ಬಿಪಿಎಲ್ ಕುಟುಂಬದವರಿಗೆ ಉಚಿತ ಅನಿಲ ಸಂಪರ್ಕ ಕಲ್ಪಿಸಲಿ-ಶಾಸಕ ರಘುಮೂರ್ತಿ…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೇಕ್ ಇನ್ ಇಂಡಿಯಾ ವಿಶೇಷ ಸುದ್ದಿ ಸಾಧನೆ ಹಿರಿಯೂರು

ಬಿಪಿಎಲ್ ಕುಟುಂಬದವರಿಗೆ ಉಚಿತ ಅನಿಲ ಸಂಪರ್ಕ ಕಲ್ಪಿಸಲಿ-ಶಾಸಕ ರಘುಮೂರ್ತಿ…

ಚಂದ್ರವಳ್ಳಿ ನ್ಯೂಸ್, ಹಿರಿಯೂರು

ಕೇಂದ್ರ ಸರ್ಕಾರದ ಇಂಧನ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಉಜ್ವಲ ಭಾರತ ಯೋಜನೆಯ ಕಾರ್ಯಕ್ರಮವನ್ನು ಹಿರಿಯೂರು ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ  ಉದ್ಘಾಟಿಸಿದರು
ನಂತರ ಮಾತನಾಡಿದ ಅವರು, ಬೆಳಕು ಯೋಜನೆಯಡಿ ನೀಡುವ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಜ್ವಲ ಯೋಜನೆಯನ್ನು 2016 ರಲ್ಲಿ ಆರಂಭಿಸಿದರು. ಆರಂಭಿಕವಾಗಿ ಬಿಪಿಎಲ್ ಕುಟುಂಬದ ಐದು ಕೋಟಿ ಮಹಿಳಾ ಸದಸ್ಯರಿಗೆ ಎಲ್‌ಪಿಜಿ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿತ್ತು. ತರುವಾಯ ಈ ಯೋಜನೆಯನ್ನು 2018 ರ ಏಪ್ರಿಲ್‌ನಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಹಾಗೂ ಅರಣ್ಯವಾಸಿಗಳಂತಹ ಇನ್ನೂ ಏಳು ವರ್ಗಗಳ ಮಹಿಳಾ ಫಲಾನುಭವಿಗಳಿಗೆ ವಿಸ್ತರಿಸಲಾಯಿತು. ಅಲ್ಲದೆ, ಗುರಿಯನ್ನು ಐದು ಕೋಟಿ ಬದಲು ಎಂಟು ಕೋಟಿ LPG ಸಂಪರ್ಕಗಳಿಗೆ ಪರಿಷ್ಕರಿಸಲಾಗಿಯಿತು ಮತ್ತು ನಿಗದಿತ ಸಮಯಕ್ಕಿಂತ ಏಳು ತಿಂಗಳು ಮುಂಚಿತವಾಗಿಯೇ ಆಗಸ್ಟ್ 2019 ರಲ್ಲಿ ಆ ಗುರಿ ಸಾಧಿಸಲಾಗಿದೆ. ಇದೊಂದು ಅತ್ಯುತ್ತಮ ಯೋಜನೆ ಎಂದು ತಿಳಿಸಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಜಿಲ್ಲೆಯ ಸಾಕಷ್ಟು ಹಳ್ಳಿಗಳಲ್ಲಿ ಇನ್ನೂ ಮಹಿಳೆಯರು ಉರುವಲನ್ನೇ ಉಪಯೋಗಿಸಿ ಅಡುಗೆ ಮಾಡುತ್ತಿದ್ದಾರೆ. ಆ ಕಷ್ಟವನ್ನು ತಪ್ಪಿಸಿ, ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಪಿಜಿ ಗ್ಯಾಸ್ ಕನೆಕ್ಷನ್ ಕೊಡಬೇಕು ಅದರಲ್ಲೂ ಎಲ್ಲ ಬಡವರಿಗೆ ಉಚಿತವಾಗಿ ಸಂಪರ್ಕ ಕಲ್ಪಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಇಂಜಿನಿಯರ್ ಮುಂತಾದವರು ಉಪಸ್ಥಿತರಿದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0