ದೇವೇಗೌಡರ ವಿರುದ್ಧ ಕೆ.ಎನ್.ರಾಜಣ್ಣ ನೀಡಿದ ಅವಹೇಳನ ಹೇಳಿಕೆಗೆ ಜಿಲ್ಲಾ ಒಕ್ಕಲಿಗ ಸಂಘ ಖಂಡನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಮ್ಮ ದೇಶ ಕಂಡ ಮಾಜಿ ಪ್ರದಾನ ಮಂತ್ರಿ ಕನ್ನಡ ನಾಡಿನ ಹೆಮ್ಮೆಯ ಪುತ್ರ ಈ ನೆಲದ ಒಬ್ಬ ಧೀಮಂತ ಮುತ್ಸದ್ಧಿ ಹಾಗೂ ನಮ್ಮ ಸಮಾಜದ ಹಿರಿಯ ಚೇತನ ಹೆಚ್ ಡಿ ದೇವೇಗೌಡ ಅವರ ವಯಸ್ಸಿನ ಬಗ್ಗೆ ಅಪಹಾಸ್ಯ ಮಾಡಿ ಕುಹಕ ನಗೆ ಬೀರಿದ ಮಧುಗಿರಿ ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ ಎನ್ ರಾಜಣ್ಣ ಅವರ ನಡವಳಿಕೆ ಅತ್ಯಂತ ಕುಚೋದ್ಯದಿಂದ ಕೂಡಿದ್ದು ಇದನ್ನು ಜಿಲ್ಲಾ ಒಕ್ಕಲಿಗರ ಸಂಘ ಖಂಡಿಸುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಒಕ್ಕಲಿಗರ ಸಂಘ ಅಧ್ಯಕ್ಷ ಜಿ.ಹನುಮಂತಪ್ಪ ತಿಳಿಸಿದ್ದಾರೆ.
ರಾಜಣ್ಣ ಒಬ್ಬ ಹಿರಿಯ ರಾಜಕಾರಣಿ ಅನುಭವಿ ಎಲ್ಲಕ್ಕಿಂತ ಮುಖ್ಯವಾಗಿ ದೇವೇಗೌಡರ ಕೃಪಾಶೀರ್ವಾದಿಂದಲೇ ಶಾಸಕ ರೆನಿಸಿಕೊಂಡವರು ಈ ಭೂಮಿಯ ಮೇಲೆ ಯಾರೂ ಶಾಶ್ವತವಲ್ಲ ಈ ಸಣ್ಣ ಸತ್ಯದ ಅರಿವು ಇಲ್ಲದೆ ರಾಜಣ್ಣ ತಮ್ಮ ನಾಲಿಗೆ ಹರಿಬಿಟ್ಟಿರುವುದು ನಿಜಕ್ಕೂ ಖಂಡನೀಯ ಈಗಾಗಲೇ ರಾಜಣ್ಣ ಅವರು ನಾಲಿಗೆ ಮತ್ತು ಅವರ ಹರಕು ಬಾಯಿಂದಲೇ ಸೋತರು ಎಂಬ ಜನರ ಮಾತಿದೆ ಮನುಷ್ಯ ದಿನೇ ದಿನೇ ಪಕ್ವವಾಗಬೇಕೆ ಹೊರತು ಸಣ್ಣವ ರಾಗಬಾರದು
ಅವರೇ ಹೇಳುವ ಹಾಗೆ ರಾಜಕಾರಣದಲ್ಲಿ ಯಾರು ಶತ್ರುವಲ್ಲ ಮಿತ್ರರೂ ಅಲ್ಲ ಆದರೆ ಸಂಸ್ಕಾರ ಸಂಸ್ಕೃತಿ ಅತಿ ಅವಶ್ಯ ಎಲ್ಲವನ್ನೂ ಜನ ಸೂಕ್ಷ್ಮವಾಗಿ ಗಮನಿಸುತ್ತಾರೆ ಇಂತಹ ಹೇಳಿಕೆಗಳಿಂದ ದೊಡ್ಡವರಾಗುತ್ತೇವೆ ಎಂಬ ಭ್ರಮೆ ಬೇಡ ದಯಮಾಡಿ ರಾಜಣ್ಣ ಅವರು ತತಕ್ಷಣ ದೇವೇಗೌಡರಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.