ಬಿಸಿಯೂಟದ ತೊಗರಿಬೇಳೆ ಕದ್ದ ಮುಖ್ಯ ಶಿಕ್ಷಕ, ವೈರಲ್ ಆಯ್ತು ವಿಡಿಯೋ….

ಕೈಂ ನ್ಯೂಸ್ ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮಂಡ್ಯ

ಬಿಸಿಯೂಟದ ತೊಗರಿಬೇಳೆ ಕದ್ದ ಮುಖ್ಯ ಶಿಕ್ಷಕ, ವೈರಲ್ ಆಯ್ತು ವಿಡಿಯೋ….

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಬಿಸಿಯೂಟದ ತೊಗರಿಬೇಳೆ ಕದ್ದು ಆಯೋದಲ್ಲಿ ಕೊಂಡೊಯ್ಯುತ್ತಿದ್ದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನೊಬ್ಬನ ಕಳ್ಳತನದ ಕೃತ್ಯವನ್ನು ವಿಡಿಯೋ ಮಾಡಿದ್ದು ಆ ವಿಡಿಯೋ ಈಗ ವೈರಲ್ ಆಗಿದ್ದು ವಿಡಿಯೋ ಆಧರಿಸಿ ಮುಖ್ಯ ಶಿಕ್ಷಕನಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.

ಸದರಿ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾರೆಗೌಡನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಕಾಳರಾಜೇಗೌಡ ವಿರುದ್ಧ ಬೇಳೆ ಕಳ್ಳತನದ ಆರೋಪ ಕೇಳಿ ಬಂದಿದೆ.

ಮಕ್ಕಳ ಬಿಸಿಯೂಟಕ್ಕೆ ಬಳಸಬೇಕಿದ್ದ ತೊಗರಿಬೇಳೆಯನ್ನು ಕದ್ದು ಸಾಗಿಸುತ್ತಿದ್ದ ಆರೋಪದ ಮೇಲೆ ಮುಖ್ಯ ಶಿಕ್ಷಕನ ಮೇಲೆ ಶಿಕ್ಷಣ ಇಲಾಖೆಯ ಬಿಸಿಯೂಟ ವಿಭಾಗದ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.  ಶಾಲೆಯಲ್ಲಿ ಕದ್ದ ಬೇಳೆಯನ್ನು ಆಟೊವೊಂದರಲ್ಲಿ ಹಲಗೂರಿನ ಅಂಗಡಿಗೆ ಸಾಗಿಸುತ್ತಿದ್ದ ವೇಳೆ ವೇಳೆ ಸ್ಥಳೀಯರೊಬ್ಬರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದರು.

ತೊಗರಿಬೇಳೆ ಕೊಂಡೊಯ್ಯುತ್ತಿದ್ದ ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಖ್ಯ ಶಿಕ್ಷಕನಿಗೆ ನೊಟೀಸ್ ಜಾರಿ ಮಾಡಿದ್ದು ಒಂದು ಕಡೆಯಾದರೆ ವಿಡಿಯೋ ಆಧರಿಸಿ ಹಲಗೂರು ಪೊಲೀಸರಿಗೆ ಜಿಸಿಯೂಟದ ಅಧಿಕಾರಿ ದೂರು ನೀಡಿದ್ದಾರೆ. ಈಗ ಸಂಕಷ್ಟಕ್ಕೆ ಮುಖ್ಯ ಶಿಕ್ಷಕ ಸಿಲುಕಿದ್ದಾನೆ.

What’s your Reaction?
+1
0
+1
0
+1
0
+1
1
+1
0
+1
0
+1
1
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ