ಸರ್ಕಾರಿ ಶಾಲಾ ಮಕ್ಕಳಿಗೆ ಬಸ್ ಸೌಲಭ್ಯ ನೀಡಿದ ಸರ್ಕಾರ..!!

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ ಸಾಧನೆ

ಸರ್ಕಾರಿ ಶಾಲಾ ಮಕ್ಕಳಿಗೆ ಬಸ್ ಸೌಲಭ್ಯ ನೀಡಿದ ಸರ್ಕಾರ..!!

ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಸಾರಿಗೆ ವಂಚಿತ ಕುಗ್ರಾಮಗಳಿಂದ ಮತ್ತು ದೂರದ ಊರುಗಳಿಂದ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಬಸ್ ಖರೀದಿ ಮಾಡಲು ಸರ್ಕಾರದ ತೀರ್ಮಾನ ಮಾಡಿದೆ. ಸರ್ಕಾರದ ಈ ತೀರ್ಮಾನದಿಂದಾಗಿ ಸರ್ಕಾರಿ ಶಾಲಾ ಮಕ್ಕಳು ಇನ್ಮುಂದೆ ಬಸ್ ಗಳನ್ನು ಓಡಾಡುವ ಭಾಗ್ಯ ದೊರೆಯಲಿದೆ.

ಮಳೆಗಾಲ ಅದರಲ್ಲೂ ಕಾಡು-ಮೇಡುಗಳಿಂದ ಬರುತ್ತಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ, ಬಸ್ ವ್ಯವಸ್ಥೆಯನ್ನೇ ಕಾಣದಂತಹ ಕುಗ್ರಾಮಗಳ ಮಕ್ಕಳಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ.

ಸರ್ಕಾರಿ ಶಾಲೆಗಳಿಗೆ ಶಾಲಾ ಮಕ್ಕಳನ್ನು ದೂರದ ಊರುಗಳಿಂದ ಕರೆದುಕೊಂಡು ಬರೋದಕ್ಕೆ ಶಾಲಾ ವಾಹನ ಖರೀದಿ ಮಾಡಲು ರಾಜ್ಯ ಸರ್ಕಾರ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ ಯೋಜನೆ ಅನುಷ್ಠಾನ ಮಾಡಲು ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅಧಿಕೃತ ಜ್ಞಾಪನೆ ಹೊರಡಿಸಿದ್ದು, ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ 2014-ಮೇ14ಕ್ಕೆ ಸೇರ್ಪಡೆ ಮಾಡಿ ಪರಿಷ್ಕೃತ ಯೋಜನೆಯ ಮಾರ್ಗಸೂಚಿಗಳನ್ನು ಕೆಳಕಂಡ ಅಂಶಗಳೊಂದಿಗೆ ಸೇರ್ಪಡೆ ಮಾಡಿ ಡಿ.ಚಂದ್ರಶೇಖರಯ್ಯ, ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ಪ್ರದೇಶಾಭಿವೃದ್ಧಿ ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಂಖ್ಯಿಕ ಇಲಾಖೆ ಅವರು ದಿನಾಂಕ 30-06-2022ರಂದು ಆದೇಶ ಮಾಡಿ ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಮಾತ್ರ ಶಾಲಾ-ವಾಹನವನ್ನು ಮಕ್ಕಳನ್ನು ಕರೆತರುವ ಸಲುವಾಗಿ ಖರೀದಿಸಲು ತಗಲುವ ವೆಚ್ಚವನ್ನು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಭರಿಸಲು ಅವಕಾಶ ಕಲ್ಪಿಸಲು ಸೂಚನೆ ನೀಡಲಾಗಿದೆ.

ಬಸ್ ಗಳನ್ನು ಖರೀದಿಸಿದ ನಂತರ ಆಯಾಯ ಶಾಲೆಗಳಲ್ಲಿನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು (SDMC) ಶಾಲಾ ವಾಹನಕ್ಕೆ, ವಾಹನ ಚಾಲಕರ ವೇತನ ಹಾಗೂ ಪೆಟ್ರೋಲ್, ಡೀಸೆಲ್, ದುರಸ್ಥಿ ವೆಚ್ಚಗಳನ್ನು ಇತರೆ ಅನುದಾನದಡಿ ವೆಚ್ಚ ಭರಿಸುವಂತೆ ಷರತ್ತು ವಿಧಿಸಿ ಆದೇಶಿಸಲಾಗಿದೆ.

ಸರ್ಕಾರದ ಈ ಮಹತ್ವದ ತೀರ್ಮಾನದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿಯು ಹೆಚ್ಚಳವಾಗುವುದಿಲ್ಲದೆ ಸರ್ಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ಹೆಚ್ಚಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪರದಾಡುವಂತ ಪೋಷಕರು ನಿಟ್ಟುಸಿರು ಬಿಡಲಿದ್ದಾರೆ.

ಕುಗ್ರಾಮಗಳಿಗೂ ಖಾಸಗಿ ಶಿಕ್ಷಣ ಸಂಸ್ಥೆಯವರು ಬಸ್ ಗಳನ್ನು ಕಳುಹಿಸಿ ತಮ್ಮ ಶಾಲೆಗಳತ್ತ ಮಕ್ಕಳನ್ನು ಸೆಳೆಯುತ್ತಿದ್ದಕ್ಕೆ ಕಡಿವಾಣವನ್ನೂ ಹಾಕಿದಂತೆ ಆಗಲಿದೆ.

ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಸ್ ಖರೀದಿಯ ಹಣವನ್ನು ಭರಿಸಲು ಸರ್ಕಾರ ಅವಕಾಶ ಕಲ್ಪಿಸಿದರೆ ಸಾಲದು, ಈ ಯೋಜನೆಗಾಗಿಯೇ ಒಂದಿಷ್ಟು ಅನುದಾನವನ್ನು ಶಾಸಕರ ನಿಧಿಗೆ ಹೆಚ್ಚಳ ಮಾಡಬೇಕಾಗುತ್ತದೆ. ಆಗ ಸರ್ಕಾರದ ಉದ್ದೇಶ ಈಡೇರಲಿದೆ.

ರಾಜ್ಯದ ಎಲ್ಲ ಜಿಲ್ಲೆಗಳ 224 ಮಂದಿ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಯೋಜನೆಗಾಗಿ ಇಂತಿಷ್ಟು ಹಣವನ್ನು ಪ್ರತ್ಯೇಕವಾಗಿ ನೀಡುವಂತೆ ಅಥವಾ ಈಗಾಗಲೇ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸರ್ಕಾರ ನೀಡುತ್ತಿರುವ ಅನುದಾನದ ಜೊತೆಗೆ ಹೆಚ್ಚುವರಿ ಅನುದಾನ ನೀಡಿದರೆ ಮಾತ್ರ ಯೋಜನೆ ಸಫಲವಾಗಲಿದೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ