ಮಹತ್ವದ ಸಾಧನೆ ಮಾಡಿದ ಡಿಆರ್ಡಿಒ, ಮಾನವ ರಹಿತ ವಿಮಾನ ಹಾರಾಟ ಯಶಸ್ವಿ, ರಕ್ಷಣಾ ವ್ಯವಸ್ಥೆಗೆ ಅನುಕೂಲ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ನವದೆಹಲಿ ಬೆಂಗಳೂರು ಮೇಕ್ ಇನ್ ಇಂಡಿಯಾ

ಮಹತ್ವದ ಸಾಧನೆ ಮಾಡಿದ ಡಿಆರ್ಡಿಒ, ಮಾನವ ರಹಿತ ವಿಮಾನ ಹಾರಾಟ ಯಶಸ್ವಿ, ರಕ್ಷಣಾ ವ್ಯವಸ್ಥೆಗೆ ಅನುಕೂಲ…

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಟಾನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಮೊಟ್ಟಮೊದಲ ಹಾರಾಟವನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಡಿಆರ್ಡಿಒ ಸಂಸ್ಥೆಯ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಯಶಸ್ವಿಯಾಗಿ ನಡೆಸಿದೆ.

ಹಾರಾಟದ ಬಗ್ಗೆ ಮಾಹಿತಿ ನೀಡಿರುವ ನೀಡಿರುವ ಡಿಆರ್‌ಡಿಓ “ಸಂಪೂರ್ಣ ಸ್ವಾಯತ್ತ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನವು ಟೇಕ್-ಆಫ್, ವೇ ಪಾಯಿಂಟ್ ನ್ಯಾವಿಗೇಷನ್ ಮತ್ತು ಸರಳವಾದ ಟಚ್‌ಡೌನ್ ಒಳಗೊಂಡಂತೆ ಪರಿಪೂರ್ಣ ಹಾರಾಟವನ್ನು ಪ್ರದರ್ಶಿಸಿ ಯಶಸ್ವಿಯಾಗಿದೆ ಎಂದು ತಿಳಿಸಿದೆ.

ಭವಿಷ್ಯದ ಮಾನವರಹಿತ ವಿಮಾನಗಳ ಅಭಿವೃದ್ಧಿಗೆ ನಿರ್ಣಾಯಕ ತಂತ್ರಜ್ಞಾನಗಳನ್ನು ಸಾಬೀತುಪಡಿಸುವ ವಿಷಯದಲ್ಲಿ ಮತ್ತು ದೇಶಿಯ ಯುದ್ಧ ವಿಮಾನ ತಯಾರಿಗೆ ಇದು ಹೆಚ್ಚಿನ ಪ್ರಯೋಜವಾಗಲಿದೆ. ಅಷ್ಟೇ ಅಲ್ಲ ಭಾರತ ದೇಶವು ವಿಮಾನ ತಯಾರಿಕೆಯಲ್ಲಿ ಸ್ವಾವಂಲಬಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಾನವ ರಹಿತ ವಿಮಾನ ಹಾರಾಟವು ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ ಮತ್ತು ಅಂತಹ ಕಾರ್ಯತಂತ್ರದ ರಕ್ಷಣಾ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಡಿಆರ್‌ಡಿಒ ಅಡಿಯಲ್ಲಿನ ಪ್ರಮುಖ ಸಂಶೋಧನಾ ಪ್ರಯೋಗಾಲಯವಾದ ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಮಾನವರಹಿತ ಯುದ್ಧ ವಿಮಾನವು ಸಣ್ಣ, ಟರ್ಬೋಫ್ಯಾನ್ ಎಂಜಿನ್‌ನಿಂದ ಚಾಲಿತವಾಗಿದೆ ಎಂದು ನವದೆಹಲಿಯ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಸ್ಥೆ ತಿಳಿಸಿದೆ.

ವಿಮಾನದ ಏರ್‌ಫ್ರೇಮ್, ಅದರ ಅಂಡರ್‌ಕ್ಯಾರೇಜ್, ಫ್ಲೈಟ್ ಕಂಟ್ರೋಲ್‌ಗಳು ಮತ್ತು ಏವಿಯಾನಿಕ್ಸ್ ಸಿಸ್ಟಮ್ ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಆ ಸಂಸ್ಥೆ ಮಾಹಿತಿ ನೀಡಿದೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ