ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಅಂಗವಿಕಲರ ಪಿಂಚಣಿ ಸೌಲಭ್ಯ ನೀಡಿ ಸಮಸ್ಯೆ ಮುಕ್ತ ಕ್ಷೇತ್ರ ಮಾಡಲಾಗುತ್ತದೆ-ಶಾಸಕರು…

ಚಂದ್ರವಳ್ಳಿ ನ್ಯೂಸ್ ಡೆಸ್ಕ್ ಚಿತ್ರದುರ್ಗ ಜಿಲ್ಲಾ ಸುದ್ದಿ ಮೈಸೂರು ಸಾಧನೆ

ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಅಂಗವಿಕಲರ ಪಿಂಚಣಿ ಸೌಲಭ್ಯ ನೀಡಿ ಸಮಸ್ಯೆ ಮುಕ್ತ ಕ್ಷೇತ್ರ ಮಾಡಲಾಗುತ್ತದೆ-ಶಾಸಕರು…

ಚಂದ್ರವಳ್ಳಿ ನ್ಯೂಸ್, ತಿ.ನರಸೀಪುರ:
ಸರ್ಕಾರದ ಸವಲತ್ತುಗಳಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ಸಕಾಲದಲ್ಲಿ ಅವರಿಗೆ ಸೇವೆ ಒದಗಿಸಲು ತಾಲ್ಲೂಕು ಆಡಳಿತ ಪಿಂಚಣಿ ಅದಾಲತ್ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಂ . ಅಶ್ವಿನ್ ಕುಮಾರ್ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಎದುರು ಆಯೋಜಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು , ಸರ್ಕಾರದ ಸವಲತ್ತುಗಳನ್ನು ಬಯಸಿ ಬರುವ ನಾಗರಿಕರನ್ನು ಕುಟುಂಬದ ಸದನರೆಂದು ಭಾವಿಸಬೇಕು. ಇಂತಹ ಸಹಬಾಳ್ವೆಯಿಂದ ಫಲಾನುಭವಿಗಳು ಸವಲತ್ತುಗಳಿಂದ ವಂಚಿತರಾಗಲು ಸಾಧ್ಯವಿಲ್ಲ . ಸರ್ಕಾರದ ಯೋಜನೆಗಳು ಕೂಡ ಯಶಸ್ವಿಯಾಗುತ್ತವೆ. ಈ ಮೂಲಕ ಸಮಸ್ಯೆ ಮುಕ್ತ ತಾಲೂಕ್ಕಾಗಿ ಪರಿವರ್ತನೆಗೊಳ್ಳಲಿದೆ ಎಂದರು.
ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನ ಅಂಗವಿಕಲರ ಪಿಂಚಣಿ , ಮತ್ತು ಯೋಜನೆ ಹಾಗೂ ಮೈತ್ರಿ ಯೋಜನೆ ಮುಂತಾದ ಯೋಜನೆಗಳ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿದಾಗ ಅರ್ಹ ಫಲಾನುಭವಿಗಳು ನಾಗರಿಕರು ಅಗತ್ಯ ದಾಖಲಾತಿಗಳು ಇಲ್ಲದಿದ್ದರೂ ತಾಲ್ಲೂಕು ಕಚೇರಿಗೆ ಬಂದರೆ ಬಿಪಿಎಲ್ ಕಾರ್ಡ್ , ಆಧಾರ್ ಕಾರ್ಡ್ ಇನ್ನಿತರ ಸವಲತ್ತುಗಳನ್ನು ಪಡೆಯಲು ಬೇಕಾಗುವ ಎಲ್ಲಾ ದಾಖಲೆ ಗಳನ್ನು ಒದಗಿಸಿಕೊಡಲಾಗುವುದು . ಸರ್ಕಾರದ ಸವಲ್ಲತ್ತು ಪಡೆಯಲು ಅರ್ಹತೆ ಉಳ್ಳವರು ಸವಲತ್ತುಗಳಿಂದ ವಂಚಿತ ರಾಗದಯ ಕಾರ್ಯನಿರ್ವಹಿಸುವ ಗುರಿ ಇಂದ ಒಂದು ಹಿರಿಯ ಇದರ ಸದುಪಯೋಗಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು . ಹಿರಿಯ ನಾಗರಿಕರಿಗೆ ಸಿಗಬೇಕಾದ ವಿವಿಧ ಸವಲತ್ತು ಗಳನ್ನು ಸಮರ್ಪಕವಾಗಿ ತಲುಪಿಸುತ್ತಿರುವ ತಹಸಿಲ್ದಾರ್ ಕಾರ್ಯ ವೈಖರಿಯನ್ನು ಶಾಸಕರು ಅಭಿನಂದಿಸಿದರು .

ತಹಶೀಲ್ದಾರ್ ಗೀತಾ ಮಾತನಾಡಿ ಸಾರ್ವಜನಿಕರಿಗೆ ಸವಲತ್ತುಗಳನ್ನು ಒದಗಿಸುವ ಉದ್ದೇಶದಿಂದಲೇ ಸರ್ಕಾರ ನಮ್ಮನ್ನು ನೇಮಿಸಿದೆ . ಜನರ ಸೇವೆ ಮಾಡಲು ಇದ್ದೇವೆ , ಜನರು ಅಧಿಕಾರಿಗಳ ಜೊತ ಸಹಕರಿಸಬೇಕು . ಯಾರೂ ಕೂಡ ಸರ್ಕಾರದ ಸವಲತ್ತು ಗಳಿಂದ ವಂಚಿತವಾಗಬಾರದು ಎಂದು ಹೇಳಿದರು.
ಅನಾಥರು , ನಿರ್ಗತಿಕರು ಇದ್ದರೆ ಅಂಥವರನ್ನು ನಮ್ಮ ಗಮನಕ್ಕೆ ತಂದರೆ ಅವರಿಗೆ ಅಗತ್ಯ ದೃಢೀಕರಣ ಪತ್ರ ನೀಡಿ , ಸರ್ಕಾರದ ಸವಲತ್ತುಗಳನ್ನು ಇವರಿಗೂ ಒದಗಿಸಿಕೊಡಲಾ ಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿರಸ್ತೇದಾರ್‌ ಪ್ರಭುರಾಜ್, ಬಿ.ಸಿ. ಮಹದೇವ ನಾಯಕ, ಉಪತಹಶೀಲ್ದಾರ್‌ ಸುಬ್ಬಣ್ಣ, ಆನಂದ್ , ಕುಮಾರ್, ರಾಜಸ್ಥ ನಿರೀಕ್ಷಕರಾದ ಸರ್ವೇಶ್ , ಸಿದ್ದರಾಜು , ಬಸವರಾಜು , ಗ್ರಾಮ ಲೆಕ್ಕಿಗರಾದ ಹೇಮಂತ್ , ಶ್ರೀನಿವಾಸ್ , ನಿಂಗರಾಜು , ಜಿಪಂ ಮಾಜಿ ಸದಸ್ಯ ಜೈಪಾಲ್ ಭರಣಿ , ಗ್ರಾಪಂ ಮಾಜಿ ಅಧ್ಯಕ್ಷ ರಂದುದೇವನಪುರ ರಮೇಶ್ , ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು .

What’s your Reaction?
+1
0
+1
0
+1
0
+1
0
+1
0
+1
0
+1
0