರಾಜಣ್ಣ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ರಾಜಕೀಯ

ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ: ಈ ದೇಶ ಕಂಡ ಕನ್ನಡಿಗ ಮಾಜಿ ಪ್ರಧಾನಿ ‌ದೇವೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ಮಾಜಿ ಶಾಸಕ ಕೆ.ಎನ್.ರಾಜಣ್ಣ ನೀಡುವ ಮೂಲಕ ಛೀಮಾರಿಗೆ ಒಳಗಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಇಬ್ಬರ ಹೆಗಲ ಮೇಲೆ ಹಾಕ್ಕೊಂಡು ಹೊಗ್ತಾವರೆ, ಹತ್ತಿರದಲ್ಲೇ ನಾಲ್ವರ ಮೇಲೆ ಹೊಗುತ್ತಾರೆ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಾವಣದಾಲ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಎನ್. ರಾಜಣ್ಣನವರೇ ಸಾವು ಯಾರಿಗೆ ಬರುವುದಿಲ್ಲ ಹೇಳಿ, ಹಿರಿಯ ಬಗ್ಗೆ ಇಷ್ಟೊಂದು ಕೀಳಾಗಿ ಹೇಳಿಕೆ ನೀಡಿದರೆ ಹೇಗೆ ಎಂದು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ದೇವೇಗೌಡರು ಇಬ್ಬರ ಮೇಲೆ ಕೈ ಹಾಕುತ್ತಾರೆ. ಭುಜದ ಮೇಲೆ ಕೈ ಹಾಕೋ ರೀತಿ ತೋರಿಸಿ ಹತ್ತಿರದಲ್ಲೇ ನಾಲ್ಕು ಜನರ ಮೇಲೆ ಹೋಗುದು ಇದೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ