ಕೊಲೆಗೆ ಕೊಲೆ ಉತ್ತರವಾದರೆ ರಕ್ತದ ಕೋಡಿ ಹರಿಯಲಿದೆ, ಕೆಲ ಕೊಲೆಗೆಟುಕ ಮುಸಲ್ಮಾನ ಗೂಂಡಾಗಳು ಅರ್ಥ ಮಾಡಿಕೊಳ್ಳಬೇಕು..!?

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ರಾಜಕೀಯ ಸಾಧನೆ

ಕೊಲೆಗೆ ಕೊಲೆ ಉತ್ತರವಾದರೆ ರಕ್ತದ ಕೋಡಿ ಹರಿಯಲಿದೆ, ಕೆಲ ಕೊಲೆಗೆಟುಕ ಮುಸಲ್ಮಾನ ಗೂಂಡಾಗಳು ಅರ್ಥ ಮಾಡಿಕೊಳ್ಳಬೇಕು..!?

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ದಕ್ಷಿಣ ಕನ್ನಡದ ಕರಾವಳಿ ಭಾಗದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಗೆ ಕೆಲ ಕೊಲೆಗೆಟುಕ ಮುಸಲ್ಮಾನ ಗೂಂಡಾಗಳ ಮನಸ್ಥಿತಿ ಬದಲಾವಣೆಯಾಗದಿರುವುದೆ ಕಾರಣ. ಶಾಂತಿಗೆ ಹೆಸರಾಗಿರುವ ಕರ್ನಾಟಕದಲ್ಲಿ ಹಿಂದು ಕಾರ್ಯಕರ್ತರ ಕಗ್ಗೊಲೆಯಾಗುತ್ತಿರುವುದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಯಿತು. ಈಗ ಕರಾವಳಿಯಲ್ಲಿ ಮತ್ತೊಂದು ಹತ್ಯೆಯಾಗಿದೆ. ಇದು ಹೇಡಿಗಳ ದುಷ್ಕೃತ್ಯ. ಕೊಲೆಗೆ ಕೊಲೆ ಉತ್ತರವಾದರೆ ರಕ್ತದ ಕೋಡಿ ಹರಿಯಲಿದೆ, ಕೆಲ ಕೊಲೆಗೆಟುಕ ಮುಸ್ಲಿಂ ಗೂಂಡಾಗಳು ಅರ್ಥ ಮಾಡಿಕೊಂಡು ಮನಸ್ಸು ಪರಿವರ್ತನೆ ಮಾಡಿಕೊಳ್ಳಬೇಕು, ಇಲ್ಲವಾದರೆ ಹಿಂದೂಗಳನ್ನು ಕೊಲೆ ಮಾಡಿದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಈಶ್ವರಪ್ಪ ಎಚ್ಚರಿಸಿದರು.
ಬಿಜೆಪಿ.ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ರನ್ನು ಭೇಟಿಯಾಗಿದ್ದೇನೆ. ಕೊಲೆಗೆ ಕೊಲೆಯೇ ಉತ್ತರವಲ್ಲ. ಹಿಂದೂ ಸಮಾಜದ ಶಕ್ತಿಯನ್ನು ದುರಪಯೋಗಪಡಿಸಿಕೊಂಡು ಕೆಲವು ಮುಸ್ಲಿಂ ಗೂಂಡಾಗಳು ನಿರಪರಾಧಿ ಹಿಂದೂಗಳನ್ನು ಹತ್ಯೆ ಮಾಡುತ್ತಿದ್ದಾರೆ. ಮುಂದೆ ಇಂತಹ ಘಟನೆಗಳು ಮನರುಕಳಿಸದಂತೆ ನೋಡಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ಷಾ, ರಾಜ್ಯದ ಮುಖ್ಯಮಂತ್ರಿಯವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಸರ್ಕಾರ ಅಧಿಕಾರದಲ್ಲಿದ್ದರೂ ಹಿಂದೂಗಳಿಗೆ ರಕ್ಷಣೆ ನೀಡುವಲ್ಲಿ ಯಶಸ್ವಿಯಾಗಿಲ್ಲ. ಆಗಿರುವ ಕೊಲೆಗೆ ಯಾರು ಕಾರಣ ಎನ್ನುವುದನ್ನು ಪತ್ತೆಹಚ್ಚಿ ದುಃಖತಪ್ತ ಪ್ರವೀಣ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಕೊಲೆಯ ಹಿಂದೆ ರಾಷ್ಟ್ರದ್ರೋಹದ ಸಂಘಟನೆಗಳಿದೆಯೇ? ಪ್ರವೀಣ್ ನೆಟ್ಟಾರು ಕೊಲೆ ಆಗಿದ್ದಕ್ಕೆ ಕೆಲವರು ಆಕ್ರೋಶದಿಂದ ರಾಜೀನಾಮೆ ನೀಡುತ್ತಿರುವುದರಲ್ಲಿ ಅರ್ಥವಿಲ್ಲ. ಸಿಟ್ಟನ್ನು ಪಕ್ಷದ ಮೇಲೆ ತೋರಿಸಬಾರದು ಎಂದು ಹೇಳಿದರು.
ಲಕ್ಷಾಂತರ ಕಾರ್ಯಕರ್ತರು ಹಿರಿಯರು ಸೇರಿ ಪಕ್ಷ ಕಟ್ಟಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆಗೆ ಪರಿಹಾರ ಏನು ಎನ್ನುವುದನ್ನು ಹಿರಿಯರು ಚಿಂತಸುತ್ತಿದ್ದಾರೆ. ಕೆಲವು ಮುಸಲ್ಮಾನ್ ಕೊಲೆಗಡುಕರ ಮನಸ್ಥಿತಿ ಬದಲಾಗುವುದು ಕಷ್ಟ. ಕಾನೂನು ಸುವ್ಯವಸ್ಥೆ ವಿಫಲವಾಗಿದೆ. ಇನ್ನು ಮುಂದೆ ಹಿಂದೂ ಕಾರ್ಯಕರ್ತನ ಹತ್ಯೆಯಾದರೆ ನೀವುಗಳು ಉಳಿಯುವುದಿಲ್ಲ ಎನ್ನುವ ಬೆದರಿಕೆ ಮುಸಲ್ಮಾನರಲ್ಲಿ ಹುಟ್ಟುಬೇಕು. ಇಲ್ಲವೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತೆ ದಿಟ್ಟಿ ನಿಲುವು ತೆಗೆದುಕೊಳ್ಳಬೇಕು. ಹಾಗಾಗದಿದ್ದರೆ ಹಿಂದೂಗಳ ಹತ್ಯೆ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸಲ್ಮಾನ್ ಗೂಂಡಾಗಳೆ ಪ್ರವೀಣ್ ನೆಟ್ಟಾರ್‌ನನ್ನು ಹತ್ಯೆಗೈದಿರುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇವರುಗಳು ಏಕೆ ನೇರವಾಗಿ ಹೇಳುತ್ತಿಲ್ಲ. ಧ್ವಂಧ್ವ ಹೇಳಿಕೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೊಲೆಗಡುಕರ ಪರವಾಗಿ ನಿಲ್ಲುತ್ತಿತ್ತು. ಹಿಂದುತ್ವವನ್ನು ದಮನ ಮಾಡುವುದೇ ಕಾಂಗ್ರೆಸ್ ಸಂಸ್ಕೃತಿ. ಕೊಲೆ ಮಾಡಿದವರ ವಿರುದ್ದ ಕಾಂಗ್ರೆಸ್‌ನವರ ಆಕ್ರೋಶವಿರಬೇಕೆ ವಿನಃ ನಮ್ಮ ಪಕ್ಷದ ಮೇಲಲ್ಲ. ಬೆಳಗಾವಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಾನು ನಿರಪರಾಧಿಯಾಗಿ ಆರೋಪದಿಂದ ಹೊರ ಬಂದಿರುವುದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ನವರಿಗೆ ಆಗುತ್ತಿಲ್ಲ. ಅನುಮಾನವಿದ್ದರೆ ನ್ಯಾಯಾಲಯದ ಮೆಟ್ಟಿಲೇರಲಿ ಎಂದು ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.
ಮುಸಲ್ಮಾನರ ಓಲೈಕೆಯಲ್ಲಿ ತೊಡಗಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇವರ ಮೈಯಲ್ಲಿ ಹರಿಯುತ್ತಿರುವುದು ಯಾವ ರಕ್ತ ಎನ್ನುವುದನ್ನು ಮರೆತಿದ್ದಾರೆ. ಜಾತಿವಾದಿಗಳಿಗೆ ಜನ ಅಧಿಕಾರ ಕೊಡುವುದಿಲ್ಲ. ಜೆಡಿಎಸ್, ಕಾಂಗ್ರೆಸ್‌ನವರದು ಕುಟುಂಬ ರಾಜಕಾರಣ. ನಮ್ಮದು ಆಗಲ್ಲ. ಒಂದು ಕುಟುಂಬಕ್ಕೆ ಒಂದು ಸ್ಥಾನ ಎಂದು ಈಗಾಗಲೆ ಪಕ್ಷದ ಹಿರಿಯರು ಹೇಳಿದ್ದಾರೆ. ವರಿಷ್ಟರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವುಗಳು ಬದ್ದರಾಗಿದ್ದೇವೆ ಎಂದು ಹೇಳಿದರು.
ಬಿಜೆಪಿ.ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಸಿದ್ದೇಶ್‌ಯಾದವ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‌ಯಾದವ್, ಜಿಲ್ಲಾ ಕಾರ್ಯಕಾರಿಣಿ ವಿಶೇಷ ಆಹ್ವಾನಿತ ಮಲ್ಲಿಕಾರ್ಜುನ್, ಜಿಲ್ಲಾ ಕಾರ್ಯದರ್ಶಿ ಸಂಪತ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0